fbpx
ಸಮಾಚಾರ

ಚಿರು ನಟನೆಯ ಕೊನೆಯ ಸಿನಿಮಾ ರಾಜಮಾರ್ತಾಂಡ ರಿಲೀಸ್ ಡೇಟ್ ಫಿಕ್ಸ್!

ಸ್ಯಾಂಡಲ್ವುಡ್ ನ ಪ್ರತಿಭಾವಂತ ನಟರಲ್ಲಿ ಚಿರಂಜೀವಿ ಸರ್ಜಾ ಕೂಡ ಒಬ್ಬರು. ಚಿರು ನಮ್ಮನ್ನು ಅಗಲಿ ಎರಡು ವರ್ಷಗಳೇ ಕಳೆದವು. ಇದೀಗ ಅವರ ಮಗ ರಾಯನ್ ಸರ್ಜಾ ಮೂಲಕ ಅಭಿಮಾನಿಗಳು ಚಿರುವನ್ನು ನೋಡುತ್ತಿದ್ದಾರೆ. ಚಿರು ನಟನೆಯ ಕೊನೆಯ ಸಿನಿಮಾ `ರಾಜಮಾರ್ತಾಂಡ’ ಸಿನಿಮಾ ತಂಡದಿಂದ ಅಭಿಮಾನಿಗಳಿಗೆ ಸಂತಸದ ಸುದ್ದಿ ಒಂದನ್ನು ನೀಡಿದ್ದಾರೆ.

ಚಿರಂಜೀವಿ ಸರ್ಜಾ ಅಗಲಿಕೆಯ ಮುಂಚೆ ನಟಿಸಿದ ಕೊನೆಯ ಚಿತ್ರ `ರಾಜಮಾರ್ತಾಂಡ’. ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಬೆಟ್ಟದಂತ ನಿರೀಕ್ಷೆ ಇತ್ತು. ಈ ಸಿನಿಮಾದ ಪ್ರತಿಯೊಂದು ಅಪ್ಡೇಟ್ ಗಾಗಿ ಅಭಿಮಾನಿಗಳು ಬಹಳ ದಿನದಿಂದ ಕಾಯುತ್ತಿದ್ದರು. ಹೀಗಾಗಿ ಸೆಪ್ಟೆಂಬರ್ 9 ರಂದು ರಾಜಮಾರ್ತಾಂಡ ಸಿನಿಮಾ ತೆರೆ ಮೇಲೆ ಅಪ್ಪಳಿಸಲು ರೆಡಿ ಆಗಿದೆ. ಈ ಕುರಿತು ಧ್ರುವ ಸರ್ಜಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

 

 

ಈಗಾಗಲೇ ಈ ಸಿನಿಮಾದ ಟೀಸರ್ ಅನ್ನು ಇವರ ಮಗ ರಾಯನ್ ಬಿಡುಗಡೆ ಮಾಡಿದ್ದಾರೆ. ಚಿತ್ರದಲ್ಲಿ ಚಿರಂಜೀವಿಗೆ ನಾಯಕಿಯರಾಗಿ ದೀಪ್ತಿ ಸಾತಿ, ಋಷಿಕಾ ರಾಜ್ ಕಾಣಿಸಿಕೊಂಡಿದ್ದಾರೆ. ಚಿರು ಪಾತ್ರಕ್ಕಾಗಿ ಧ್ರುವ ಸರ್ಜಾ ಅವರು ಡಬ್ಬಿಂಗ್ ಮಾಡಿದ್ದಾರೆ. ಮತ್ತೊಂದು ವಿಚಾರ ಎಂದರೆ ಈ ಸಿನಿಮಾದಲ್ಲಿ ಚಿರು ಮಗ ರಾಯನ್ ಕೂಡ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top