ನಟಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮನೆಗೆ ಹೊಸ ಸದಸ್ಯನ ಆಗಮನವಾಗುತ್ತಿದೆ. ಮದುವೆ ಆಗಿ ಕೇವಲ ಎರಡೂವರೆ ತಿಂಗಳಲ್ಲಿ ಈ ದಂಪತಿ ಸಿಹಿ ಸುದ್ದಿ ನೀಡಿದೆ. ತಾವು ತಾಯಿ ಆಗುತ್ತಿರುವ ವಿಚಾರವನ್ನು ಆಲಿಯಾ ಘೋಷಿಸಿದ್ದು ಅಭಿಮಾನಿಗಳಿಗೆ ಖುಷಿ ನೀಡಿದೆ.ಪತಿ ರಣಬೀರ್ ಕಪೂರ್ ಜೊತೆ ವೈದ್ಯರ ತಪಾಸಣೆಯಲ್ಲಿರುವ ವೇಳೆ ತೆಗೆದ ಫೋಟೋವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಶುಭ ಸುದ್ದಿಯನ್ನು ನೀಡಿದ್ದರು. ಬಾಲಿವುಡ್‌ನ ಈ ಸ್ಟಾರ್ ಜೋಡಿಗೆ ನೆಟ್ಟಿಗರು ಕಾಮೆಂಟ್ಸ್ ಮೂಲಕ ಶುಭ ಹಾರೈಸಿದ್ದರು.
Till kids do us apart🤞
Click the link to buy: https://t.co/wndXfd2tub#RanbirAliaWedding #Ralia #RaliaWedding pic.twitter.com/xTN79xbFlA— Durex India (@DurexIndia) April 15, 2022
ಈ ವಿಚಾರ ಹೊರಬರುತ್ತಿದ್ದಂತೆ ಕಾಂಡೋಮ್ ಕಂಪನಿಯಾದ ಡ್ಯೂರೆಕ್ಸ್ ಒಂದು ಟ್ವೀಟ್ ಮೂಲಕ ಸ್ಟಾರ್ ಜೋಡಿಗೆ ಶುಭಾಷಯ ಹೇಳಿದೆ. ಆದರೆ ಇದೀಗ ಈ ಟ್ವೀಟ್ ಸಖತ್ ಫನ್ನಿಯಾಗಿದ್ದು, ಎಲ್ಲಡೆ ವೈರಲ್ ಆಗುತ್ತಿದೆ. ಒಟ್ಟು 2 ಟ್ವೀಟ್ ಮಾಡಿರುವ ಕಂಪನಿ, ಮೊದಲ ಟ್ವೀಟ್ ನಲ್ಲಿ, ‘‘ನಿಮ್ಮ ಸಂತಸದ ಕ್ಷಣದಲ್ಲಿ ನಾವು ಖಂಡಿತವಾಗಿಯೂ ಇರಲಿಲ್ಲ‘ ಎಂದು ಟ್ವೀಟ್ ಮಾಡುವ ಮೂಲಕ ಶುಭಾಷಯ ಕೋರಿದೆ. ಅಲ್ಲದೇ ಶೀಘ್ರದಲ್ಲಿಯೇ ನೀವು ತಂದೆ – ತಾಯಿ ಆಗುತ್ತಿರುವುದಕ್ಕೆ ಶುಭಾಷಯವನ್ನು ಕೋರಿದೆ. ಈ ಟ್ವೀಟ್ ಬಗ್ಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ಚರ್ಚೆಯಾಗುತ್ತಿದೆ.
ಉಳಿದಂತೆ ಸಿನಿಮಾ ಜೀವನದ ಜೊತೆಗೆ ವೈಯಕ್ತಿಕ ಜೀವನದ ಕಡೆಯು ಹೆಚ್ಚು ಗಮನ ಹರಿಸಿದ್ದ ಅಲಿಯಾ ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಸುಮಾರು 5 ವರ್ಷಗಳಂದ ಪ್ರೀತಿಸುತ್ತಿದ್ದ ಈ ಸ್ಟಾರ್ ಜೋಡಿ 2022, ಏಪ್ರಿಲ್ 14ರಂದು ಹಸಮೆಣೆ ಏರಿದರು. ಮುಂಬೈ ಆರ್ ಕೆ ಅಪಾರ್ಟ್ಮೆಂಟ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ರಣಬೀರ್ ಕಪೂರ್ ಅಲಿಯಾ ವಿವಾಹವಾಗಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
