ಮದುವೆ ಎಂಬುದು ಪ್ರತಿಯೊಬ್ಬ ಗಂಡು ಹೆಣ್ಣಿನ ಜೀವನದಲ್ಲಿ ಅತಿ ಮುಖ್ಯವಾದ ಅಂಶ. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆಗಳಲ್ಲಿಯೂ ಸಹ ಹಲವಾರು ಬದಲಾವಣೆಗಳನ್ನು ನೋಡುತ್ತಿದ್ದೇವೆ. ಕೆಲವರು ಮಹಿಳೆ ಮಹಿಳೆಯರೇ ಮದುವೆ ಆಗುತ್ತಾರೆ, ಇನ್ನು ಕೇವಲ ಪುರುಷರೇ ಮದುವೆಯಾಗುತ್ತಾರೆ. ಇನ್ನು ಕೆಲವರು ಸಲಿಂಗ ವಿವಾಹ ಕೂಡ ಆಗುತ್ತಾರೆ. ಆದರೆ ಇದಕ್ಕೆಲ್ಲಾ ಮೀರಿ ಇದೀಗ ಮತ್ತೊಂದು ವಿವಾಹವು ಎಲ್ಲಾ ಕಡೆ ಬಹಳಷ್ಟು ಅಚ್ಚರಿಯನ್ನು ಉಂಟುಮಾಡಿದೆ.
ತನ್ನ ಜೊತೆಗೆ ಡಾನ್ಸ್ ಮಾಡಲು ಯಾರು ಬರುವುದಿಲ್ಲ ಎಂದು ಮೆರಿವೊನ್ ರೋಚಾ ಮೊರೇಸ್ ತನ್ನ ತಾಯಿಯ ಬಳಿ ಹೇಳಿದಳು. ಮಗಳ ನೋವಿಗೆ ಸ್ಪಂದಿಸಿದ ತಾಯಿ ಆಕೆಗೆ ಒಂದು ಪುರುಷ ಗೊಂಬೆಯನ್ನು ಮಾಡಿಕೊಟ್ಟರು. ಇದಕ್ಕೆ ಮಾರ್ಸೆಲೊ ಎಂದು ಹೆಸರು ಇಡಲಾಗುತ್ತದೆ. ಈ ಗೊಂಬೆಯೊಂದಿಗೆ ಮಗಳಿಗೆ ಪ್ರೀತಿ ಉಂಟಾಗಿ ಅದರ ಜೊತೆ ಮದುವೆ ಆಗಲು ಇಚ್ಚಿಸಿ ವಿವಾಹ ಕೂಡ ಆಗುತ್ತಾಳೆ. ಅಚ್ಚರಿಯ ವಿಷಯವೆಂದರೆ ಇದೀಗ ಇವರಿಗೆ ಒಂದು ಮಗು ಕೂಡ ಜನಿಸಿದೆ.
250 ಅತಿಥಿಗಳು ಭಾಗವಹಿಸಿದ್ದ ಸುಂದರ ಸಮಾರಂಭದಲ್ಲಿ ದಂಪತಿಗಳು ವಿವಾಹವಾದರು. ಇದು ನನಗೆ ಅದ್ಭುತವಾದ ದಿನ, ಬಹಳ ಮುಖ್ಯ, ತುಂಬಾ ಭಾವನಾತ್ಮಕವಾಗಿದೆ. ಅವನು ನನ್ನ ಜೀವನದಲ್ಲಿ ನಾನು ಯಾವಾಗಲೂ ಬಯಸಿದ ವ್ಯಕ್ತಿ. ಅವನೊಂದಿಗೆ ವೈವಾಹಿಕ ಜೀವನ ಅದ್ಭುತವಾಗಿದೆ. ಅವನು ನನ್ನೊಂದಿಗೆ ಜಗಳವಾಡುವುದಿಲ್ಲ, ವಾದ ಮಾಡುವುದಿಲ್ಲ ಮತ್ತು ನನ್ನ ಎಲ್ಲಾ ಭಾವನೆಯನ್ನು ಅರ್ಥಮಾಡಿಕೊಳ್ಳುತ್ತಾನೆ ಎಂದು ಮೆರಿವೊನ್ ಹೇಳುತ್ತಾರೆ.
ದಂಪತಿಗಳು ಮೇ 21 ರಂದು ತಮ್ಮ ಗೊಂಬೆ-ಮಗು ಮಾರ್ಸೆಲಿನ್ಹೋ ಅವರನ್ನು ಸ್ವಾಗತಿಸಿದರು. ಮೈರಿವೊನ್ ಅವರು 200 ಜನರ ಪ್ರೇಕ್ಷಕರಿಗೆ ಲೈವ್-ಸ್ಟ್ರೀಮ್ ಮಾಡುವಾಗ ವೈದ್ಯರು ಮತ್ತು ನರ್ಸ್ ಸಮ್ಮುಖದಲ್ಲಿ ಮನೆಯಲ್ಲಿ ಕೇವಲ 35 ನಿಮಿಷಗಳಲ್ಲಿ ಜನ್ಮ ನೀಡಿದರು ನನ್ನದು ನಿಜವಾದ ಕುಟುಂಬ, ಜನರು ಇದನ್ನು ನಕಲಿ ಎನ್ನುವುದನ್ನು ನಾನು ಇಷ್ಟಪಡುವುದಿಲ್ಲ ಎಂದು ಮೆರಿವೊನ್ ಹೇಳುತ್ತಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
