ಎಸ್.ಆರ್.ಕೆ ಎಂದಾಕ್ಷಣ ತಕ್ಷಣ ನೆನಪಾಗುವುದು ಶಾರುಖ್ ಖಾನ್. ಆದರೆ ನಮ್ಮ ಕನ್ನಡಿಗರಿಗೆ ಎಸ್.ಆರ್.ಕೆ ಎಂದರು ಅದು ನಮ್ಮ ಹ್ಯಾಟ್ರಿಕ್ ಹೀರೋ ಶಿವಣ್ಣ. ಅಮೆಜಾನ್ ಪ್ರೈಮ್ ವಿಡಿಯೋ ತನ್ನ ಟ್ವಿಟರ್ ಖಾತೆಯಲ್ಲಿ ಯುವರ್ ಫೆವರೆಟ್ ಎಸ್.ಆರ್.ಕೆ ಫಿಲ್ಮ ಎಂಬ ಪ್ರಶ್ನೆ ಕೇಳಿತ್ತು. ಇದಕ್ಕೆ ನಮ್ಮ ಕನ್ನಡಿಗರು ಎಸ್.ಆರ್.ಕೆ ಎಂದರು ಶಿವರಾಜ್ ಕುಮಾರ್ ಎಂದು ಹೇಳಿದ್ದಾರೆ.
ಇತ್ತೀಚಿಗೆ ಅಮೆಜಾನ್ ಪ್ರೈಮ್ ವಿಡಿಯೋ ಟ್ವಿಟ್ಟರ್ ನಲ್ಲಿ ಒಂದು ಅಭಿಯಾನವನ್ನು ಶುರು ಮಾಡಿತ್ತು. ಎಸ್.ಆರ್.ಕೆ ಅವರ ನಿಮ್ಮ ನೆಚ್ಚಿನ ಸಿನಿಮಾ ಯಾವುದೆಂದು ಪ್ರಶ್ನೆ ಕೇಳಿತ್ತು. ಇದಕ್ಕೆ ಬಂದ ಉತ್ತರಗಳಲ್ಲಿ ಹೆಚ್ಚಾಗಿ ಕನ್ನಡ ಸಿನಿಮಾಗಳ ಹೆಸರೇ ಇದ್ದು, ಅದು ನಮ್ಮ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಸಿನಿಮಾಗಳ ಹೆಸರೇ ಇದೆ.
your favourite SRK film 👑
— amazon prime video IN (@PrimeVideoIN) June 25, 2022
ಅಷ್ಟಕ್ಕೂ ಅಮೆಜಾನ್ ಅವರ ಪ್ರಕಾರ ಎಸ್.ಆರ್.ಕೆ ಎಂದರು ಅದು ಶಾರುಖ್ ಖಾನ್. ಹೀಗಾಗಿ ಅವರು ಶಾರುಖ್ ಖಾನ್ ಅವರ ಯಾವ ಸಿನಿಮಾಗಳು ನಿಮಗೆ ಇಷ್ಟ ಎಂದು ಕೇಳಿತ್ತು. ಆದರೆ ಅವರಿಗೆ ಸಿಕ್ಕ ಉತ್ತರ ಮಾತ್ರ ಡಿಫರೆಂಟ್. ಏಕಂದರೆ ಇಲ್ಲಿ ಶಾರುಖ್ ಖಾನ್ ಅವರ ಸಿನಿಮಾಕ್ಕಿಂತ ಶಿವರಾಜ್ ಕುಮಾರ್ ಅವರ ಸಿನಿಮಾದ ಹೆಸರೇ ಜಾಸ್ತಿ ಇತ್ತು. ಶಿವರಾಜ್ ಕುಮಾರ್ ಅವರ ಸಿನಿಮಾವನ್ನು ಮೆಚ್ಚುವಂತಹ ಅಭಿಮಾನಿಗಳ ಸಂಖ್ಯೆ ಹೆಚ್ಚಿದ್ದರೆ ಅಮೆಜಾನ್ ಶಿವಣ್ಣ ಅವರನ್ನೇ ಪರಿಗಣಿಸಬೇಕಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
