ಜನರು ಬೀದಿ ನಾಯಿಯನ್ನು ಕಂಡರೆ ಸಾಕು ಅದಕ್ಕೆ ಕಲ್ಲು ಹೊಡೆದು ಅದನ್ನು ಓಡಿಸುತ್ತಾರೆ. ಇನ್ನು ಕೆಲವರು ಅದಕ್ಕೆ ಏನಾದರು ಏನಾದರು ತೊಂದರೆ ಆದರೆ ಅದರ ಸಹಾಯಕ್ಕೆ ಹೋಗುವುದಕ್ಕೂ ಹಿಂಜರಿಯುತ್ತಾರೆ. ಆದರೆ ಚಾರ್ಲಿ ಸಿನಿಮಾ ಇವರ ಮನಸ್ಸನ್ನು ಬದಲಿಸಿದೆ ಎಂದು ಹೇಳಬಹುದು. ಏಕೆಂದರೆ ಕಾಸರಗೋಡಿನ ಗ್ರಾಮಸ್ಥರು ಬೀದಿನಾಯಿಯ ಜೀವ ಉಳಿಸಲು ಏನೆಲ್ಲಾ ಸಾಹಸ ಮಾಡಿದ್ದಾರೆ ಗೊತ್ತಾ?
ಈ ನಾಯಿಯ ಹೆಸರು “ಮುತ್ತುಮಣಿ”. ಈ ನಾಯಿಯ ಸ್ತನಗಳ ಬಳಿ ಊತವನ್ನು ಜನರು ಗಮನಿಸಿದ್ದಾರೆ. ಒಂದು ವಾರದಲ್ಲಿ ಅದು ತುಂಬಾ ದೊಡ್ಡದಾಗಿತ್ತು. ಹೀಗಾಗಿ ಹಳ್ಳಿಯ ನಿವಾಸಿಗಳು ಮುತ್ತುಮಣಿಯನ್ನು ಸ್ಥಳೀಯ ಪಶು ವೈದ್ಯರ ಬಳಿ ಕರೆದುಕೊಂಡು ಹೋದರು. ಅಲ್ಲಿ ವೈದ್ಯರು ಸಿರಿಂಜ್ ಬಳಸಿ ಆ ಊತದಲ್ಲಿರುವ ದ್ರವವನ್ನುತೆಗೆದರು. ಇದಾಗಿಯೂ ಒಂದು ವಾರದಲ್ಲಿ ಮತ್ತೆ ಊತ ಮರುಕಳಿಸಿತು. ಇದರಿಂದ ಭಯಭೀತರಾದ ಗ್ರಾಮಸ್ಥರು ಸ್ಥಳೀಯ ಪಶುವೈದ್ಯರ ಸಹಾಯದಿಂದ ಡಾ. ಮುರಳೀಧರನ್ ಅವರನ್ನು ಕರೆದರು.
ಮುತ್ತುಮಣಿಯನ್ನು ಪರಿಶೀಲಿಸಿದ ಡಾ. ಮುರಳೀಧರನ್ ಅವರು ಇದಕ್ಕೆ ಶಸ್ತ್ರಚಿಕಿತ್ಸೆ ಮಾಡಿ ನಂತರ ಸ್ವಲ್ಪ ದಿನಗಳ ಕಾಲದವರೆಗೆ ಸರಿಯಾದ ಆರೈಕೆ ಮಾಡಬೇಕು ಮತ್ತು ಇದಕ್ಕೆ ಹಣ ಖರ್ಚಾಗುತ್ತದೆ ಎಂದು ತಿಳಿಸಿದರು. ಮುತ್ತುಮಣಿಯ ಪ್ರಾಣವನ್ನು ಉಳಿಸಬೇಕೆಂದು ಪಣ ತೊಟ್ಟ ಗ್ರಾಮಸ್ಥರು ಒಟ್ಟುಗೂಡಿ ಹಣ ಸಂಗ್ರಹಿಸಿ ಶಸ್ತ್ರ ಚಿಕಿತ್ಸೆಗೆ ಸಹಾಯ ಮಾಡಿದರು.
ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಾದ ಡಾ. ಮುರಳೀಧರನ್ ಅವರು ಮಾತನಾಡಿ “, ಗಡ್ಡೆ ಮುತ್ತುಮಣಿಯ ಬೆನ್ನಿಗೆ ಅವರಿಸಿ ಆಕೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಹೇಳಿದರು. “ಅವರು ಈಗ ತ್ರಿಕರಿಪುರ ಪಶುವೈದ್ಯಕೀಯ ಆಸ್ಪತ್ರೆಯ ಎಬಿಸಿ ಕೇಂದ್ರದ ಆಶ್ರಯತಾಣದಲ್ಲಿ ಚೇತರಿಸಿಕೊಳ್ಳುತ್ತಿದೆ. ಅದು ಮತ್ತೆ ಮೊದಲಿನಂತೆ ಆಗುತ್ತದೆ” ಎಂದು ತಿಳಿಸಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
