ಇತ್ತೀಚೆಗೆ ರಾಘವೇಂದ್ರ ರಾಜ್ಕುಮಾರ್ ಅವರ ಮಗ ಯುವರಾಜ್ಕುಮಾರ್ ಹೊಂಬಾಳೆ ಫಿಲ್ಮ್ಸ್ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿಯಾಗುತ್ತಿರುವುದು ಅಧಿಕೃತವಾಗಿತ್ತು. ಈಗ ಅವರ ಚಿತ್ರಕ್ಕೆ ಮಾನುಷಿ ನಾಯಕಿ ಎನ್ನುವ ಸುದ್ದಿ ಹರಿದಾಡುತ್ತಿದೆ. ಅಲ್ಲದೇ, ಮಾನುಷಿ ಕೂಡ ಇದಕ್ಕೆ ಒಪ್ಪಿಕೊಂಡಿದ್ದಾರೆ ಎನ್ನುತ್ತಿವೆ ಮೂಲಗಳು. ಆಕೆಯೂ ಕೂಡ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರಂತೆ.
ಈ ನಡುವೆ ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರ್ ಅವರನ್ನ ವಿಶ್ವ ಸುಂದರಿ ಮಾನುಷಿ ಭೇಟಿ ಮಾಡಿದ್ದು ಭಾರಿ ಸುದ್ದಿಯಾಗಿತ್ತು., ಇದೀಗ ಈ ಭೇಟಿ ಹಿಂದಿನ ಅಸಲಿ ವಿಚಾರ ಬಯಲಾಗಿದೆ.. ಮಾನುಷಿ ಅವರು ಯುವರಾಜ್ ಅವರ ಚಿತ್ರದ ಕುರಿತ ಚರ್ಚೆಗೆ ಬೆಂಗಳೂರಿಗೆ ಬಂದಿದ್ದರು ಎನ್ನದು ಹೇಳಲಾಗುತ್ತಿದೆ.. ವಿಜಯ್ ಕಿರಂಗೂರು ಮತ್ತು ಮಾನುಷಿ ಅವರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗುತ್ತಿದೆ. ಮಾನುಷಿ ಚಿಲ್ಲರ್ ಕನ್ನಡ ಸಿನಿಮಾ ಎಂಟ್ರಿಗೆ ವೇದಿಕೆ ಸಿದ್ಧವಾಗಿದೆ ಎನ್ನಲಾಗ್ತಿದೆ.
A quick Rendezvous with our Miss World @ManushiChhillar at @Hombalefilms office, Bangalore.@VKiragandur pic.twitter.com/FdhJeSmgy3
— Hombale Films (@hombalefilms) June 24, 2022
ಸಂತೋಷ್ ಆನಂದ್ ರಾಮ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಸ್ಕ್ರಿಪ್ಟ್ ಸೇರಿದಂತೆ ಹಲವು ಕೆಲಸಗಳು ಮುಗಿದಿವೆ. ಶೂಟಿಂಗ್ ಗೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಸಿನಿಮಾಗಾಗಿಯೇ ಹಲವು ತಿಂಗಳಿನಿಂದ ಯುವ ಸಖತ್ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರಂತೆ. ಕನ್ನಡ ಸಿನಿಮಾ ರಂಗಕ್ಕೆ ಯುವ ಮತ್ತು ಮಾನುಷಿ ಚಿಲ್ಲರ್ ಈ ಸಿನಿಮಾದ ಮೂಲಕ ಪರಿಚಯವಾಗಲಿದ್ದಾರೆ.
ಅಂದಹಾಗೆ ಮಾನುಷಿ ಚಿಲ್ಲರ್ 2017 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಆಗಿದ್ದರು. ಅಲ್ಲದೇ ಮಾನುಷಿ ಚಿಲ್ಲರ್ ವಿಶ್ವ ಸುಂದರಿ 2017 ಕಿರೀಟವನ್ನೂ ಪಡೆದುಕೊಂಡಿದ್ದರು. ಇದರ ನಂತರ ಮಾನುಷಿ ಚಿಲ್ಲರ್ ಪ್ರಖ್ಯಾತಿ ಶರವೇಗದಲ್ಲಿ ಬೆಳೆದಿತ್ತು. ಮಾನುಷಿ ಚಿಲ್ಲರ್ ಖ್ಯಾತಿ ವಿಶ್ವ ಮಟ್ಟದಲ್ಲಿ ಬೆಳೆದು, ಅಭಿಮಾನಿಗಳನ್ನು ಸಂಪಾದಿಸಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
