fbpx
ಸಮಾಚಾರ

ಕೆಜಿಎಫ್ ನಟನ ಕಾರು ಭೀಕರ ಅಪಘಾತ: ಸಂಪೂರ್ಣ ನಜ್ಜುಗುಜ್ಜಾದ ಐಷಾರಾಮಿ ಕಾರು

ಯಶ್ ಅಭಿಯನದ ಕೆಜಿಎಫ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಬಿಎಸ್ ಅವಿನಾಶ್ ಕಾರು ಅಪಘಾತವಾಗಿದೆ. ಬೆಂಗಳೂರಿನ ಅನಿಲ್ ಕುಂಬ್ಳೆ ಸರ್ಕಲ್ ಬಳಿ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಕ್ಯಾಂಟರ್ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರು ಜಖಂಗೊಂಡಿದೆ. ಆದರೆ ನಟ ಬಿಎಸ್ ಅವಿನಾಶ್ ಅಪಾಯದಿಂದ ಪಾರಾಗಿದ್ದಾರೆ.

ಈ ಸಂಬಂಧ ಕಬ್ಬನ್ ಪಾರ್ಕ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರು ಜಯನಗರದಿಂದ ತಮ್ಮ ಕಾರಿನಲ್ಲಿ ಎಚ್‌ಆರ್‌ಆರ್‌ ಲೇಔಟ್‌ಗೆ ತೆರಳುತ್ತಿದ್ದರು. ಎಂ.ಜಿ. ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ ಕಂಟೇನರ್‌ ಇವರ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಕಂಟೇನರ್‌ ಚಾಲಕ ಶಿವಗೌಡನನ್ನು ವಶಕ್ಕೆ ಪಡೆದು, ವಾಹನ ಜಪ್ತಿ ಮಾಡಲಾಗಿದೆ ಎಂದು ಕಬ್ಬನ್‌ಪಾರ್ಕ್‌ ಸಂಚಾರಿ ಪೊಲೀಸರು ತಿಳಿಸಿದ್ದಾರೆ.

 

 

ಅಂದಹಾಗೆ ಕೆಜಿಎಫ್ ಸಿನಿಮಾ ರಾಕಿಂಗ್ ಸ್ಟಾರ್ ಯಶ್‍ಗೆ ನ್ಯಾಷನಲ್ ಸ್ಟಾರ್ ಪಟ್ಟ ತಂದುಕೊಟ್ಟಿತ್ತು. ಅಲ್ಲದೇ ಸಿನಿಮಾದಲ್ಲಿ ಸಖತ್ ಹೈಲೆಟ್ ಆಗಿ ಕಾಣಿಸಿಕೊಂಡಿದ್ದ ಅವಿನಾಶ್ ಅವರ ಪಾತ್ರ ಜನರ ಗಮನವನ್ನು ಬೇಗ ಸೆಳೆದಿತ್ತು. ಕೆಜಿಎಫ್ ಸಿನಿಮಾ ರೆಕಾರ್ಡ್ ಮಾಡುವುದರ ಜೊತೆಗೆ ಸಿನಿಮಾದಲ್ಲಿ ಅಭಿನಯಿಸಿದ್ದ ಎಲ್ಲಾ ಕಲಾವಿದರಿಗೂ ಹೆಸರು ತಂದು ಕೊಟ್ಟಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top