ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ನಟರ ಹೆಸರನ್ನು ಇಟ್ಟುಕೊಂಡು ಫೇಕ್ ಖಾತೆಗಳನ್ನು ತೆರೆದು ತಮ್ಮ ಬೇಳೆ ಬೇಯಿಸಿಕೊಳ್ಳುವವರ ದೊಡ್ಡ ದಂಡೇ ಇದೆ.. ಇಂಥಾ ಕಿಡಿಗೇಡಿಗಳ ಕೆಂಗಣ್ಣು ಇದೀಗ ನಟಿ ಪವಿತ್ರ ಲೋಕೇಶ್ ಅವರ ಮೇಲೆ ಬಿದ್ದಂತಿದೆ. ಯಾಕೆಂದರೆ ಫೇಸ್ಬುಕ್’ನಲ್ಲಿ ಪುಂಡನೊಬ್ಬನು ಪವಿತ್ರ ಲೋಕೇಶ್ ಅವರ ಹೆಸರಿನಲ್ಲಿ ಫೇಕ್ ಅಕೌಂಟ್’ವೊಂದನ್ನು ತೆರೆದು ಅದು ಪವಿತ್ರ ಅವರದ್ದೇ ಖಾತೆ ಎಂದು ಇಷ್ಟುದಿನ ಅಭಿಮಾನಿಗಳಿಗೆ ಯಾಮಾರಿಸಿದ್ದಾನೆ..
ತಮ್ಮ ಹೆಸರಿನಲ್ಲಿ ನಕಲಿ ಖಾತೆ ತೆರೆದ ಕಿಡಿಗೇಡಿ ವಿರುದ್ಧ ನಟಿ ಪವಿತ್ರಾ ಲೋಕೇಶ್, ನಜರಾಬಾದ್‌ನ ಸೈಬರ್ ಮತ್ತು ಆರ್ಥಿಕ ಅಪರಾಧ ಠಾಣೆಗೆ ದೂರು ನೀಡಿದ್ದಾರೆ. “ನಕಲಿ ಖಾತೆ ತೆರೆದಿರುವವರು ಫೇಸ್ ಬುಕ್‌ನ ಇತರ ಫೇಜ್‌ಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ.” ಎಂದು ನಟಿ ಆರೋಪಿಸಿದ್ದಾರೆ.
‘ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದಲ್ಲದೇ, ಘನತೆಗೆ ಧಕ್ಕೆ ತರುವ ಸಂದೇಶಕಳುಹಿಸುವ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಕೋರಿದ್ದಾರೆ. ನಟಿ ಪವಿತ್ರ ಲೋಕೇಶ್ ಅವರ ದೂರಿನ ಬಗ್ಗೆ ಸೈಬರ್ ಅಪರಾಧ ಪೊಲೀಸರು ತನಿಖೆ ನಡೆಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
