fbpx
ಸಮಾಚಾರ

ಚೆನ್ನಭೈರಾದೇವಿಗೂ ಬ್ರಿಟನ್ ನಲ್ಲಿ ಸಿಕ್ಕಿರುವ £150 ಮಿಲಿಯನ್ ಬೆಳ್ಳಿ ಗಟ್ಟಿಗೂ ಇರುವ ಸಂಬಂಧವೇನು?

ಭಾರತದದ ಇತಿಹಾಸದಲ್ಲಿ ರಾಣಿ ಚೆನ್ನಭೈರಾದೇವಿಯಷ್ಟು ಸುದೀರ್ಘಕಾಲ ರಾಜ್ಯವಾಳಿದ ಇನ್ನೊಬ್ಬ ರಾಣಿಯಿಲ್ಲ. ಸರಿಸುಮಾರು ಕ್ರಿಸ್ತಶಕ 1552ರಿಂದ 1606ರವರೆಗೆ ಒಟ್ಟು ಐವತ್ನಾಲ್ಕು ವರ್ಷಗಳ ಕಾಲ ರಾಜ್ಯವಾಳಿದ ಸಾಳುವ ವಂಶದ ಈ ವೀರವನಿತೆ, ತಾನು ಬದುಕಿರುವಷ್ಟೂ ಕಾಲ ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದವಳು..

ಇಂಥಾ ಜೋಗಜಲಪಾತ ಬಳಿಯ ಗೇರುಸೊಪ್ಪೆ ‘ಕಾಳುಮೆಣಸಿನ ರಾಣಿ’ ಚೆನ್ನಭೈರಾದೇವಿಗೂ ಯುನೈಟೆಡ್ ಕಿಂಗ್ಡಮ್ ಹತ್ತಿರ ಸಿಕ್ಕಿರುವ £150 ಮಿಲಿಯನ್ ಬೆಳ್ಳಿಯಗಟ್ಟಿಗೆ ಇರುವ ಸಂಬಂಧ ಏನು? ಈ ಬಗ್ಗೆ ರಾಜ್ಯಸಭಾ ಸದಸ್ಯರಾದ ಜಿಸಿ ಚಂದ್ರಶೇಖರ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೂತೂಹಲಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ.

 

 

ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ವಿಡಿಯೋ ಮೂಲಕ ಕರ್ನಾಟಕ ಮತ್ತು ಕನ್ನಡ ಭಾಷೆಯ ಇತಿಹಾಸದ ಬಗ್ಗೆ ಕನ್ನಡಿಗರಲ್ಲಿ ಅರಿವು ಮೂಡಿಸುತ್ತಿರುವ ರಾಜ್ಯಸಭಾ ಸದಸ್ಯರಾದ ಚಂದ್ರಶೇಖರ ಅವರು ಇದೀಗ ಮತ್ತೊಂದು ಕುತೂಹಲಕಾರಿ ವಿಷಯದೊಂದಿಗೆ ಹೊಸ ವಿಚಾರವನ್ನು ಕನ್ನಡಿಗರಿಗೆ ತಿಳಿಸಿದ್ದಾರೆ.

 

ಜೋಗಜಲಪಾತ ಬಳಿಯ ಗೇರುಸೊಪ್ಪೆ 'ಕಾಳುಮೆಣಸಿನ ರಾಣಿ' ಚೆನ್ನಭೈರಾದೇವಿಗೂ ಯುನೈಟೆಡ್ ಕಿಂಗ್ಡಮ್ ಹತ್ತಿರ ಸಿಕ್ಕಿರುವ £150 ಮಿಲಿಯನ್ …

Posted by GC Chandrashekhar on Sunday, 26 June 2022

 

