ಬಾಲಿವುಡ್ ನ ಸ್ಟಾರ್ ನಟರಲ್ಲಿ ಜಾನ್ ಅಬ್ರಾಹಂ ಕೂಡ ಒಬ್ಬರು. ಹಲವಾರು ಅಭಿಮಾನಿ ಬಳಗವನ್ನು ಸಹ ಹೊಂದಿದ್ದಾರೆ. ಅದರ ಇತ್ತೀಚಿನ ದಿನಗಳಲ್ಲಿ ಅವರಿಗೆ ಅದೃಷ್ಟ ಕೂಡಿ ಬರುತ್ತಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿದ್ದೆ. ಏಪ್ರಿಲ್ ನಲ್ಲಿ ತೆರೆ ಕಂಡ ಅಟ್ಯಾಕ್ ಸಿನಿಮಾ ಕೂಡ ಇವರಿಗೆ ಸಕ್ಸೆಸ್ ನೀಡಿರಲಿಲ್ಲ. ಇದೆಲ್ಲದರ ನಡುವೆ OTT ಬಗ್ಗೆ ಹಗುರವಾಗಿ ಮಾತನಾಡಿದ್ದು ಇದೀಗ ಟೀಕೆಗೆ ಗುರಿಯಾಗಿದ್ದಾರೆ.
ಜಾನ್ ಅಬ್ರಾಹಂ ನಟಿಸಿರುವ ‘ಏಕ್ ವಿಲನ್ ರಿಟರ್ನ್ಸ್’ ಸಿನಿಮಾ ಬಿಡುಗಡೆಗೆ ರೆಡಿ ಆಗಿದೆ. ಈ ಸಿನಿಮಾದ ಪ್ರಮೋಷನ್ ಕಾರ್ಯ ಕೂಡ ಬರದಿಂದ ಸಾಗುತ್ತಿದೆ. ತಮ್ಮ ಸಿನಿಮಾದ ಪ್ರಮೋಷನ್ ವೇಳೆ ನಟ OTT ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು ‘ಒಟಿಟಿಯಲ್ಲಿ 299 ಅಥವಾ 499 ರೂಪಾಯಿಗೆ ನಾನು ಸಿಗಲ್ಲ’ ಎಂದು ಹೇಳುವ ಮೂಲಕ ಚರ್ಚೆ ಹುಟ್ಟುಹಾಕಿದ್ದಾರೆ. ಇದರಿಂದ ಇವರು ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಇದರ ಕುರಿತು ಮಾತನಾಡಿದ ಅಬ್ರಾಹಂ ‘ನಾನು ಬಿಗ್ ಸ್ಕ್ರೀನ್ ಹೀರೋ. ಅಲ್ಲಿಯೇ ನಾನು ಕಾಣಿಸಿಕೊಳ್ಳಲು ಇಷ್ಟಪಡುತ್ತೇನೆ. ಈ ಸಂದರ್ಭದಲ್ಲಿ ನಾನು ದೊಡ್ಡ ಪರದೆಗಾಗಿಯೇ ಸಿನಿಮಾವನ್ನು ಮಾಡುತ್ತೇನೆ. ಟ್ಯಾಬ್ಲೆಟ್ನಲ್ಲಿ ಯಾರಾದರೂ ನನ್ನ ಸಿನಿಮಾ ನೋಡುತ್ತಾ ಅರ್ಧಕ್ಕೆ ನಿಲ್ಲಿಸಿ ವಾಶ್ರೂಮ್ಗೆ ಹೋದರೆ ನನಗೆ ಅವಮಾನ ಆದಂತೆ ಅನಿಸುತ್ತದೆ. 299 ಅಥವಾ 499 ರೂಪಾಯಿಗೆ ಒಟಿಟಿಯಲ್ಲಿ ಲಭ್ಯವಾಗಲು ನನಗೆ ಇಷ್ಟವಿಲ್ಲ.ಅದರಲ್ಲಿ ನನಗೆ ಸಮಸ್ಯೆ ಇದೆ’ ಎಂದು ಹೇಳಿದ್ದಾರೆ. ಇವರ ಈ ಹೇಳಿಕೆ ಹಲವಾರು ಚರ್ಚೆಗಳಿಗೆ ಕಾರಣವಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
