ಸಂಜಯ್ ದತ್ ಮತ್ತು ರಣ್‌ಬೀರ್ ಕಪೂರ್ ಕಾಂಬಿನೇಷನ್ ನ ಶಮ್ಯೇರಾ ಸಿನಿಮಾದ ಪೋಸ್ಟರ್ ಮತ್ತು ಟ್ರೈಲರ್ ಭಾರೀ ಸದ್ದು ಮಾಡುತ್ತಿವೆ. ನಟ ರಣಬೀರ್ ಅವರ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಸಾಹಸಮಯ ಚಿತ್ರ ಮಾಡುತ್ತಿರುವುದನ್ನು ಕಂಡು ಅವರ ಅಭಿಮಾನಿಗಳು ಖುಷಿ ಪಡುತ್ತಿದ್ದರೇ, ಒಂದು ವರ್ಗದ ಜನರು ಹಲವಾರು ಕಾರಣಗಳಿಗಾಗಿ ಚಿತ್ರವನ್ನು ಟೀಕಿಸಿದ್ದಾರೆ. .
ಈ ಸಿನಿಮಾದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ಆಗುವಂತಹ ದೃಶ್ಯಗಳು ಇವೆಯಂತೆ. ಅಲ್ಲದೇ, ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಅವುಗಳು ಸ್ಪಷ್ಟವಾಗಿವೆ ಅಂತೆ ಹೀಗಾಗಿಯೇ ಈ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂಬ ಒತ್ತಡ ಹೆಚ್ಚಿದೆ. ಇಂತಹ ದೃಶ್ಯಗಳನ್ನೇ ಇಟ್ಟುಕೊಂಡು ರಿಲೀಸ್ ಮಾಡಿದರೆ, ಹೋರಾಟ ಮಾಡುವುದಾಗಿ ಹಿಂದೂಪರ ಸಂಘಟನೆಗಳು ತಿಳಿಸಿವೆ.
🛑 Bollywood has been defaming Hindu Dharma 4 many years by portraying villains as Brahmins, Sadhus, Saints, Priests…
✊🏻Hindus r demanding that d govt should pay serious attention 2 this & stop issuing certificates 2 such films!#ShamsheraTrailer#BoycottBollywood pic.twitter.com/MlfwLT72X7
— 🚩 DIPTI 🚩 (@__DIPTI__) June 24, 2022
ಸಿನಿಮಾದಲ್ಲಿ ಸಂಜಯ್ ದತ್ ಅವರು ವಿಲನ್ ಪಾತ್ರ ಮಾಡಿದ್ದು ಆ ಪಾತ್ರವು ಹಣೆಗೆ ಹಿಂದೂ ಧರ್ಮೀಯರ ಪವಿತ್ರ ತಿಲಕ, ವಿಭೂತಿಯನ್ನು ಹಚ್ಚಿಕೊಳ್ಳುತ್ತದೆ.. ಹಾಗಾಗಿ ಹಿಂದೂ ಧರ್ಮೀಯ ಪಾತ್ರವನ್ನು ಸಿನಿಮಾದಲ್ಲಿ ವಿಲನ್ ಆಗಿ ತೋರಿಸಲಾಗಿದೆ. ಇದು ಹಿಂದೂ ಧಾರ್ಮಿಕ ಭಾವನೆಗೆ ದಕ್ಕೆ ತಂದಿದ್ದು ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಹಿಂದೂ ಪರ ಸಂಘಟನೆಗಳು ಒತ್ತಾಯಿಸಿವೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
