ಮೊದಲು ನಾವು ಟೋಲ್ ಗಳಲ್ಲಿ ಹಣ ಪಾವತಿಸಲು ಸಾಲು ಸಾಲು ಕ್ಯೂ ನಲ್ಲಿ ನಿಲ್ಲಬೇಕಾಗಿತ್ತು. ಇದರಿಂದ ನಮಗೆ ಹಲವಾರು ಸಮಸ್ಯೆಗಳು ಆಗುತ್ತಿದ್ದವು. ಇದಲ್ಲದೆ ಕೆಲವೊಮ್ಮೆ ನಮಗೆ ಚಿಲ್ಲರೆಯ ಸಮಸ್ಯೆ ಕೂಡ ಆಗುತ್ತಿತ್ತು. ಇವೆಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಗಲೆಂದು ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಅನ್ನು ಪರಿಚಯಿಸಿತು. ಆದರೆ ಇದೇ ಫಾಸ್ಟ್ ಟ್ಯಾಗ್ ಸಹಾಯದಿಂದ ಜನ ಹಣ ಕದಿಯುತ್ತಿದ್ದಾರೆ ಎಂದು ಹೇಳಿದರೆ ನಂಬಲು ಅಸಾಧ್ಯವಾಗಬಹುದು ಆದರೆ ಇದು ಸತ್ಯ.
ಟೋಲ್ ಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದೆ ಇರಲಿ ಎಂದು ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಅನ್ನು ಪರಿಚಯಿಸಿತು. ಬ್ಯಾಂಕ್ ಖಾತೆ ಹೊಂಡವರು ಈ ಫಾಸ್ಟ್ ಟ್ಯಾಗ್ ಅನ್ನು ಪಡೆಯಬಹುದು. ಈ ಫಾಸ್ಟ್ ಟ್ಯಾಗ್ ಅನ್ನು ನಿಮ್ಮ ವಾಹನಕ್ಕೆ ಅಂಟಿಸಿದರೆ ಸಾಕು ನೀವು ಟೋಲ್ ಬಳಿ ಸಮೀಪಿಸುತ್ತಿದ್ದಂತೆ ನಿಮ್ಮ ಖಾತೆ ಇಂತ ಹಣ ಕಟ್ ಆಗುತ್ತದೆ ಮತ್ತು ನೀವು ಸಲೀಸಾಗಿ ಟೋಲ್ ದಾಟಬಹುದು. ಆದರೆ ಇದೀಗ ಕಳ್ಳರಿಗೆ ಇದು ಒಂದು ಉಪಾಯ ವಾಗಿದ್ದು, ಫಾಸ್ಟ್ ಟ್ಯಾಗ್ ಮೂಲಕ ಹಣ ಕದಿಯಲು ಪ್ರಾರಂಭಿಸಿದ್ದಾರೆ. ಇದಕ್ಕೆ ಸಾಕ್ಷಿ ಟ್ವಿಟ್ಟರ್ ನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ.
1/2> The Loot party new mode of loot. Be aware of this. Watch both part carefully how Apple wrist watch used for @FASTag_NETC scanning. Any remedy Mr @nitin_gadkari @OfficeOfNG @NHAI_Official kuch samajh aya foreign technology me se?? pic.twitter.com/ggkNHJCr0b
— Sergeant Bikash🇮🇳 (@Bikash63) June 24, 2022
ನೀವು ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದರಲ್ಲಿ ಒಬ್ಬ ಹುಡುಗ ಕಾರಿನ ಗ್ಲಾಸ್ ಅನ್ನು ಬಟ್ಟೆ ಇಂದ ಒರೆಸುತ್ತಿದ್ದಾನೆ. ಹಾಗೆ ಅವನನ್ನು ಗಮನಿಸಿದರೆ ಅವನ ಕೈಯಲ್ಲಿ ಒಂದು ಸ್ಮಾರ್ಟ್ ವಾಚ್ ಕಾಣಬಹುದು. ತಾನು ಫಾಸ್ಟ್ ಟ್ಯಾಗ್ ನತ್ತ ಸಮೀಪಿಸುತ್ತಿದ್ದಂತೆ ನಾನಾ ರೀತಿಯಲ್ಲಿ ಸ್ಮಾರ್ಟ್ ವಾಚ್ ಫಾಸ್ಟ್ ಟ್ಯಾಗ್ ಟಚ್ ಆಗುವಂತೆ ಮಾಡುತ್ತಾನೆ. ಈ ಸ್ಮಾರ್ಟ್ ವಾಚ್ ಫಾಸ್ಟ್ ಟ್ಯಾಗ್ ಅನ್ನು ಸ್ಕ್ಯಾನ್ ಮಾಡಲು ಶುರು ಮಾಡುತ್ತದೆ. ಹಲವು ಬಾರಿ ಈ ರೀತಿ ಸ್ಕ್ಯಾನ್ ಮಾಡುತ್ತಾನೆ. ಯಾವಾಗ ಕಾರಿನಲ್ಲಿದ್ದ ಮಾಲೀಕರಿಗೆ ಹಣ ಕಟ್ ಆದ ಬಗ್ಗೆ ಸಂದೇಶ ಬರುತ್ತದೋ ಅನುಮಾನಗೊಂಡು ಆ ಯುವಕನನ್ನು ಪ್ರಶ್ನಿಸುತ್ತಾರೆ. ಕೂಡಲೇ ಯುವಕ ಆ ಜಾಗದಿಂದ ಓಡಿ ಹೋಗುತ್ತಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು ಈ ರೀತಿಯು ನಡೆಯುತ್ತದೆಯೇ ಎಂದು ಜನರು ಯೋಚಿಸುತ್ತಿದ್ದಾರೆ.
2/2> Last part . Thank you Mr PM India @narendramodi Everyone learnt how to loot. Jaihind🙏 pic.twitter.com/aiVHU9f9ab
— Sergeant Bikash🇮🇳 (@Bikash63) June 24, 2022
ಸರ್ಕಾರ ಹೇಳುವುದು ಏನು?
ಸರ್ಕಾರದ ಪ್ರಕಾರ ಆಯಾ ಬೌಗೋಳಿಕ ಸ್ಥಳಗಳಿಂದ NPCI ಯಿಂದ ನೋಂದಾಯಿತರಾದವರು ಮಾತ್ರ ಫಾಸ್ಟ್‌ಟ್ಯಾಗ್ ವಹಿವಾಟು ನಡೆಸುತ್ತಾರೆ. ಯಾವುದೇ ಅನಧಿಕೃತ ಸಾಧನ ಬಳಸಿ ಫಾಸ್ಟ್ ಟ್ಯಾಗ್ ನಲ್ಲಿ ಯಾವುದೇ ಹಣಕಾಸಿನ ವಹಿವಾಟುಗಳ ನಡೆಸಲು ಸಾಧ್ಯವಿಲ್ಲ ಎಂದು NETC ಸ್ಪಷ್ಟಪಡಿಸಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
