fbpx
ಸಮಾಚಾರ

ಸದ್ದಿಲ್ಲದೇ ವಿದೇಶಕ್ಕೆ ಹಾರಿದ ಕ್ರಾಂತಿ ಸಿನಿಮಾ ತಂಡ! ಕನ್ನಡ ರಾಜ್ಯೋತ್ಸವಕ್ಕೆ ತೆರೆ ಮೇಲೆ ಅಪ್ಪಳಿಸಲಿದೆ ಡಿಬಾಸ್ ಕ್ರಾಂತಿ?

ನಟ “ಚಾಲೆಂಜಿಂಗ್ ಸ್ಟಾರ್” “ಡಿಬಾಸ್” ದರ್ಶನ್ ಅವರ ಮುಂದಿನ ಸಿನಿಮಾ ಕ್ರಾಂತಿ ಎಂಬುದು ನಮಗೆಲ್ಲಾ ಗೊತ್ತು. ಈಗಾಗಲೇ ಸಿನಿಮಾದ ಅರ್ಧದಷ್ಟು ಕೆಲಸ ಮುಗಿಸಿರುವ ಚಿತ್ರ ತಂಡ ಸಾಂಗ್ ಶೂಟಿಂಗ್ ಗಾಗಿ ವಿದೇಶಕ್ಕೆ ತೆರಳಿದೆ.

ಯಾವುದೇ ಸುಳಿವನ್ನು ಬಿಡದೆ ಚಿತ್ರತಂಡ ಶೂಟಿಂಗ್ ಅನ್ನು ಶುರುಮಾಡಿದ್ದು, ಇದರಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. ಇದಲ್ಲದೆ ಕ್ರೇಜಿ ಸ್ಟಾರ್ ರವಿಚಂದ್ರನ್, ಸುಮಲತಾ ಅಂಬರೇಶ್ ಮತ್ತು ಮುಖ್ಯಮಂತ್ರಿ ಚಂದ್ರು ಅವರು ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಬೆಂಗಳೂರು ಮತ್ತು ಹೈದರಾಬಾದ್​​ನಲ್ಲಿ ಚಿತ್ರೀಕರಣ ಮುಗಿಸಿರುವ ಚಿತ್ರ ತಂಡ ಇದೀಗ 15 ದಿನಗಳ ಕಾಲ ಹಾಡಿನ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಿದೆ.

ಈ ಸಿನಿಮಾದಲ್ಲಿ ವಿ. ಹರಿಕೃಷ್ಣ ಚಿತ್ರಕ್ಕೆ ಆ್ಯಕ್ಷನ್ ಕಟ್​ ಹೇಳೋದರ ಜೊತೆಗೆ ಮ್ಯೂಸಿಕ್​ ಕಂಪೋಸ್​ ಮಾಡ್ತಿದ್ದಾರೆ. ಪಾನ್ ಇಂಡಿಯಾ ಸಿನಿಮಾ ವಾಗಿರುವ ಕಾರಣ ಒಟ್ಟಿಗೆ 5 ಭಾಷೆಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ಟೀಸರ್ ಮೂಲಕ ಜನರ ಮನ ಗೆದ್ದಿರುವ ಚಿತ್ರ ತಂಡ ಟ್ರೈಲರ್ ಮತ್ತು ಹಾಡುಗಳ ಮೂಲಕ ಜನರನ್ನು ಹೇಗೆ ಆಕರ್ಷಿಸುತ್ತದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಕನ್ನಡ ರಾಜ್ಯೋತ್ಸವದಂದು ಸಿನಿಮಾ ಬಿಡುಗಡೆ ಮಾಡಲು ಚಿತ್ರ ತಂಡ ಚಿಂತಿಸುತ್ತಿದೆ.

ಪ್ರತಿ ಬಾರಿಯೂ ದರ್ಶನ್ ಅವರ ಸಿನಿಮಾ ಬಿಡುಗಡೆ ಆದಾಗ ಮಿಡಿಯಾ ದಿಂದ ಹಿಡುದು ಅಭಿಮಾನಿಗಳವರಿಗೆ ಸಂಭ್ರಮ ಜೋರಾಗಿ ಇರುತ್ತದೆ. ಆದರೆ ದರ್ಶನ್ ಅವರಿಗೆ ನಾವು ಯಾವುದೇ ರೀತಿಯ ಬೆಂಬಲವನ್ನು ಸೂಚಿಸುವುದಿಲ್ಲ ಎಂದು ಮಿಡಿಯಾ ದವರು ತಿಳಿಸಿದ್ದಾರೆ. ಹೀಗಾಗಿ ಇದೇ ಮೊದಲ ಬಾರಿಗೆ ಯಾವುದೇ ಮಿಡಿಯಾ ಅವರ ಸಪೋರ್ಟ್ ಇಲ್ಲದೆ ದರ್ಶನ್ ಅವರ ಸಿನಿಮಾವನ್ನು ಅವರ ಅಪ್ಪಟ ಅಭಿಮಾನಿಗಳೇ ಬಿಡುಗಡೆ ಮಾಡುವುದಾಗಿ ಕೂಡ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top