fbpx
ಸಮಾಚಾರ

ಪ್ರತಿಭಾನ್ವಿತ ನಟ ಎನ್.ಡಿ. ಪ್ರಸಾದ್ ಆತ್ಮಹತ್ಯೆ: ನೇಣಿಗೆ ಶರಣು

ಚಿತ್ರರಂಗಕ್ಕೆ ಒಂದಾದಮೇಲೆ ಒಂದರಂತೆ ಶಾಕಿಂಗ್ ನ್ಯೂಸ್ ಕೇಳಿ ಬರುತ್ತಲೇ ಇದೆ. ಇತ್ತೀಚೆಗೆ ಅನೇಕ ಕಲಾವಿದರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಪ್ರತಿಭಾನ್ವಿತ ಮಲಯಾಳಂ ನಟ ಎನ್.ಡಿ. ಪ್ರಸಾದ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಕ್ಕಳು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದುಕೊಂಡಿರುವ ಪ್ರಸಾದ್, ಮನೆಗೆ ಬಂದ ಮಕ್ಕಳು ತಂದೆಯ ಸಾವನ್ನು ನೆರೆಹೊರೆಯವರಿಗೆ ತಿಳಿಸಿದ್ದ, ಆನಂತರ ಪೊಲೀಸರು ಆಗಮಿಸಿ, ಪ್ರಾಥಮಿಕ ತನಿಖೆ ಕೂಡ ಕೈಗೊಂಡಿದ್ದಾರೆ. ಖಳನಟನಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಪ್ರಸಾದ್, ಹಲವು ವರ್ಷಗಳಿಂದ ಹೆಂಡತಿಯಿಂದ ದೂರವಿದ್ದರಂತೆ. ಹಾಗಾಗಿ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆ ವರದಿ ಹೇಳಿದೆ. ಸಂಪೂರ್ಣ ತನಿಖೆ ಬಳಿಕ ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.

ಹಲವಾರು ಮಲಯಾಳಂ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿರುವ 43 ವರ್ಷದ ಪ್ರಸಾದ್ ಅವರು ನಿವೀನ್ ಪೌಳಿ ನಟನೆಯ ಮಲಯಾಳಂ ಸಿನಿಮಾ ‘ಆ್ಯಕ್ಷನ್ ಹೀರೋ ಬಿಜು’ದಲ್ಲಿ ವಿಲನ್ ಪಾತ್ರ ಮಾಡಿ ಗಮನ ಸೆಳೆದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top