ಭಾರತೀಯ ಅಂಕಿ ಅಂಶ ಕೃಷಿ ಮತ್ತು ನಕ್ಷೆ (ಇಂಡಿಯನ್ ಸ್ಟ್ಯಾಟಿಸ್ಟಿಕ್ಸ್ ಅಗ್ರಿಕಲ್ಚರಲ್ ಅಂಡ್ ಮ್ಯಾಪಿಂಗ್) ಸಂಸ್ಥೆಯು ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ. ಗ್ರೂಪ್ ಎ ಮತ್ತು ಬಿ ಮತ್ತು ಸಿ ಗ್ರೇಡ್‌ನ ವಿವಿಧ ಹುದ್ದೆಗಳಾದ ಮ್ಯಾನೇಜರ್, ಆಫೀಸರ್, ಕ್ಲರ್ಕ್, ಮಲ್ಟಿ ಟಾಸ್ಕ್ ವರ್ಕರ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ
ಅಸಿಸ್ಟಂಟ್ ಮ್ಯಾನೇಜರ್ : 1116
ಫೀಲ್ಡ್ ಆಫೀಸರ್: 542
ಜೂನಿಯರ್ ಸರ್ವೇ ಆಫೀಸರ್: 1012
ಲೋವರ್ ಡಿವಿಷನ್ ಕ್ಲರ್ಕ್ : 1184
ಮಲ್ಟಿ ಟಾಸ್ಕ್ ವರ್ಕರ್ : 1158
ಒಟ್ಟು ಹುದ್ದೆಗಳು : 5012
ವಯೋಮಿತಿ:
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 35 ವರ್ಷ ಮೀರಿರಬಾರದು. ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವರ್ಗಾವಾರು ಮೀಸಲಾತಿ ನಿಯಮ ಅನ್ವಯ ಆಗಲಿದೆ.
ಅರ್ಜಿ ಶುಲ್ಕ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರೂ. 480. ಪಾವತಿಸಬೇಕು.
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 21-07-2022
ಇಂಡಿಯನ್ ಸ್ಟ್ಯಾಟಿಸ್ಟಿಕ್ಸ್ ಅಗ್ರಿಕಲ್ಚರಲ್ ಅಂಡ್ ಮ್ಯಾಪಿಂಗ್ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ವಿಳಾಸ : ಕ್ಲಿಕ್ ಮಾಡಿ https://isam.org.in/recruitment.aspx
ಇತರೆ ಹೆಚ್ಚಿನ ಮಾಹಿತಿಗಳಿಗೆ ಈ ಕೆಳಗಿನ ನೋಟಿಫಿಕೇಶನ್ ಲಿಂಕ್ ಕ್ಲಿಕ್ ಮಾಡಿ ಓದಿರಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
