fbpx
ಸಮಾಚಾರ

ಎಲ್ಲೇ ಹೋದರು ಕನ್ನಡ ಹಾಗು ಕನ್ನಡಿಗರನ್ನು ಬಿಟ್ಟು ಕೊಡದ ಕಿಚ್ಚ ಸುದೀಪ್! ಬಾಲಿವುಡ್ ನಲ್ಲೂ ಕನ್ನಡತನವನ್ನು ಎತ್ತಿ ಹಿಡಿದ ಕಿಚ್ಚ

ನಟ ಕಿಚ್ಚ ಸುದೀಪ್ ಅವರ ಸದ್ಯ ವಿಕ್ರಾಂತ್ ರೋಣ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ. ಹೀಗಾಗಿ ಅವರು ರಾಜ್ಯ ಹಾಗು ದೇಶಗಳ ಪ್ರವಾಸ ಕೈಗೆತ್ತುಕೊಂಡಿದ್ದಾರೆ. ಇದಲ್ಲದೆ ಕಿಚ್ಚನಿಗೆ ಕನ್ನಡ ಭಾಷೆ ಮತ್ತು ಕನ್ನಡಿಗರ ಬಗ್ಗೆ ಅಪಾರವಾದ ಗೌರವ ಮತ್ತು ಅಭಿಮಾನವಿರುವುದು ನಮಗೆಲ್ಲಾ ಗೊತ್ತು. ಇದೀಗ ಇದನ್ನು ಮತ್ತೆ ಅವರು ಸಾಬೀತುಪಡಿಸಿದ್ದಾರೆ.

ಇತ್ತೀಚಿಗೆ ನಟ ಕಿಚ್ಚ ಸುದೀಪ್ ಹಾಗು ಅಜಯ್ ದೇವ್ಗನ್ ಅವರ ಟ್ವೀಟ್ ವಾರ್ ಸಕತ್ ವೈರಲ್ ಆಗಿತ್ತು. ಈ ಸಂಧರ್ಭದಲ್ಲಿ ಕಿಚ್ಚ ಕನ್ನಡಿಗರು ಮತ್ತು ಕನ್ನಡ ನಾಡನ್ನು ಎಂದಿಗೂ ಬಿಟ್ಟುಕೊಟ್ಟಿರಲಿಲ್ಲ. ಹಿಂದಿ ಹೇರಿಕೆಯ ವಿರುದ್ಧ ಧನಿ ಎತ್ತಿದರು. ಇದೀಗ ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲೂ ಪತ್ರಕರ್ತರು ಕೇಳಿರುವ ಪ್ರಶ್ನೆಗೆ ತಮ್ಮದೇ ರೀತಿಯಲ್ಲಿ ಕಿಚ್ಚ ಉತ್ತರಿಸಿದರು.

ಪತ್ರಕರ್ತರೊಬ್ಬರು ಕಿಚ್ಚನಿಗೆ ತೆಲುಗಿನಲ್ಲಿ ಒಳ್ಳೊಳ್ಳೆ ಕಮರ್ಷಿಯಲ್ ಸಿನಿಮಾಗಳು ಬರುತ್ತಿದ್ದು ಅವೆಲ್ಲವೂ ಪಾನ್ ಇಂಡಿಯಾ ಸಿನಿಮಾವಾಗಿದೆ. ತಮಿಳಿನಲ್ಲೂ ಕೂಡ ಪಾನ್ ಇಂಡಿಯಾ ಸಿನಿಮಾಗಳು ಬರುತ್ತಿವೆ. ಆದರೆ ಕನ್ನಡದಲ್ಲಿ ಯಾಕಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಕಿಚ್ಚ “ನಿಮಗೆ ಕನ್ನಡದ ಬಗ್ಗೆ ತಿಳುವಳಿಕೆ ಕಡಿಮೆಯಿದೆ ಅನಿಸುತ್ತದೆ. ನಮ್ಮಲ್ಲೂ ಅದ್ಭುತವಾದ ಸಿನಿಮಾಗಳು ಬಂದಿವೆ. ಯಾವಯಾವ ಸಿನಿಮಾಗಳು ಕನ್ನಡಲ್ಲಿ ಬಂದಿದೆ ಎಂದು ತಿಳಿದುಕೊಳ್ಳಲು ನಿಮ್ಮನ್ನು ಸ್ವಾಗಿತುಸುತ್ತೇನೆ ಎಂದು ಹೇಳುವ ಮೂಲಕ ಮತ್ತೆ ಬಾಲಿವುಡ್ ಅಂಗಳದಲ್ಲಿ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ.

ಈಗಾಗಲೇ ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು ಎಲ್ಲಾ ಭಾಷೆಯಲ್ಲೂ ಸಕತ್ ಸೌಂಡ್ ಮಾಡುತ್ತಿದ್ದೆ. ಹೀಗಾಗಿ ಅಭಿಮಾನಿಗಳು ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top