fbpx
ಸಮಾಚಾರ

ಅಮ್ಮ ಆಗ್ತಿದ್ದಾರೆ ಆಲಿಯಾ ಭಟ್: ಮೊದಲ ಮಗುವಿನ ನಿರೀಕ್ಷೆಯಲ್ಲಿ ಆಲಿಯಾ-ರಣಬೀರ್ ದಂಪತಿ

ಕಳೆದ ಏಪ್ರಿಲ್ ತಿಂಗಳಲ್ಲಿ ಮದುವೆಯಾಗಿದ್ದ ಈಗ ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಪೋಷಕರಾಗುತ್ತಿದ್ದಾರೆ. ಈ ವಿಚಾರವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಫೋಟೋ ಹಂಚಿಕೊಳ್ಳುವ ಮೂಲಕ ಅವರು ಈ ವಿಚಾರವನ್ನು ಖಚಿತಪಡಿಸಿದ್ದಾರೆ.

ಈ ಬಗ್ಗೆ ಇನ್ಸ್ಟಾಗ್ರಾಮ್​ ನಲ್ಲಿ ತಮ್ಮ ಅಲ್ಟ್ರಾಸೌಂಡ್ ಪರೀಕ್ಷೆಯ ಫೋಟೋವನ್ನು ಹಂಚಿಕೊಂಡಿರುವ ಆಲಿಯಾ, “Our baby coming soon..” ಎಂದು ಫೋಟೋಗೆ ಶೀರ್ಷಿಕೆ ನೀಡಿದ್ದಾರೆ. ಅಲ್ಲದೇ ಸಿಂಹವೊಂದು ಸಿಂಹವನ್ನು ತಬ್ಬಿ ಹಿಡಿದು ಮರಿಯನ್ನು ನೋಡುತ್ತಿರುವ ಫೋಟೋವನ್ನು ಆಲಿಯಾ ಭಟ್‌ ಹಂಚಿಕೊಂಡಿದ್ದಾರೆ.

 

 

View this post on Instagram

 

A post shared by Alia Bhatt 🤍☀️ (@aliaabhatt)

 

ಸಿನಿಮಾ ಜೀವನದ ಜೊತೆಗೆ ವೈಯಕ್ತಿಕ ಜೀವನದ ಕಡೆಯು ಹೆಚ್ಚು ಗಮನ ಹರಿಸಿದ್ದ ಅಲಿಯಾ ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಸುಮಾರು 5 ವರ್ಷಗಳಂದ ಪ್ರೀತಿಸುತ್ತಿದ್ದ ಈ ಸ್ಟಾರ್ ಜೋಡಿ 2022, ಏಪ್ರಿಲ್ 14ರಂದು ಹಸಮೆಣೆ ಏರಿದರು. ಮುಂಬೈ ಆರ್ ಕೆ ಅಪಾರ್ಟ್ಮೆಂಟ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ರಣಬೀರ್ ಕಪೂರ್ ಅಲಿಯಾ ವಿವಾಹವಾಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top