fbpx
ಸಮಾಚಾರ

ಕಟ್ಟರ್ ಹಿಂದುತ್ವದ ಹೆಸರಿಟ್ಟುಕೊಂಡು ಕಿಡಿಗೇಡಿಯಿಂದ ಅಣ್ಣವ್ರವಿಗೆ ಅವಮಾನ: ಟ್ವೀಟ್ ವೈರಲ್

ಸೋಷಿಯಲ್ ಮೀಡಿಯಾ ಎಂಬುದು ಈವತ್ತಿಗೆ ಪರಿಧಿ ಮೀರಿ ಬೆಳೆದುಕೊಂಡಿದೆ. ಅದರಿಂದ ಅದೇನೇನು ಒಳ್ಳೆಯದ್ದಾಗುತ್ತಿದೆಯೋ… ಆದರೆ ಕೆಟ್ಟದ್ದರ ಪ್ರಮಾಣವೇ ಹೆಚ್ಚು. ಅದರಲ್ಲಿಯೂ ಫೇಸ್ ಬುಕ್, ಟ್ವಿಟರ್ ಗಳಲ್ಲಿ ಸಕಾರಾತ್ಮಕ ಅಂಶಗಳಿಗಿಂತ ನೆಗಿಟಿವಿಟಿ ಸ್ಪ್ರೆಡ್ ಮಾಡುವ ಕೊಳಕು ಜನಗಳೇ ಹೆಚ್ಚು ತುಂಬಿದ್ದಾರೆ.. ಇದರಿಂದ ಉಳಿದವರಿಗೂ ಮುಜುಗರ, ಇರಿಸು ಮುರಿಸು.. ಈ ವಿಚಾರ ಈಗ್ಯಾಕೆ ಅಂತೀರಾ? ಮುಂದೆ ಓದಿ..

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಕಿಡಿಗೇಡಿಯೊಬ್ಬ ನಟ ಸಾರ್ವಭೌಮ ‘ಡಾ.ರಾಜ್ ಕುಮಾರ್’ ಅವರಿಗೆ ಅಪಮಾನ ಮಾಡಿದ್ದಾನೆ. “MAHESH Kulkarni kattar hindu big fan of modiji’ ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರನೊಬ್ಬ ಡಾ. ರಾಜ್ ಅವರ ಬಗ್ಗೆ ಏಕವಚನದಲ್ಲಿ ತುಚ್ಛವಾಗಿ ಟ್ವೀಟ್ ಮಾಡಿದ್ದಾನೆ.. ಈ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ..

ಏನಿದು ವಿವಾದ:
ಎಲ್ಲರಿಗೂ ಗೊತ್ತಿರುವ ಹಾಗೆ ಅಣ್ಣಾವ್ರು ಯೋಗ ಮಾಡುವುದರಲ್ಲಿ ನಿಸ್ಸೀಮರು.. ಯೋಗಕ್ಕೂ ಅಣ್ಣಾವ್ರಿಗೂ ಅವಿನಾಭಾವ ಸಂಭಂದವಿದೆ ಎಂದರೆ ತಪ್ಪಾಗುವುದಿಲ್ಲ. ಡಾ.ರಾಜ್ ಕುಮಾರ್ ಅವರು ‘ಯೋಗ’ವನ್ನ ಹವ್ಯಾಸದ ಜೊತೆಗೆ, ಜೀವನದ ಒಂದು ಭಾಗವಾಗಿಸಿಕೊಂಡಿದ್ದರು.. ಮೊನ್ನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ದಿನದಂದು ಕನ್ನಡದ ಖ್ಯಾತ ಸುದ್ದಿವಾಹಿನಿಯೊಂದು ಅಣ್ಣಾವ್ರ ಯೋಗಾಭ್ಯಾಸದ ಕುರಿತಾದ ಲೇಖನವನ್ನು ಪ್ರಕಟಿಸಿತ್ತು.. ಈ ಲೇಖನದ ಪೋಸ್ಟ್ ಕಾಮೆಂಟ್ ಬಾಕ್ಸ್ ನಲ್ಲಿ “MAHESH Kulkarni kattar hindu big fan of modiji’ ಎಂಬ ಹೆಸರಿನ ಕಿಡಿಗೇಡಿಯೊಬ್ಬ ವಿಕೃತಿ ಮೆರೆದಿದ್ದಾನೆ.

 

 

“ಇಷ್ಟೇಲ್ಲಾ ಯೋಗ ಮಾಡಿದವನು ಹೇಗೆ ಬೇಗ ಸತ್ತ” ಎಂದು ಏಕವಚನದಲ್ಲಿ ಕೀಳು ಮಟ್ಟದಲ್ಲಿ ಟ್ವೀಟ್ ಮಾಡಿ ವಿಕೃತಿ ಮೆರೆದಿದ್ದಾನೆ.. ಈ ಕೆಲಸಿಲ್ಲದ ಕಿಡಿಗೇಡಿಯ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಣ್ಣಾವ್ರ ಅಭಿಮಾನಿಗಳು ಸೇರಿದಂತೆ ಇಡೀ ಕನ್ನಡಿಗರು ಈ ಕಿಡಿಗೇಡಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

 

 

ಅಭಿಮಾನಿಗಳನ್ನೇ ದೇವರು ಅಂತ ಕರೆದ ಕಲಾ ಹೃದಯ ಸಾಮ್ರಾಟ ಡಾ. ರಾಜ್ ಕುಮಾರ್ ಎಂದೆದಿಗೂ ಅಭಿಮಾನಿಗಳ ಹೃದಯದಲ್ಲಿ ಸದಾ ಅಮರ. ಕನ್ನಡ ಅಂದರೇನೇ ರಾಜಕುಮಾರ್ ರಾಜಕುಮಾರ್ ಅಂದರೇನೇ ಕನ್ನಡ ಎನ್ನುವ ನಂಬಿಕೆ ಕನ್ನಡಿಗರಲ್ಲಿದೆ.. ಹೀಗಿರುವಾಗ ಅಂತ ಮಹಾನ್ ವ್ಯಕ್ತಿಯನ್ನು ಏಕವಚನದಲ್ಲಿ, ಕೀಳು ಮಟ್ಟದ ಭಾಷೆಯ ಮೂಲಕ ಅವಮಾನ ಮಾಡಿದ ಕಿಡಿಗೇಡಿಯನ್ನು ಸುಮ್ಮನೆ ಬಿಡಬಾರದು, ಕಾನೂನುನಿನ ಮೂಲಕ ಬುದ್ದಿ ಕಲಿಸಬೇಕು. ಈಗ ಸುಮ್ಮನಾದರೆ ಇಂತ ಸಂತತಿಗಳು ಮುಂದೆ ಮತ್ತಷ್ಟು ಹೆಚ್ಚಾಗುವ ಭಯಾನಕ ಸಾಧ್ಯತೆಗಳಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top