fbpx
ಸಮಾಚಾರ

ಶಸ್ತ್ರ ಚಿಕಿತ್ಸೆ ಎಫೆಕ್ಟ್ ನಿಂದ ಪ್ರಾಣ ಕಳೆದುಕೊಂಡ ಮಾಜಿ ಮಿಸ್ ಬ್ರೆಜಿಲ್ ಮಿಸ್ ಬ್ರೆಜಿಲ್ ಗ್ಲೇಸಿ ಕೊರಿಯಾ!

ದೇಹದ ಸೌಂದರ್ಯವನ್ನು ಉತ್ತಮ ಗೊಳಿಸುವ ಸಲುವಾಗಿ ಅನೇಕ ನಟಿಯರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆಯನ್ನು ನಾವು ಹಲವು ಬಾರಿ ನೋಡಿದ್ದೇವೆ. ಇದೀಗ ಟ್ರಾನ್ಸಿಲ್ ತೆಗೆದುಹಾಕಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಮಿಸ್ ಬ್ರೆಜಿಲ್ ಗ್ಲೇಸಿ ಕೊರಿಯಾ ಕೇವಲ 27 ವರ್ಷ ವಯಸ್ಸಿನಲ್ಲೇ ಸಾವನಪ್ಪಿದ್ದಾರೆ.

ಟ್ರಾನ್ಸಿಲ್ ತೆಗೆದುಹಾಕಲು ಇವರು ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದರು. ಶಸ್ತ್ರ ಚಿಕಿತ್ಸೆಯ ಬಳಿಕ ಇವರು ಸುಮಾರು ಎರಡು ತಿಂಗಳ ಕಾಲ ಕೋಮಾಗೆ ಜಾರಿದರು. ಆದರೆ ಇದೀಗ ಇವರಿಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.

ಶಸ್ತ್ರ ಚಿಕಿತ್ಸೆ ಮಾಡುವ ಸಂಧರ್ಭದಲ್ಲಿ ಇವರಿಗೆ ತೀವ್ರ ರಕ್ತಸ್ರಾವವಾಗಿದೆ. ಇದರಿಂದ ಇವರು ಕೆಲವು ತಿಂಗಳುಗಳ ಕಾಲ ಕೋಮಾದಲ್ಲಿದ್ದರು. ಇದಲ್ಲದೆ ಇವರಿಗೆ ಏಪ್ರಿಲ್ 4 ರಂದು ಹೃಧಯಾಘಾತ ಕೂಡ ಆಗಿದೆ. ಇಷ್ಟೊಂದು ಹದಗೆಟ್ಟಿದ್ದ ಇವರ ಆರೋಗ್ಯದ ಬಗ್ಗೆ ವೈದ್ಯರು ತೀವ್ರ ನಿಗಾ ಇಟ್ಟಿದ್ದರು. ಇವರನ್ನು ಉಳಿಸಲು ವೈದ್ಯರು ಬಹಳಷ್ಟು ಶ್ರಮ ಪಟ್ಟಿದ್ದರು ಸಹ ಇವರನ್ನು ಉಳಿಸಿಕೊಳ್ಳಲು ಇವರಿಗೆ ಸಾಧ್ಯವಾಗಲಿಲ್ಲ.

ಗ್ಲೇಸಿ ಕೊರಿಯಾ 2018 ರಲ್ಲಿ ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ ಆಗಿದ್ದವರು. ಇವರು ಹಲವಾರು ಸೌಂದರ್ಯ ಸ್ಪರ್ಧೆಗಳಲ್ಲಿಯೂ ಸಹ ಭಾಗವಹಿಸಿದರು. ಇಷ್ಟೊಂದು ಪ್ರಭಾವಿ ಮಹಿಳೆ ಅತ್ಯಂತ ಕಿರಿಯ ವಯಸ್ಸಿನಲ್ಲೇ ಸವನಪ್ಪಿದ್ದು ಇವರ ಅಪಾರ ಅಭಿಮಾನಿಗಳಿಗೆ ಬಹಳ ನೋವುಂಟುಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top