ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತು ಎಷ್ಟು ಸತ್ಯ ಆಲ್ವಾ. ಇದಕ್ಕೆ ಮುಖ್ಯ ಉದಾಹರಣೆ ಎಂದರೆ ಅದು ಇರುವೆಗಳು. ತಾವು ಎಷ್ಟು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತದೆ ಎಂದರೆ ಎಂತಹ ಬಲಿಷ್ಠ ವಸ್ತುಗಳನ್ನು ಸಹ ತಮ್ಮ ಒಗ್ಗಟ್ಟಿನಿಂದ ಬಿಳಿಸಬಹುದು. ಆದರೆ ಇದೀಗ ಇರುವೆಗಳು ತಮ್ಮ ಒಗ್ಗಟ್ಟಿನಿಂದ ಒಂದು ದೊಡ್ಡ ತಪ್ಪನ್ನು ಮಾಡಿದ್ದೂ, ಇದೀಗ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
ಇರುವೆಗಳು ತಮಗೆ ಆಹಾರ ಬೇಕಾದಲ್ಲಿ ಅವು ಎಂದಿಗೂ ಒಂಟಿಯಾಗಿ ಬರುವುದಿಲ್ಲ. ಒಗ್ಗಟ್ಟಿನಿಂದಲೇ ಬಂದು ತಮ್ಮ ಆಹಾರವನ್ನು ಸಂಗ್ರಹಿಸಿ ಕಷ್ಟದ ಸಮಯದಲ್ಲಿ ಉಪಯೋಗಿಸಿಕೊಳ್ಳುತ್ತಾವೆ. ಆದರೆ ಇಲ್ಲೊಂದು ಇರುವೆಯ ಗುಂಪು ಆಹಾರವನ್ನು ಸಂಗ್ರಹಿಸುವ ಬದಲು ಚಿನ್ನದ ಸಾರವನ್ನು ಕೊಂಡೊಯ್ಯಲು ಮುಂದಾಗಿದ್ದು, ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಇದರ ಕುರಿತು ತಮ್ಮ ಅನಿಸಿಕೆಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
Tiny gold smugglers 😀😀
The question is,under which section of IPC they can be booked? pic.twitter.com/IAtUYSnWpv— Susanta Nanda IFS (@susantananda3) June 28, 2022
ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಸಂತ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಇರುವೆಗಳು ಚಿನ್ನದ ಸರವನ್ನು ಎಳೆದೊಯ್ಯುವ ವಿಡಿಯೋವನ್ನು ಹಂಚಿಕೊಂಡಿದ್ದು, “ಸಣ್ಣ ಚಿನ್ನದ ಕಳ್ಳಸಾಗಣೆದಾರರು, ಪ್ರಶ್ನೆಯೆಂದರೆ, IPC ಯ ಯಾವ ಸೆಕ್ಷನ್ ಅಡಿಯಲ್ಲಿ ಅವರನ್ನು ಬುಕ್ ಮಾಡಬಹುದು?” ಎಂದು ಹಾಸ್ಯಾಸ್ಪವಾಗಿ ಬರೆದಿದ್ದಾರೆ.
ಇನ್ನು ಈ ವಿಡಿಯೋ ಟ್ವಿಟ್ಟರ್ ನಲ್ಲಿ ಸಕತ್ ವೈರಲ್ ಆಗುತ್ತಿದ್ದು 1.43 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು ಮತ್ತು 4 ಸಾವಿರಕ್ಕೂ ಹೆಚ್ಚು ಜನ ಇದನ್ನು ಇಷ್ಟಪಟ್ಟಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
