fbpx
ಸಮಾಚಾರ

ನಿರ್ಮಲ ಸೀತಾರಾಮನ್ ರಿಂದ ಕರ್ನಾಟಕಕ್ಕೆ ಮತ್ತೆ ಮೋಸ

ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲ ಸೀತಾರಾಮನ್ ಈವರೆಗೂ ಕರ್ನಾಟಕಕ್ಕೆ ಒಂದು ಪೈಸೆಯ ಕೆಲಸ ಮಾಡಿಲ್ಲ ಎಂಬುದು ಸ್ವತಃ ಅವರ ಪಕ್ಷದ ಮಂದಿಗೂ ಒಳಗೊಂಡಂತೆ ಎಲ್ಲರಿಗೂ ಗೊತ್ತಿರುವ ವಿಷಯ.. ಇದೀಗ ಮತ್ತೊಮ್ಮೆ ನಿರ್ಮಲ ಸೀತಾರಾಮನ್ ಕರ್ನಾಟಕಕ್ಕೆ ಮೋಸ ಮಾಡಿದ್ದಾರೆ..

2017ರಲ್ಲಿ ಜಿಎಸ್‌ಟಿ ಜಾರಿಯಾದಾಗ ರಾಜ್ಯಗಳಿಗೆ ಆಗುವ ನಷ್ಟವನ್ನು ತುಂಬಿಕೊಡುವ ಸಲುವಾಗಿ 5 ವರ್ಷಗಳವರೆಗೆ ಕೇಂದ್ರ ಸರಕಾರ ಪರಿಹಾರ ನೀಡುವ ವಾಗ್ಧಾನ ನೀಡಿ ಅದನ್ನು ಮುಂದುವರಿಸಿಕೊಂಡು ಬಂದಿತ್ತು. ಇದೇ ಗುರುವಾರ (ಜೂ.30)ಕ್ಕೆ ಈ ಪರಿಹಾರ ಅವಧಿ ಕೊನೆಗೊಳ್ಳಲಿದ್ದು, ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವನ್ನು ವಿಸ್ತರಿಸುವ ಬಗ್ಗೆ ಜಿಎಸ್ಟಿ ಮಂಡಳಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಸಭೆ ಮುಗಿಸಲಾಗಿದ್ದು, ರಾಜ್ಯ ಸರಕಾರಗಳ ಪಾಲಿಗೆ ನಿರಾಶೆಯ ಸಂಗತಿಯಾಗಿದೆ. ಈ ಮೂಲಕ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಕರ್ನಾಟಕಕ್ಕೆ ಮತ್ತೆ ಮೋಸ ಮಾಡಿದ್ದಾರೆ…

 

 

ರಾಜ್ಯಗಳ ಹಿತಾಸಕ್ತಿ ಗಮನಿಸಿಕೊಂಡು ಕನಿಷ್ಠ ಪಕ್ಷ ಮುಂದಿನ ಎರಡು ವರ್ಷಗಳವರೆಗಾದರೂ ಜಿಎಸ್ಟಿ ಪರಿಹಾರವನ್ನು ವಿಸ್ತರಿಸಬಹುದಿತ್ತು. ಕೊರೊನಾ ಸಂಕಷ್ಟದಲ್ಲಿ ಮಿಂದೆದ್ದ ರಾಜ್ಯಗಳು ಸಲ್ಲಿಸಿರುವ ಬೇಡಿಕೆಯಲ್ಲಿ ನ್ಯಾಯವಿದೆ.. ಒಂದು ವೇಳೆ ಮಧ್ಯಾಂತರದಲ್ಲಿ ಕೊರೊನಾ ಬರದೇ ಹೋಗಿದ್ದರೆ ಬೇರೆ ವಾದವಾಗಿರುತ್ತಿತ್ತು ಎಂಬುದು ಆರ್ಥಿಕ ತಜ್ಞರ ವಾದವಾಗಿದೆ.

ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ರಾಜ್ಯಗಳಿಗೆ ಆಗುವ ವರಮಾನ ನಷ್ಟವನ್ನು ಕೇಂದ್ರವು ಭರ್ತಿ ಮಾಡಿಕೊಡುವ ವ್ಯವಸ್ಥೆಯು ಜೂನ್ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಆದರೆ, ಈ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಬಿಜೆಪಿಯ ವಿರೋಧ ಪಕ್ಷಗಳ ಆಡಳಿತ ಇರುವ ರಾಜ್ಯ ಸರ್ಕಾರಗಳು ಬಲವಾಗಿ ಆಗ್ರಹಿಸುತ್ತಿವೆ.. ಇದನ್ನು ಇನ್ನೂ 5 ವರ್ಷ ವಿಸ್ತರಿಸಬೇಕು ಎನ್ನುವುದು ದಕ್ಷಿಣ ರಾಜ್ಯಗಳ ಒಕ್ಕೊರಲ ಆಗ್ರಹವಾಗಿದೆ. ಅಲ್ಲದೇ, ರಾಜ್ಯಗಳಿಗೆ ಜಿಎಸ್‌ಟಿ ಆದಾಯದಲ್ಲಿ ಶೇ. 50ರ ಬದಲಿಗೆ, ಶೇ. 70-80ರಷ್ಟು ಆದಾಯ ಹಂಚಿಕೆಯಾಗಬೇಕು ಎಂದೂ ರಾಜ್ಯಗಳು ಜಿಎಸ್‌ಟಿ ಮಂಡಳಿಯಲ್ಲಿ ಆಗ್ರಹಿಸಿವೆ.

