fbpx
ಸಮಾಚಾರ

ಅಪ್ಪು ನೆನಪಲ್ಲೇ ಕಾಲ ಕಳೆಯುತ್ತಿದ್ದಾರೆ ಮೆದುಳು ಪಾರ್ಶ್ವವಾಯು ರೋಗಕ್ಕೆ ತುತ್ತಾದ ಸಹೋದರರು!ಪ್ರತಿ ಕ್ಷಣವೂ ಅಪ್ಪು ಅವರದ್ದೇ ಕನವರಿಕೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ ತಿಂಗಳುಗಳೇ ಕಳೆದರು ಅವರ ನೆನಪು ಮಾತ್ರ ಸದಾ ಅಭಿಮಾನಿಗಳ ಮನಸಲ್ಲಿ ಹಚ್ಚೆಯಾಗಿ ಉಳಿದಿದೆ. ಇವರ ಅಕಾಲಿಕ ಮರಣದಿಂದ ಇವರ ಅಪಾರ ಅಭಿಮನಿಗಳ ಬಳಗ ಕಣ್ಣೀರಿನಿಂದ ಕೈ ತೊಳೆಯುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ಲೋಕದ ಜ್ಞಾನ ಹಾಗೂ ಕೈಕಾಲು ಸ್ವಾಧೀನವಿಲ್ಲದ ಚಿತ್ರದುರ್ಗದ ಅಣ್ಣ ತಂಗಿ ಇಬ್ಬರು, ಅಪ್ಪು ಧ್ಯಾನದಲ್ಲಿ ದಿನ ಕಳೆಯುತಿದ್ದಾರೆ.

ಪ್ರತಿಯೊಬ್ಬ ತಂದೆ ತಾಯಿಗೂ ತಮ್ಮ ಮಕ್ಕಳು ಭವಿಷ್ಯದಲ್ಲಿ ಉಜ್ವಲರಾಗಬೇಕೆಂದು ಬಹಳಷ್ಟು ಆಸೆಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಚಿತ್ರದುರ್ಗದ ಒಂದು ಕುಟುಂಬದಲ್ಲಿ ಮಕ್ಕಳು ಸ್ವಾದೀನ ಕಳೆದುಕೊಂಡು ಇತ್ತ ನಗಕೂ ಆಗದೆ, ಓಡಾಡಕ್ಕೂ ಹಾಗದೆ ಒಂದೇ ಕಡೆಯಲ್ಲಿ ಕುಳಿತಿದ್ದಾರೆ. ಆದರೆ ಅವರು ಇಂತಹ ಪರಿಸ್ಥಿಯಲ್ಲಿ ನೆನೆಸಿಕೊಳ್ಳುತ್ತಿರುವುದು ಮಾತ್ರ ನಮ್ಮ ಕರ್ನಾಟಕ ರತ್ನ ಅಪ್ಪು ಅವರನ್ನು ಮಾತ್ರ.

ಹೌದು ರಂಗನಾಥ್ (26) ಮತ್ತು ರಂಜಿತ (23)ಎಂಬ ಯುವಕ ಯುವತಿ ಮೆದುಳು ಪಾರ್ಶ್ವವಾಯು ರೋಗಕ್ಕೆ ತುತ್ತಾಗಿದ್ದಾರೆ. ಈ ಮುಗ್ದ ಮಕ್ಕಳಿಗೆ ಅಪ್ಪು ಎಂದರೆ ಪಂಚ ಪ್ರಾಣ. ಅಪ್ಪುವಿನ ಅಕಾಲಿಕ ಮರಣದಿಂದ ಎರಡು ದಿನಗಳ ಕಾಲ ಆಹಾರ ಸೇವಿಸದೇ ಪ್ರತಿಭಟಿಸಿದರು. ಆದರೆ ಪೋಷಕರು ಅದೇಗೋ ಮಾಡಿ ಇವರನ್ನು ಸಮಾಧಾನ ಪಡಿಸಿದರು. ಇದೀಗ ಈ ಮುಗ್ದ ಮಕ್ಕಳು ತಾವು ಅಪ್ಪು ಮತ್ತು ಶಿವಣ್ಣ ಅವರನ್ನು ಭೇಟಿ ಮಾಡಬೇಕೆಂದು ಪರಿತಪಿಸುತ್ತಿದ್ದಾರೆ.

ಇದರ ಕುರಿತು ಮಾತನಾಡಿರುವ ಪೋಷಕರು “ಅಪ್ಪು ಅವರು ಇಷ್ಟು ಬೇಗ ನಮ್ಮನ್ನೆಲ್ಲಾ ಬಿಟ್ಟು ಅಗಲುತ್ತಾರೆಂದು ನಾವು ಭಾವಿಸಿರಲಿಲ್ಲ‌. ನಮ್ಮ ಮಕ್ಕಳಿಗೆ ಅವರನ್ನು ತೋರಿಸೊ ಭಾಗ್ಯ ಸಿಗಲಿಲ್ಲ. ಹೀಗಾಗಿ ಒಮ್ಮೆಯಾದ್ರು ಅಪ್ಪು ಅವರ ಸಮಾಧಿ ದರ್ಶನ ಮಾಡಬೇಕು. ಹಾಗೂ ನಟ ಶಿವರಾಜ್ ಕುಮಾರ್ ಅವರನ್ನಾದ್ರು ಭೇಟಿ ಮಾಡಿಸಿ, ನನ್ನ ಮುಗ್ದ ಮಕ್ಕಳ ಇಷ್ಟಾರ್ಥ ನೆರೆವೇರಿಸಬೇಕು. ಹೀಗಾಗಿ ಯಾರಾದ್ರು ಸಹಾಯ ಮಾಡಬೇಕೆಂದು” ಕಣ್ಣೀರಿಡುತ್ತಾ ಬೇಡಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top