ಜಿಸಿ ಚಂದ್ರಶೇಖರ್ ಅವರ ಫೇಸ್ಬುಕ್ ಪೋಸ್ಟ್ ಸಾರಾಂಶ ಇಂತಿದೆ:
400 ವರ್ಷಗಳ ಹಿಂದೆ ಕಡಲ ತೀರವನ್ನು ಆಳುತ್ತಿದ್ದದು ಜೈನಧರ್ಮದ ಕನ್ನಡದ ರಾಣಿ ಚೆನ್ನಭೈರಾದೇವಿ. ಇವರ ವ್ಯಾಪಾರ-ವಹಿವಾಟು ಎಲ್ಲಿವರೆಗೂ ಪ್ರಚಲಿತವಾಗಿತ್ತು ಎಂದರೆ ಇವರನ್ನು ಪೋರ್ಚುಗೀಸರು “Rainha da Pimenta” ಅಂದರೆ ‘ಕಾಳುಮೆಣಸಿನ ರಾಣಿ’ ಎಂದೇ ಕರೆಯುತ್ತಿದ್ದರು. ಅಂದಿನ ಕಾಲಕ್ಕೆ ಕರಿಮೆಣಸನ್ನು ಕಪ್ಪು ಚಿನ್ನ ಎಂದೆ ಕರೆಯುತ್ತಿದ್ದರು ,ಇಷ್ಟೊಂದು ವ್ಯವಹಾರ ಮಾಡುತ್ತಿದ್ದ ನಮ್ಮ ರಾಣಿಯ ಸಂಪತ್ತು ಎಷ್ಟಿರಬಹುದೆಂದು ನೀವೇ ಊಹಿಸಿಕೊಳ್ಳಿ. 1574 ಮೋಸದಿಂದ ಪೋಚುಗೀಸರು ಇಳಿವಯಸ್ಸಿನಲ್ಲಿದ್ದ ರಾಣಿಯನ್ನು ಸೋಲಿಸಿದರು!
ಅವರ ಅಭೂತಪೂರ್ವವಾದ ಸಂಪತ್ತು ಏನಾಯಿತೆಂದು ಇಂದಿಗೂ ಯಾರಿಗೂ ತಿಳಿದಿಲ್ಲ.
18 ಜುಲೈ 2013 ರಲ್ಲಿ ಯುನೈಟೆಡ್ ಕಿಂಗ್ಡಮ್ ಬಳಿ ‘ಎಸ್ ಎಸ್ ಗೆರುಸೊಪ್ಪ’ ಎಂಬ ಈ ಹಿಂದೆ ಮುಳುಗಿದ್ದ ಹಡಗಿನಿಂದ ಅಮೇರಿಕಾದ ಕಂಪನಿಯೊಂದು ಸುಮಾರು £150 ಮಿಲಿಯನ್ ಬೆಲೆಬಾಳುವ ಬೆಳ್ಳಿಯ ಗಟ್ಟಿಯನ್ನು ಪತ್ತೆ ಹಚ್ಚಿತು!
ಈ ಹಡಗನ್ನು ಎರಡನೇ ಮಹಾ ವಿಶ್ವಯುದ್ಧದ ಸಮಯದಲ್ಲಿ 1941 ರಲ್ಲಿ ಜರ್ಮನರು ಮುಳುಗಿಸಿದ್ದರು. ಈ ಹಡಗನ್ನು ಬ್ರಿಟಿಷರು ತಯಾರಿಸಿದ್ದು 1919 ರಲ್ಲಿ. ಪ್ರತಿವರ್ಷ ಕನಿಷ್ಠಪಕ್ಷ £150 ಮಿಲಿಯನ್ ಅಷ್ಟು ಬೆಳ್ಳಿ ಸಾಗಿಸುತ್ತಿದ್ದರು ಎಂದರೆ ನೀವೇ ಊಹಿಸಿಕೊಳ್ಳಿ ಬ್ರಿಟಿಷರು ನಮ್ಮ ಗೇರುಸೊಪ್ಪೆ ಯಿಂದ ಎಷ್ಟು ಸಂಪತ್ತನ್ನು ಲೂಟಿ ಮಾಡಿದ್ದಾರೆ ಎಂದು!
ಈ ಸಂಪತ್ತನ್ನು ನಾವು ವಾಪಸ್ ಭಾರತಕ್ಕೆ ತರಬಹುದಾ ಇದರ ಬಗ್ಗೆ ಚರ್ಚಿಸೋಣ! ನಿಮ್ಮ ಅಭಿಪ್ರಾಯ ಕಾಮೆಂಟ್ ನಲ್ಲಿ ತಿಳಿಸಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top