fbpx
ಸಮಾಚಾರ

ಸದ್ದಿಲ್ಲದೇ ಶುರುವಾಯ್ತು ಉಪ್ಪಿ ಅವರ ಮುಂದಿನ ಸಿನಿಮಾದ ಶೂಟಿಂಗ್! ನಾಯಕಿ ಯಾರು ಗೊತ್ತಾ?

ನಟ ಉಪೇಂದ್ರ ಅವರ ಸುಮಾರು 7 ವರ್ಷಗಳ ನಂತರ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಯಾವಾಗಲು ಡಿಫರೆಂಟ್ ಆಗಿ ಯೋಚ್ನೆ ಮಾಡುವ ಉಪ್ಪಿ ತಮ್ಮ ಸಿನಿಮಾಗಳಿಗೆ ಬಹಳ ವಿಭಿನ್ನವಾಗಿ ಟೈಟಲ್ ಇಡುವ ಉಪ್ಪಿ ಯುಐ ಅಥವಾ ನಾನಾ ಅರ್ಥಗಳನ್ನು ಹೊಂದುವ ಟೈಟಲ್ ಇಡುವ ಮೂಲಕ ಈಗಾಗಲೇ ಜನರ ತಲೆಯಲ್ಲಿ ಹುಳ ಬಿಟ್ಟಿದ್ದಾರೆ. ಇದೀಗ ಸದ್ದಿಲ್ಲದೇ ಈ ಸಿನಿಮಾದ ಚಿತ್ರೀಕರಣವನ್ನು ಶುರುಮಾಡಿದ್ದು ಇದರ ನಾಯಕಿ ಯಾರಾಗುತ್ತಾರೆ ಎಂಬುದು ಒಂದು ಸಸ್ಪೆನ್ಸ್ ಆಗಿದೆ.

ಇದೀಗ ಈ ಚಿತ್ರಕ್ಕೆ ನಾಯಕಿ ಯಾರಾಗುತ್ತಾರೆ ಎಂಬ ಗೊಂದಲ ಶುರುವಾಗಿದೆ. ಮೊದಲಿಗೆ ಈ ಸಿನಿಮಾದಲ್ಲಿ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದ್ದವು. ನಂತರ ಮಿಲ್ಕ್ ಬ್ಯೂಟಿ ತಮ್ಮನ್ನ ಅವರು ನಾಯಕಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ಇದಕ್ಕೆಲ್ಲಾ ಚಿತ್ರ ತಂಡ ಇಲ್ಲ ಸ್ವತಃ ಉಪ್ಪಿ ಅವರೇ ಉತ್ತರ ನೀಡಬೇಕು.

ಉಪ್ಪಿ ಎಂದರೆ ಕ್ರಿಯೇಟಿವಿಟಿ ಎಂದು ಹೇಳಬಹುದು. ಯಾವಾಗಲು ಏನಾದರು ಒಂದು ಡಿಫರೆಂಟ್ ಆಗಿ ಟ್ರೈ ಮಾಡುತ್ತಾ ಇರುತ್ತಾರೆ. ಈಗಾಗಲೇ ಬಿಡುಗಡೆ ಮಾಡಿರುವ ಪೋಸ್ಟರ್ ಹಲವಾರು ಕಥೆಗಳನ್ನು ಹೇಳುತ್ತಿದೆ. ಇದು ಪಾನ್ ಇಂಡಿಯಾ ಸಿನಿಮಾ ಆಗಿರುವ ಕಾರಣ ಕನ್ನಡದ ಜೊತೆ ತಮಿಳು, ತೆಲುಗು, ಹಿಂದಿ, ಇಂಗ್ಲಿಷ್, ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ಸುಮಾರು 7 ವರ್ಷಗಳ ನಂತರ ನಿರ್ದೇಶನದತ್ತ ಮುಖ ಮಾಡಿರುವ ಉಪ್ಪಿ ತಮ್ಮ ಅಭಿಮಾನಿಗಳಿಗೆ ಯಾವ ರೀತಿ ಮನೋರಂಜನೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top