fbpx
ಸಮಾಚಾರ

ಕ್ರಿಕೆಟ್​ನಲ್ಲೊಂದು ಅಸಹ್ಯ ಘಟನೆ: ರನೌಟ್ ಮಾಡಿದ್ದಕ್ಕೆ ಮಧ್ಯದ ಬೆರಳು ತೋರಿಸಿದ CSK ಆಟಗಾರ

ತಮಿಳುನಾಡು ಪ್ರೀಮಿಯರ್ ಲೀಗ್‌ನ ಆರನೇ ಆವೃತ್ತಿ ಜೂನ್ 23ರಿಂದ ಆರಂಭವಾಗಿದ್ದು, ಈ ಟೂರ್ನಿಯಲ್ಲಿ 8 ತಂಡಗಳು ಭಾಗವಹಿಸಿವೆ. ಒಟ್ಟು 32 ಪಂದ್ಯಗಳು ನಡೆಯಲಿವೆ. ಈ ಟೂರ್ನಿಯ ನೆನ್ನೆಯ ಪಂದ್ಯದಲ್ಲಿ ಅಸಹ್ಯಕರ ಘಟನೆಯೊಂದು ನಡೆದಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಏನದು ಅಂತೀರಾ? ಮುಂದೆ ಓದಿ

ಚೆಪಾಕ್ ಸೂಪರ್ ಗಿಲ್ಲೀಸ್ ಮತ್ತು ನೆಲ್ಲೈ ರಾಯಲ್ ಕಿಂಗ್ಸ್ ನಡುವಿನ ತಮಿಳುನಾಡು ಪ್ರೀಮಿಯರ್ ಲೀಗ್ 2022ರ ಆರಂಭಿಕ ಪಂದ್ಯವು ರೋಮಾಂಚಕ ಸ್ಪರ್ಧೆಯಿಂದ ಕೂಡಿತ್ತು. ಈ ಪಂದ್ಯದಲ್ಲಿ ತಮಿಳುನಾಡಿನ ಪ್ರಥಮ ದರ್ಜೆ ಆಟಗಾರರಾದ ಎನ್. ಜಗದೀಶನ್ ಮತ್ತು ಬಾಬಾ ಅಪರಾಜಿತ್ ನಡುವಿನ ಅಸಭ್ಯ ಘಟನೆಗೆ ಸಾಕ್ಷಿಯಾಯಿತು.

ನೆಲೈ ನೀಡಿದ್ದ 185 ರನ್​ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಲು ಬಂದ ಚೆಪಾಕ್ ಸ್ಫೋಟಕ ಆರಂಭವನ್ನ ಪಡೆದುಕೊಂಡಿತು. ಆದರೆ, 4ನೇ ಓವರ್ ಅಪರಂಜಿತ್ ಬೌಲಿಂಗ್ ಮಾಡಲು ಬಂದರು. ಈ ಸಂದರ್ಭ ನಾಲ್ಕನೇ ಎಸೆತ ಹಾಕಲು ಮುಂದಾದಾಗ ನಾನ್ ಸ್ಟ್ರೈಕರ್​ನಲ್ಲಿದ್ದ ಜಗದೀಶನ್ ಬೌಲರ್ ಬೌಲಿಂಗ್ ಮಾಡುವ ಮುನ್ನ ಕ್ರೀಸ್ ಬಿಟ್ಟು ಮುಂದೆ ಬಂದರು. ಇದನ್ನ ಗಮನಿಸಿದ ಬೌಲರ್ ಚೆಂಡನ್ನು ವಿಕೆಟ್​ಗೆ ತಾಗಿಸಿ ಮಂಕಡ್ ರನೌಟ್ ಮಾಡಿದರು. ಬೇರೆನೂ ದಾರಿಯಿಲ್ಲದೆ ಜಗದೀಶನ್ ಪೆವಿಲಿಯನ್​ಗೆ ತೆರಳಬೇಕಾಯಿತು.

ತಾವು ಮಂಕಡ್ ರೀತಿಯಲ್ಲಿ ಔಟಾಗುತ್ತಿದ್ದಂತೆಯೇ ಸಿಟ್ಟಾದ ಎನ್ ಜಗದೀಶನ್ ಸಿಟ್ಟಿನಲ್ಲೇ ತಮ್ಮ ಬೇಸರವನ್ನು ಹೊರಹಾಕುತ್ತಾ ತಮ್ಮ ಮಧ್ಯದ ಬೆರಳು ತೋರಿಸಿ ಅಶ್ಲೀಲ ಸನ್ನೆ ಮಾಡುತ್ತಾ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಬ್ಯಾಟಿಂಗ್ ಗ್ಲೌಸ್‌ ತೆಗೆಯುವ ಮುನ್ನ ಬೌಲರ್‌ನತ್ತ ತಿರುಗಿ ಮಧ್ಯದ ಬೆರಳು ತೋರಿಸಿದ್ದ ಜಗದೀಶನ್‌, ಮತ್ತೆ ಗ್ಲೌಸ್ ತೆಗೆದ ಬಳಿಕ ಮತ್ತೊಮ್ಮೆ ಮಧ್ಯದ ಬೆರಳು ತೋರಿಸಿ ತಮ್ಮ ಅಸಭ್ಯ ವರ್ತನೆ ತೋರಿದರು.ಅಂದಹಾಗೆ ಜಗದೀಶನ್ ಅವರು ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡುತ್ತಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top