fbpx
ಸಮಾಚಾರ

ಮೀನಾ ಪತಿ ಅಕಾಲಿಕ ಸಾವಿಗೆ ಕಾರಣವಾಯ್ತು ಪಾರಿವಾಳದ ಹಿಕ್ಕೆ? ಪಾರಿವಾಳಗಳೇ ಸಾವಿಗೆ ಕಾರಣವಾಗಿದ್ದು ಹೇಗೆ ಗೊತ್ತಾ?? ಇಲ್ಲಿದೆ ಆಘಾತಕಾರಿ ವಿಚಾರ

ಖ್ಯಾತ ನಟಿ ಮೀನಾ ಅವರ ಪತಿ ವಿದ್ಯಾ ಸಾಗರ್ ನೆನ್ನೆ ನಿಧನರಾಗಿದ್ದಾರೆ. ಮೀನಾ ಅವರ ಪತಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಪತಿ ವಿದ್ಯಾಸಾಗರ್ ಸಾವಿಗೆ ಪಾರಿವಾಳಗಳೇ ಕಾರಣ ಎಂಬ ಹೊಸ ಸುದ್ದಿಯೊಂದು ಈಗ ಬಂದಿದೆ ತಮಿಳು ಮಾಧ್ಯಮಗಳಲ್ಲಿ ಇದೇ ರೀತಿಯ ಸುದ್ದಿ ಸದ್ದು ಮಾಡುತ್ತಿದೆ.

ಮಾಧ್ಯಮಗಳ ವರದಿಯ ಪ್ರಕಾರ, ಕಳೆದ ಕೆಲವು ವರ್ಷಗಳಿಂದ ಅವರು ಶ್ವಾಸಕೋಶದ ಸಮಸ್ಯೆಯನ್ನು ಎದುರಿಸುತ್ತಿದ್ದರು’ ಎಂದು ಹೇಳಿದೆ. ಅದಲ್ಲದೆ, ಅವರ ಶ್ವಾಸಕೋಶದ ಅಲರ್ಜಿಗೆ ಕಾರಣವಾಗಿದ್ದು ಪಾರಿವಾಳದ ಹಿಕ್ಕೆ ಎನ್ನುವುದು ಆಘಾತಕಾರಿ ಅಂಶ. ಪಾರಿವಾಳದ ಹಿಕ್ಕೆಯ ವಾಸನೆಯ ಗಾಳಿಯನ್ನು ಅವರು ಹಲವು ವರ್ಷಗಳ ಕಾಲ ಉಸಿರಾಡಿದ್ದ ಕಾರಣಕ್ಕೆ ಅವರಿಗೆ ಶ್ವಾಸಕೋಶದ ಅಲರ್ಜಿ ಉಂಟಾಗಿತ್ತು ಎನ್ನುವ ಮಾಹಿತಿ ಬಹಿರಂಗವಾಗಿದೆ.

ಅವರ ಮನೆಯಲ್ಲಿ ಬಹಳಷ್ಟು ಪಾರಿವಾಳಗಳಿದೆಯಂತೆ. ಅವರುಗಳ ತಾಜ್ಯದ ಕಾರಣ ಮನೆಯಲ್ಲಿದ್ದ ಎಲ್ಲರಿಗೂ ಶ್ವಾಸಕೋಶಗಳು ಸೋಂಕು ತಗುಲಿದ್ದವು. ಆದರೆ, ಮೀನಾ ಅವರ ಪತಿ ವಿದ್ಯಾ ಸಾಗರ್ ಅವರಿಗೆ ಕೋವಿಡ್ ಬಂದಾಗ ಅವರ ಸಮಸ್ಯೆ ಉಲ್ಬಣಗೊಂಡಿತು.ವೈದ್ಯರು ವಿದ್ಯಾಸಾಗರ್ ಅವರ ಶ್ವಾಸಕೋಶವನ್ನು ಬದಲಾಯಿಸಬೇಕಾಗುತ್ತದೆ ಎಂದಿದ್ದರಂತೆ. ಇದೊಂದೇ ಅಲ್ಲದೇ, ಅವರಿಗೆ ಲಿವರ್ ಕಸಿ ಮಾಡಿಸಲು ನಿರ್ಧರಿಸಲಾಗಿತ್ತಾದರೂ, ದಾನಿಗಳು ಸಿಗದ ಕಾರಣ ಅದೂ ಕೂಡ ಆಗಿರಲಿಲ್ಲ.

ಕನ್ನಡ ಸೇರಿದಂತೆ ವಿವಿಧ ಭಾಷಾ ಚಿತ್ರಗಳಲ್ಲಿ ನಟಿಸಿದ್ದ ಮೀನಾ, 2009 ರಲ್ಲಿ ವಿದ್ಯಾಸಾಗರ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ 11 ವರ್ಷದ ನೈನಿಕಾ ಎಂಬ ಮಗಳಿದ್ದಾಳೆ, ತಾಯಿಯ ಹಾದಿಯನ್ನು ಅನುಸರಿಸುತ್ತಿರುವ ನೈನಿಕಾ ‘ತೇರಿ’ ಚಿತ್ರದಲ್ಲಿ ಬಾಲನಟಿಯಾಗಿ ತೆರೆಯ ಮೇಲೆ ಪಾದಾರ್ಪಣೆ ಮಾಡಿದ್ದಾರೆ.

ವಿದ್ಯಾಸಾಗರ್‌ ಅಗಲಿಕೆಯಿಂದ ದಕ್ಷಿಣ ಭಾರತದ ಚಿತ್ರರಂಗದ ಅನೇಕ ನಟ, ನಟಿಯರು ಸೇರಿದಂತೆ ಚಿತ್ರರಂಗದ ಅನೇಕರು ಮೀನಾ ಮತ್ತು ಅವರ ಮಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top