ಕೋವಿಡ್‌ ಮತ್ತು ಇತರ ಬಿಕ್ಕಟ್ಟುಗಳಿಂದ ಕಳೆದ ಎರಡು ವರ್ಷಗಳಲ್ಲಿ ರಾಜ್ಯಗಳ ಆದಾಯ ಕುಸಿದಿದ್ದು, ಜಿಎಸ್‌ಟಿ ಪರಿಹಾರ ವಿಸ್ತರಣೆಗೆ ಹಲವು ರಾಜ್ಯಗಳು ಪಟ್ಟು ಹಿಡಿದಿವೆ. ಜಿಎಸ್‌ಟಿ ಜಾರಿಗೊಳಿಸಿದ ಸಂದರ್ಭದಲ್ಲಿ ಆದಾಯ ನಷ್ಟ ತುಂಬಿಕೊಡುವುದಾಗಿ ಕೇಂದ್ರ ಸರಕಾರವು ರಾಜ್ಯಗಳಿಗೆ ಭರವಸೆ ನೀಡಿತ್ತು. ಜತೆಗೆ ವರ್ಷ ವರ್ಷವೂ ಆದಾಯ ಹೆಚ್ಚಳವಾಗಲಿದೆ ಎಂದೂ ಕೇಂದ್ರ ಸರಕಾರ ರಾಜ್ಯಗಳಿಗೆ ಭರವಸೆ ನೀಡಿತ್ತು. ಆದರೆ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವನ್ನು ವಿಸ್ತರಿಸುವ ಬಗ್ಗೆ ಯಾವುದೇ ತೀರ್ಮಾನವನ್ನು ಕೈಗೊಳ್ಳದೇ ರಾಜ್ಯಗಳಿಗೆ ದ್ರೋಹ ಮಾಡಲಾಗಿದೆ..

ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವನ್ನು ವಿಸ್ತರಿಸುವ ವ್ಯವಸ್ಥೆ ಆಗದಿದ್ದರೆ ಹೆಚ್ಚಿನ ಜನಸಂಖ್ಯೆ ಇರುವ, ಬಳಕೆಯೂ ಹೆಚ್ಚಿಗೆ ಇರುವ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳು ಗುಜರಾತ್‌ನಂತಹ ರಾಜ್ಯಗಳಿಗಿಂತ ಹೆಚ್ಚಿನ ಆದಾಯ ಸಂಗ್ರಹಿಸುತ್ತವೆ. ಜನಸಂಖ್ಯೆಗೆ ಅನುಗುಣವಾಗಿ ನಮ್ಮ 100ರೂ ತೆರಿಗೆಗೆ ಕೇಂದ್ರ 40 ರೂ ವಾಪಸ್ ಕೊಡುತ್ತಿದೆ. ಇದರ ಜೊತೆಗೆ ರಾಜಸ್ಥಾನ, ಗುಜರಾತ್ ಗಳಿಗೆ ಹೆಚ್ಚುವ ಅನುದಾನ ಕೊಡ್ತಿದೆ. ಯುಪಿಗೆ 100 ರೂಗೆ 256 ರೂ, ಬಿಹಾರ ಕ್ಕೆ 298 ರೂ ಕೊಡುತ್ತಿದೆ. ಕೇಂದ್ರ ಹೀಗೆ ತಾರತಮ್ಯ ಮಾಡುತ್ತಿದೆ. ಅಲ್ಲಿನ ಜನಸಂಖ್ಯೆ, ಕೊರತೆ ಬಜೆಟ್, ತಲಾದಾಯ ಹಿನ್ನೆಲೆಯಲ್ಲಿ ಹೆಚ್ಚು ಸಹಾಯಧನ, ಅನುದಾನ ಕೊಡುತ್ತಿದೆ. ಆ ರಾಜ್ಯಗಳನ್ನು ಮೇಲೆತ್ತಲು ಸಂದ್ಭರಿತ, ಉತ್ತಮ ಮಾರ್ಕ್ಸ್ ಪಡೆದ ನಮ್ಮ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಇದು ಒಂದು ರೀತಿ ಕರ್ನಾಟಕದಂತಹ ಸಂಪತ್ ಭರಿತ ರಾಜ್ಯಕ್ಕೆ ಮಾಡಿದ ಮೋಸ ವಂಚನೆ ಎಂದರೆ ತಪ್ಪಾಗುವುದಿಲ್ಲ

ರಾಜ್ಯಗಳಿಗಿದ್ದ ಆರ್ಥಿಕ ಸ್ವಾಯತ್ತತೆಯನ್ನು ಜಿಎಸ್ಟಿ ಮೂಲಕ ಕಿತ್ತುಕೊಂಡು, ರಾಜ್ಯಗಳು ವರಮಾನದ ಮೂಲಗಳನ್ನು ಕಂಡುಕೊಳ್ಳಬೇಕು ಅಂದ್ರೆ ಎಲ್ಲಿಂದ ಕಂಡುಕೊಳ್ಳಬೇಕು ? ಇದು ಕರ್ನಾಟಕದಂತಹ ರಾಜ್ಯಗಳಿಗೆ ಮಾಡುವ ಮೋಸ ಎಂಬುದು ನಾಗರೀಕರ ಅಭಿಪ್ರಾಯವಾಗಿದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top