ಪೋಷಕರಿಗೆ ತಮ್ಮ ಮಕ್ಕಳ ಮೇಲೆ ಬಹಳ ಪ್ರೀತಿ ಕಾಳಜಿ ಇರುತ್ತದೆ. ತಮ್ಮ ಮಕ್ಕಳ ಹೇಳಿಗೆಗಾಗಿ ಹಗಲು ರಾತ್ರಿ ಶ್ರಮಿಸುತ್ತಾರೆ. ತಮ್ಮ ಮಕ್ಕಳಿಗೆ ಸಣ್ಣ ನೋವಾದರೂ ಅವರ ಕೈಯಲ್ಲಿ ಸಹಿಸಿಕೊಳ್ಳಲು ಆಗುವುದಿಲ್ಲಾ. ಆದರೆ ಇದನ್ನೇ ಬಂಡವಾಳವಾಗಿ ಇಟ್ಟುಕೊಂಡು ಮಗ ತಮ್ಮ ಪೋಷಕರಿಗೆ ಮೋಸ ಮಾಡಲು ಹೋಗಿ ಇದೀಗ ಪೋಲೀಸರ ಅತಿಥಿಯಾಗಿದ್ದಾನೆ.
ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ಅಂಬಾಗಿಲು ನಿವಾಸಿಯಾಗಿರುವ ವರುಣ್ ನಾಯಕ್ ಜೂನ್ 26 ರಂದು ಬೆಳಗಿನ ಜಾವಾ 3 ಘಂಟೆ ಸುಮಾರಿಗೆ ತನ್ನದೇ ಮೊಬೈಲ್ ನಿಂದ ತಮ್ಮ ಪೋಷಕರಿಗೆ ಕರೆ ಮಾಡಿ ನಾನು ಕಿಡ್ನಾಪ್ ಆಗಿದ್ದೇನೆ, ನನ್ನನು ಬಿಡುಗಡೆ ಗೊಳಿಸಲು ದುಷ್ಕರ್ಮಿಗಳು 5 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆ, ಕೂಡಲೇ 5 ಲಕ್ಷ ರೂಪಾಯಿ ಕಳುಹಿಸಿ ಎಂದು ಭಯದಿಂದ ಹೇಳಿದ್ದಾನೆ.
ಇದರಿಂದ ಭಯಗೊಂಡ ಪೋಷಕರು ಹಣ ಕೊಡುವುದೋ ಬೇಡವೋ ಎಂದು ಯೋಚಿಸಿ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವಕನ ಮೊಬೈಲ್ ಲೊಕೇಷನ್ ಪತ್ತೆ ಮಾಡಿದ್ದಾರೆ. ಕರೆ ಮಾಡಿದ ಯುವಕ ದೂರದ ಗೋವಾದಲ್ಲಿರುವುದು ಗೊತ್ತಾಗಿದೆ ಕೂಡಲೇ ಗೋವಾಕ್ಕೆ ಇಬ್ಬರು ಸಿಬ್ಬಂದಿಗಳನ್ನು ಕಳುಹಿಸಿದರು.
ಗೋವಾ ಭೇಟಿಯಾದ ಪೊಲೀಸರಿಗೆ ಒಂದು ಕ್ಷಣ ಶಾಕ್ ಆಗಿತ್ತು. ಏಕೆಂದರೆ ಅಪಹರಣಕ್ಕೊಳಗಾದ ಯುವಕ ತನ್ನ ಸ್ನೇಹಿತರ ಜೊತೆ ಗೋವಾದ ಕ್ಯಾಸಿನೋ ಒಂದರಲ್ಲಿ ಮೋಜು ಮಸ್ತಿಯಲ್ಲಿ ಬ್ಯುಸಿಯಾಗಿದ್ದ. ತಮ್ಮ ಪೋಷಕರಿಂದ ಹಣ ವಸೂಲಿ ಮಾಡಲು ಈ ರೀತಿ ಮಾಡಿದೆ ಎಂದು ಯುವಕ ತಪೊಪ್ಪಿಕೊಂಡಿದ್ದು, ಪೋಲೀಸರ ಸಮಯ ವ್ಯರ್ಥ ಮಾಡಿರುವುದಲ್ಲದೆ ವಂಚನೆ ನಡೆಸಿರುವ ಆರೋಪದಡಿ ಇವರನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
