fbpx
ಸಮಾಚಾರ

ತೆಲುಗು ಸ್ಟಾರ್ ನಿರ್ಮಾಪಕನಿಂದ ಯಶ್ ಗೆ 100 ಕೋಟಿ ಸಂಭಾವನೆ ಆಫರ್

ಕೆಜಿಎಫ್ ಸರಣಿ ಚಿತ್ರಗಳ ಅಭೂತಪೂರ್ವ ಯಶಸ್ಸಿನ ಬಳಿಕ ಯಶ್ ಸ್ಟಾರ್ ಡಮ್ ಉನ್ನತಮಟ್ಟಕ್ಕೆ ಏರಿದೆ.. ಕೆಜಿಎಫ್ ಏನೋ ಮುಗಿತು, ಈಗ ಯಶ್ ಏನ್ಮಾಡ್ತಾರೆ ಅನ್ನೋ ಕುತೂಹಲ ಪ್ರತಿಯೊಬ್ಬರಿಗೂ ಕಾಡ್ತಿದೆ. ಈ ಮಧ್ಯೆ ರಾಕಿ ಭಾಯ್ ಮುಂದಿನ ಸಿನಿಮಾಗೆ ಟಾಲಿವುಡ್ ನಿರ್ಮಾಪಕರೊಬ್ಬರು 100 ಕೋಟಿ ಸಂಭಾವನೆ ಆಫರ್ ಮಾಡಿದ್ದಾರೇ ಎಂಬ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೌದು, ಟಾಲಿವುಡ್‌ನ ಖ್ಯಾತ ನಿರ್ಮಾಪಕ ದಿಲ್ ರಾಜು, ಯಶ್ ಅವರಿಗೆ 100 ಕೋಟಿ ರೂಪಾಯಿ ಸಿನಿಮಾ ಆಫರ್ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈಗಾಗಲೇ ಕೆಜಿಎಫ್-2 ಮೂಲಕ ದೇಶ ವಿದೇಶದಲ್ಲಿ ಸದ್ದು ಮಾಡುತ್ತಿರುವ ಯಶ್‌ಗೆ ಬೇರೆ ಬೇರೆ ಭಾಷೆಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಆದರೂ ಯಾವ ಸಿನಿಮಾವನ್ನು ಇನ್ನು ಒಪ್ಪಿಕೊಂಡಿಲ್ಲ. ಯಶ್ ತೆಲುಗು ನಿರ್ಮಾಪಕ ದಿಲ್ ರಾಜು ಆಫರ್ ಒಪ್ಪಿಕೊಳ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.

ದಿಲ್ ರಾಜು ಬಿಗ್ ಬಜೆಟ್ ಮೂವಿ ಮಾಡಲು ಪ್ಲ್ಯಾನ್ ರೂಪಿಸಿದ್ದಾರೆ. ಈ ಚಿತ್ರವು ಎರಡು ಭಾಗಗಳಾಗಿ ತೆರೆಗೆ ಬರಲಿದೆಯಂತೆ. ಈ ಎರಡೂ ಭಾಗಗಳ ಸಂಭಾವನೆಯಾಗಿ ಯಶ್​ ಅವರಿಗೆ ದಿಲ್ ರಾಜು ನೂರು ಕೋಟಿಯ ಆಫರ್ ನೀಡಿದ್ದಾರೆ ಎಂಬುದು ಸದ್ಯದ ಟಾಲಿವುಡ್​ ಟಾಕು. ಇತ್ತ ಯಶ್ ಹಾಗೂ ದಿಲ್ ರಾಜು ಆತ್ಮೀರರಾಗಿರುವ ಕಾರಣ ಈ ಸುದ್ದಿಯು ಇದೀಗ ಎಲ್ಲರ ಹುಬ್ಬೇರುವಂತೆ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top