ನಟ ಕಿಚ್ಚ ಸುದೀಪ್ ಅವರು ಸದ್ಯ ವಿಕ್ರಾಂತ್ ರೋಣ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿ ಯಾಗಿದ್ದಾರೆ. ಸುದೀಪ್ ಅವರಿಗೆ ಸಿನಿಮಾ ಬಿಟ್ಟರೆ ಹೆಚ್ಚಾಗಿ ಕ್ರಿಕೆಟ್ ಮೇಲೆ ಹೆಚ್ಚಿನ ಆಸಕ್ತಿ ಇರೋದು ನಮಗೆಲ್ಲಾ ಗೊತ್ತು. ತಾವು ತಮ್ಮ ಬಿಡುವಿನ ಸಮಯದಲ್ಲಿ ಹೆಚ್ಚಾಗಿ ಕ್ರಿಕೆಟ್ ಆಡುವುದರಲ್ಲಿ ಕಾಲ ಕಳೆಯುತ್ತಾರೆ. ಇದೀಗ ಇವರ ಕ್ರಿಕೆಟ್ ಪ್ರೇಮವನ್ನು ಮೆಚ್ಚಿ ಭಾರತ ತಂಡದ ಶ್ರೇಷ್ಠ ಆಟಗಾರ ಕಪಿಲ್ ದೇವ್ ಅವರು ವಿಶೇಷವಾದ ಉಡುಗೊರೆ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಜಾಸ್ ಬಟ್ಲರ್ ಅವರು ಕಿಚ್ಚ ಸುದೀಪ್ ಅವರಿಗೆ ಒಂದು ವಿಶೇಷವಾದ ಬ್ಯಾಟ್ ಅನ್ನು ಗಿಫ್ಟ್ ಆಗಿ ನೀಡಿದರು. ಇದೀಗ ಕಪಿಲ್ ದೇವ್ ಅವರು ಕೂಡ ಕಿಚ್ಚನಿಗೆ ಬ್ಯಾಟ್ ಒಂದನ್ನು ಗಿಫ್ಟ್ ಆಗಿ ನೀಡಿದ್ದಾರೆ. ಇದರಲ್ಲಿ ಹಲವಾರು ಕ್ರಿಕೆಟ್ ಲೆಜೆಂಡ್ ರವರ ಸಹಿ ಇದೆ. ಈ ವಿಶೇಷ ಗಿಫ್ಟ್ ಅನ್ನು ಸ್ವೀಕರಿಸಿದ ಕಿಚ್ಚ ಬಹಳ ಕುಶಿಯಾಗಿದ್ದು ತಮ್ಮ ಮನದಾಳದ ಮಾತನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ.
Wohhhhhhhhhhhhhhhhhhhhh🥳🥳…
What a Sunday .. thank uuuu @therealkapildev sirrrrr for this hugeeeeeee surprise I'm waking th to.
Wowwww… wasnt expecting this. This a classic piece and I'm right now feeling on top of the world. Thank you thank you ❤️❤️❤️❤️ pic.twitter.com/9z3XlMFpoQ— Kichcha Sudeepa (@KicchaSudeep) June 26, 2022
ಈ ವಿಶೇಷ ಗಿಫ್ಟ್ ಅನ್ನು ಸ್ವೀಕರಿಸುತ್ತಿದ್ದಂತೆ ಕಿಚ್ಚ “ವಾವ್.. ಎಂಥ ಅದ್ಭುತ ಭಾನುವಾರ. ಧನ್ಯವಾದಗಳು ಕಪಿಲ್ ದೇವ್ ಸರ್. ಇದು ನಿಜವೇ! ನಾನು ಇದನ್ನು ನಿರೀಕ್ಷಿಸಿರಲಿಲ್ಲ. ಇದು ಕ್ಲಾಸಿಕ್ ಪೀಸ್” ಎಂದು ಬ್ಯಾಟ್ನ ಫೋಟೋ ಜೊತೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
