IPL 2022 ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಹೇಳಿಕೊಳ್ಳುವಂತಹ ಪ್ರದರ್ಶನ ಏನು ತೋರಿರಲಿಲ್ಲ. ಕಳೆದ ಬಾರಿ ರನ್ನರ್ ಅಪ್ ಸ್ಥಾನವನ್ನು ಅಲಂಕರಿಸಿದ ತಂಡ ಈ ಬಾರಿ ಅಗ್ರ 4 ರ ಸ್ಥಾನವನ್ನು ಸಹ ಅದು ಪಡೆದಿರಲಿಲ್ಲಾ. ತಮ್ಮ ಪ್ರಮುಖ ಆಟಗಾರರನ್ನು ಉಳಿಸಿಕೊಂಡರು ಸಹ ಹೇಳಿಕೊಳ್ಳುವಂತಹ ಪ್ರದರ್ಶನ ತೋರಿರಲಿಲ್ಲಾ. ಇದೇ ಕಾರಣಕ್ಕೆ ತಂಡದ ಆಡಳಿತವನ್ನು ಜನರು ವಿವಿಧ ರೀತಿಯಲ್ಲಿ ಟೀಕಿಸಿದರು. ಇದೀಗ ಕೆಕೆಆರ್ ತಂಡದ ಮಾಜಿ ಆಟಗಾರ, ಪ್ರಸ್ತುತ ಪಶ್ಚಿಮ ಬಂಗಾಳದ ಕ್ರೀಡಾ ಸಚಿವರಾದ ಮನೋಜ್ ತಿವಾರಿ ಅವರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಖಾಸಗಿ ಸುದ್ದಿ ಮಾಧ್ಯಮದ ಜೊತೆ ಮಾತನಾಡಿದ ತಿವಾರಿ ” ಖಂಡಿತವಾಗಿಯೂ ನಾನು ಬದಲಾವಣೆಯನ್ನು ನೋಡಲು ಬಯಸುತ್ತೇನೆ. ಕೆಕೆಆರ್ ಬಳಗದಲ್ಲಿ ಹೆಚ್ಚಾಗಿ ಪಶ್ಚಿಮ ಬಂಗಾಳದ ಆಟಗಾರರನ್ನು ನಾನು ನೋಡಲು ಇಷ್ಟಪಡುತ್ತೇನೆ. ಆದರೆ ಕೆಕೆಆರ್ ಬಳಗದಲ್ಲಿ ನಾನು ಹೆಚ್ಚಾಗಿ ಪಶ್ಚಿಮ ಬಂಗಾಳದ ಆಟಗಾರರನ್ನು ನೋಡಿಲ್ಲ. ಆದರೆ ಇದರ ಕುರಿತು ಆಡಳಿತ ವರ್ಗ ಇಂದಿಗೂ ಬಹಿರಂಗವಾಗಿ ಮಾತನಾಡಿಲ್ಲ. ಮೌನವಾಗಿಯೇ ಇದ್ದಾರೆ” ಎಂದು ಹೇಳಿದ್ದಾರೆ.
ಇದಲ್ಲದೆ ಕೆಕೆಆರ್ ತಂಡದ ಆಡಳಿತವು ಸ್ಥಳೀಯ ಆಟಗಾರರಿಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತಿಲ್ಲ ಎಂದು ತಿವಾರಿ ಟೀಕಿಸಿದರು. ಕೋಲ್ಕತ್ತಾ ತಂಡದಲ್ಲಿ ಪಶ್ಚಿಮ ಬಂಗಾಳ ಪರ ದೇಶೀಯ ಮಟ್ಟದಲ್ಲಿ ಆಡಿದ ಒಬ್ಬ ಆಟಗಾರನೂ ಇರಲಿಲ್ಲ. ಕೊಲ್ಕತ್ತಾ ಫ್ರಾಂಚೈಸಿಗಾಗಿ ಆಡಿದ ಬಂಗಾಳದ ಕೆಲವೇ ಕೆಲವು ಆಟಗಾರರಿದ್ದಾರೆ. ಈ ಪಟ್ಟಿಯಲ್ಲಿ ಸೌರವ್ ಗಂಗೂಲಿ, ಲಕ್ಷ್ಮಿ ರತನ್ ಶುಕ್ಲಾ, ಮೊಹಮ್ಮದ್ ಶಮಿ, ವೃದ್ಧಿಮಾನ್ ಸಹಾ ಮತ್ತು ಸ್ವತಃ ನಾನು ಎಂದಿದ್ದಾರೆ.
ಸ್ಥಳೀಯ ಆಟಗಾರರು ಕ್ರೀಡಾಂಗಣದಲ್ಲಿ ಮಕ್ಕಳಿಗೆ ಸ್ಫೂರ್ತಿ ನೀಡುತ್ತಾರೆ. ಅಭಿಮಾನಿಗಳು ತಮ್ಮ ಸ್ಥಳೀಯ ಆಟಗಾರರನ್ನು ಬೆಂಬಲಿಸಲು ಬಯಸುತ್ತಾರೆ. ಅವರು ಯಾವಾಗಲೂ ತಮ್ಮ ತಂಡವನ್ನು ಬೆಂಬಲಿಸುತ್ತಾರೆ, ಆದರೆ ತಂಡದಲ್ಲಿ ಸ್ಥಳೀಯ ಆಟಗಾರರಿರುವುದನ್ನು ಅವರು ನೋಡಿದಾಗ, ಅವರು ತಮ್ಮೊಂದಿಗೆ ಆ ಭಾವನೆಯನ್ನು ತೆಗೆದುಕೊಳ್ಳುತ್ತಾರೆ. ನಮ್ಮ ಗೌರವಾನ್ವಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಶಾರುಖ್ ಖಾನ್ ಅವರೊಂದಿಗೆ ಮಾತನಾಡಲು ನಾನು ಕೇಳುತ್ತೇನೆ. ಅವರು ಪಶ್ಚಿಮ ಬಂಗಾಳದ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಇದಾದ ನಂತರ ಏನಾಗುತ್ತದೆ ಎಂದು ನೋಡೋಣ ಎಂದು ಮನೋಜ್ ತಿವಾರಿ ಹೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
