fbpx
ಸಮಾಚಾರ

ಹಿರಿಯ ನಟಿ ಅಂಬಿಕಾ ನಿಧನ

ಮಲೆಯಾಳಂ ಚಿತ್ರರಂಗದ ಖ್ಯಾತ ನಟಿ ಮತ್ತು ನಿರ್ದೇಶಕಿ ಅಂಬಿಕಾ ನಿಧನರಾಗಿದ್ದಾರೆ.. ನಿನ್ನೆ ರಾತ್ರಿ ಹೃದಯ ಸ್ತಂಭನದಿಂದ ನಿರ್ದೇಶಕಿ ಅಂಬಿಕಾ ನಿಧನರಾಗಿದ್ದಾರೆ ಎಂದು ಮಾಲಿವುಡ್ ಮಾಧ್ಯಮಗಳು ವರದಿಮಾಡಿವೆ.

ನಟಿ ಅಂಬಿಕಾ ಇತ್ತೀಚಿಗೆ ಕೋವಿಡ್ ವೈರಸ್ ಗೆ ಒಳಗಾಗಿದ್ದರು.. ಅದಾದ ಬಳಿಕ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ರಾತ್ರಿ ಸುಮಾರು 10.30ಕ್ಕೆ ಹೃದಯ ಸತಂಬನದಿಂದಾಗಿ ಮೃತಪಟ್ಟಿದ್ದಾರೆ..

2002ರಲ್ಲಿ `ಕೃಷ್ಣ ಗೋಪಾಲಕೃಷ್ಣ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದ ಸಹಾಯಕ ನಿರ್ದೇಶಕಿಯಾಗಿ ಪ್ರವೇಶಿಸಿದ್ದರು. ಮಮ್ಮುಟಿ ಮತ್ತು ಪೃಥ್ವಿರಾಜ್ ಸುಕುಮಾರನ್ ನಟನೆಯ ಚಿತ್ರದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ನಟಿ, ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವ ಅಂಬಿಕಾ ಅಕಾಲಿಕ ನಿಧನಕ್ಕೆ ಚಿತ್ರರಂಗ ಸಂತಾಪ ಸೂಚಿಸಿದ್ದಾರೆ.

ಅಂದಹಾಗೆ `ಕುಂಬಳಂಗಿ ನೈಟ್ಸ್’ ಖ್ಯಾತಿಯ ಮಲಯಾಳಂ ನಟಿ ಕಮ್ ನಿರ್ದೇಶಕಿ ಅಂಬಿಕಾ ವೈರಸ್, ಮೀಶಾ ಮಾಧವನ್ ಮತ್ತು ಅನುರಾಗಕಾರಿಕಿನ್ ವೆಲ್ಲಂ ಸೇರಿದಂತೆ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಚಿತ್ರಗಳಾದ ತೊಮ್ಮನುಂ ಮಕ್ಕಳುಮ್, ಸಾಲ್ಟ್ ಅಂಡ್ ಪೆಪ್ಪರ್, ರಾಜಮಾಣಿಕ್ಕಂ ಮತ್ತು ವೆಲ್ಲಿನಕ್ಷತ್ರಂ ಚಿತ್ರಗಳಿಗೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top