ಕ್ರಿಕೆಟ್ ಇತಿಹಾಸದಲ್ಲಿ ಆಟಗಾರರು ಯಾವೆಲ್ಲಾ ರೀತಿಯಲ್ಲಿ ಔಟ್ ಆಗಿದ್ದರೆ ಎಂಬುದನ್ನು ನಾವು ನೋಡಿದ್ದೇವೆ. ಆದರೆ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡದ ಬ್ಯಾಟ್ಸಮನ್ ಹೆನ್ರಿ ನಿಕೋಲ್ಸ್ ಅವರು ವಿಚಿತ್ರ ರೀತಿಯಲ್ಲಿ ಔಟ್ ಆಗಿದ್ದು, ಇದು ಕ್ರಿಕೆಟ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಈ ರೀತಿ ಆಗಿರುವುದು.
ಈ ಪಂದ್ಯದ 56 ನೇ ಓವರ್ ನಲ್ಲಿ ಇಂಗ್ಲೆಂಡ್ ತಂಡದ ಸ್ಪಿನ್ನರ್ ಜಾಕ್ ಲೀಚ್ ಅವರು ಬೌಲಿಂಗ್ ಮಾಡುತ್ತಿದ್ದರು. ಈ ಸಂಧರ್ಭದಲ್ಲಿ ಸ್ಟ್ರೈಕ್ ನಲ್ಲಿದ್ದ ಹೆನ್ರಿ ನಿಕೋಲ್ಸ್ ಜಾಕ್ ಲೀಚ್ ಎಸೆದ ಎಸೆತವನ್ನು ನೇರವಾಗಿ ಒಡೆಯಲು ಯತ್ನಿಸಿದರು. ಆದರೆ ಇವರು ಹೊಡೆದ ಬಾಲ್ ನೇರವಾಗಿ ನಾನ್- ಸ್ಟ್ರೈಕರ್ ನಲ್ಲಿದ್ದ ಬ್ಯಾಟ್ಸಮನ್ ಡೇರಿಲ್ ಮಿಚೆಲ್ ಅವರತ್ತ ಸಾಗಿತ್ತು. ವೇಗವಾಗಿ ಬಂಡ ಚಂಡನ್ನು ತಪ್ಪಿಸಲು ಮಿಚೆಲ್ ಅವರಿಗೆ ಸಾಧ್ಯವಾಗದೇ ಅದು ಅವರ ಬ್ಯಾಟ್ ಅನ್ನು ಬಡಿದು ನೇರವಾಗಿ ಆಫ್ ಸೈಡ್ ಪಾಯಿಂಟ್ ಫೀಲ್ಡರ್ ಅಲೆಕ್ಸ್ ಲೀಸ್ ಅವರ ಕೈ ಸೇರಿತು.
One of the unlucky dismissal ever in the history of the game. pic.twitter.com/YtcGNec3GP
— Johns. (@CricCrazyJohns) June 23, 2022
ಈ ರೀತಿ ವಿಕೆಟ್ ಬೀಳುತ್ತಿದ್ದಂತೆ ಬೌಲರ್ ಹಾಗು ಬ್ಯಾಟ್ಸಮನ್ ಇಬ್ಬರಿಗೂ ಒಂದು ಕ್ಷಣ ಆಶ್ಚರ್ಯವಾಗಿತ್ತು. ಆದರೆ ನಂತರ ಅಂಪೈರ್ ಇದನ್ನು ಔಟ್ ಎಂದು ಪರಿಗಣಿಸಿದರು. ಈ ರೀತಿಯಾಗಿ ಔಟ್ ಆಗಿ ಬೇಸರದಿಂದ ನಿಕೋಲ್ಸ್ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಕ್ರಿಕೆಟ್ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಈ ರೀತಿಯಾಗಿ ವಿಕೆಟ್ ಒಪ್ಪಿಸಿರವುದು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
