fbpx
ಸಮಾಚಾರ

ಹೊಟ್ಟೆ ಕುಯ್ದು ಹಾಗೆಯೆ ಬಿಟ್ಟ ವೈದ್ಯ! ಸಾವು ಬದುಕಿನ ನಡುವೆ ವೃಧೆ ಹೋರಾಟ

ಇತ್ತೀಚಿನ ದಿನಗಳಲ್ಲಿ ವೈದ್ಯರ ಎಡವಟ್ಟಿನಿಂದ ಹಲವಾರು ಘಟನೆಗಳು ನಡೆಯುತ್ತಿರುವುದನ್ನು ನಾವು ಹಲವು ಬಾರಿ ನೋಡಿದ್ದೇವೆ. ಈ ವೈದ್ಯರ ಎಡವಟ್ಟಿನದಿಂದ ಅನೇಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದಾಗಿಯೂ ಇನ್ನು ವೈದ್ಯರು ಮಾತ್ರ ತಮ್ಮ ಹಳೆ ಚಾಳಿಯನ್ನೇ ನಡೆಸಿಕೊಂಡು ಹೋಗುತ್ತಿದ್ದು, ಇದೀಗ ವೈದ್ಯರ ಎಡವಟ್ಟಿನಿಂದ ವೃದ್ಧೆ ನರಳುತ್ತಾ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಈ ಘಟನೆ ನಡೆದಿರುವುದು ದಾವಣಗೆರೆಯ ಗುರುನಾಥ್ ಖಾಸಗಿ ಆಸ್ಪತ್ರೆಯಲ್ಲಿ. 65 ವರ್ಷದ ವೃದ್ಧೆ ಅನ್ನಪೂರ್ಣಮ್ಮ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಇವರಿಗೆ ವೈದ್ಯ ದೀಪಕ್ ಬೊಂದಾಡೆ ಆಪರೇಷನ್ ಮಾಡಿದ್ದಾರೆ. ಆದರೆ ಆಪರೇಷನ್ ಮಾಡಿದ ನಂತರ ಹೊಲಿಗೆ ಹಾಕದೇ ಹಾಗೆ ಬಿಟ್ಟಿದ್ದಾರೆ. ಇದರ ಪರಿಣಾಮ ಇದೀಗ ವೃಧೆಗೆ ಹೊಟ್ಟೆ ನೋವು ಹೆಚ್ಚಾಗಿದ್ದು ಕಣ್ಣು ಕೂಡ ಕಾಣಲಾಗದೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ.

ಹೊಟ್ಟೆಕೊಯ್ದ ಬಳಿಕ ಅದನ್ನು ವೈದ್ಯರು ಹಾಗೆಯೇ ಬಿಟ್ಟಿದ್ದು, ಆಪರೇಷನ್ ಮಾಡಿ 15 ದಿನ ಆದರೂ ಹೊಲಿಗೆ ಹಾಕಿರಲಿಲ್ಲ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಗೆ ಕೇಳಿದರೆ ತನ್ನಷ್ಟಕ್ಕೆ ತಾನೇ ಕೂಡಿಕೊಳ್ಳುತ್ತದೆ ಎಂದಿದ್ದರು. ಇದರಿಂದಾಗಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಪರೇಷನ್ ಬಳಿಕ ವೃದ್ದೆಗೆ ಕಣ್ಣು ಕಾಣುತ್ತಿಲ್ಲ, ಊಟವೂ ಸೇರುತ್ತಿಲ್ಲ. ಯಾವುದೇ ಬಿಲ್ ನೀಡದೇ ಸುಮಾರು 3 ಲಕ್ಷಕ್ಕೂ ಅಧಿಕ ಬಿಲ್ಅನ್ನು ಆಸ್ಪತ್ರೆಯವರು ಕಟ್ಟಿಸಿಕೊಂಡಿದ್ದಾರೆ. ಔಷಧಿಯಲ್ಲೇ ಗುಣಮುಖವಾಗುವಂತೆ ಆಪರೇಷನ್ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top