ನಟಿ ರಶ್ಮಿಕಾ ಮಂದಣ್ಣ ಅವರು ಬಹುಭಾಷಾ ನಟಿಯರಲ್ಲಿ ಪ್ರಮುಖರು. ಇವರ ಬಗ್ಗೆ ಒಂದಲ್ಲ ಒಂದು ಗಾಸಿಪ್ ಪ್ರತಿ ದಿನ ನಾವು ಕೇಳುತ್ತಿರುತ್ತೇವೆ. ಇದೀಗ ಇವರ ಬಗ್ಗೆ ಅಲ್ಲದೆ ಇವರ ನಾಯಿಯ ಬಗ್ಗೆ ಕೂಡ ಗಾಸಿಪ್ ಕೇಳಿಬರುತ್ತಿದ್ದು, ಇದರ ಕುರಿತು ರಶ್ಮಿಕಾ ಪ್ರತಿಕ್ರಿಯೆ ನೀಡಿದ್ದಾರೆ.
ನಟಿ ರಶ್ಮಿಕಾ ಅವರಿಗೆ ತಮ್ಮ ನಾಯಿಯ ಮೇಲೆ ಅಪಾರವಾದ ಪ್ರೀತಿ. ಬಿಡುವಿನ ಸಮಯವನ್ನು ಹೆಚ್ಚು ಕಾಲ ತಮ್ಮ ನಾಯಿಯ ಜೊತೆ ಕಾಲ ಕಳೆಯುತ್ತಾರೆ. ತಮ್ಮ ನಾಯಿಯ ಜೊತೆ ಇರುವ ಹಲವಾರು ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಇದೇ ವಿಚಾರಕ್ಕಾಗಿ ಮತ್ತೆ ಸುದ್ದಿಯಾಗುತ್ತಿದ್ದಾರೆ.
ರಶ್ಮಿಕಾ ಅವರಿಗೆ ತಮ್ಮ ನಾಯಿಯ ಮೇಲೆ ಅಪಾರವಾದ ಪ್ರೀತಿ ಇರುವ ಕಾರಣ ತಾವು ಎಲ್ಲೇ ಹೋದರು ಅಲ್ಲಿಗೆ ತಮ್ಮ ನಾಯಿಯನ್ನು ಕರೆದುಕೊಂಡು ಹೋಗಲು ಇಚ್ಚಿಸುತ್ತಾರೆ. ಇದಕ್ಕಾಗಿ ಅವರು ನಿರ್ಮಾಪಕರಿಗೆ ತಮ್ಮ ಜೊತೆ ತಮ್ಮ ನಾಯಿಗೂ ಕೂಡ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿ ಕೊಡಬೇಕಂದು ಹೇಳುತ್ತಾರೆ ಎಂಬ ಸುದ್ದಿ ಇದೀಗ ಎಲ್ಲಾ ಕಡೆ ಹರಿದಾಡುತ್ತಿದೆ. ಇದರಿಂದ ನಿರ್ಮಾಪಕರಿಗೆ ಹೊರೆ ಆಗುತ್ತಿದೆ ಎಂದು ಮಾಧ್ಯಮವೊಂದು ಪ್ರಕಟಿಸಿತು.
🤣🤣🤣🤣🤣 hey c’mon.. don’t be mean now..🥲 even if you want AURA to travel with me.. SHE doesn’t want to travel around with me..🤣🤣 she’s very happy in Hyderabad..🥲🥲 thankyou for your concern @Mirchi9 ❤️ https://t.co/c2RTL9I2kG
— Rashmika Mandanna (@iamRashmika) June 24, 2022
ಇದಕ್ಕೆ ಪ್ರತಿಕ್ರಯಿಸಿದ ರಶ್ಮಿಕಾ ” ಈ ಸುದ್ದಿ ಕೇಳುತ್ತಿದ್ದಂತೆ ನನಗೆ ನಗು ಬಂದಿತು. ಒಂದು ವೇಳೆ ಔರಾ ನನ್ನ ಜೊತೆ ಪ್ರಯಾಣ ಮಾಡಲಿ ಎಂದು ನೀವು ಬಯಸಿದರೂ ಕೂಡ ಆಕೆ ಬರುವುದಿಲ್ಲ. ಆಕೆ ಹೈದರಾಬಾದ್ನಲ್ಲಿಯೇ ಖುಷಿಯಾಗಿದ್ದಾಳೆ. ನಿಮ್ಮ ಕಾಳಜಿಗೆ ಧನ್ಯವಾದಗಳು ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
