ಕಳೆದ ಮೂರ್ನಾಲ್ಕು ವರ್ಷಗಳಿಂದ ಬಾಲಿವುಡ್ ಚಿತ್ರರಂಗ ತನ್ನ ಛಾಪನ್ನು ಕಳೆದುಕೊಂಡು ಸೋತು ಸುಣ್ಣವಾಗಿದೆ.. ಯಾವೊಬ್ಬ ಸ್ಟಾರ್ ನಟನ ಚಿತ್ರಗಳು ಸಹ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿಲ್ಲ.. ಸತತ ಸೋಲಿನಿಂದ ಕಂಗೆಟ್ಟಿರುವ ಬಾಲಿವುಡ್ ದಕ್ಷಿಣದ ಸೂಪರ್ ಹಿಟ್ ಸಿನಿಮಾಗಳನ್ನು ರೀಮೇಕ್ ಮಾಡಿ ಗೆಲುವ ಕಾಣುವ ಹಪಹಪಿಯಲ್ಲಿದ್ದರೂ ಆ ಪ್ರಯತ್ನ ಸಹ ಸಫಲವಾಗುತ್ತಿಲ್ಲ.. ಇಂಥಾ ಬಾಲಿವುಡ್ ಮಂದಿ ಎಷ್ಟು ಬರಗೆಟ್ಟಿದ್ದಾರೆ ಎಂದರೆ ಹಿಂದಿಯಲ್ಲಿಯೂ ಡಬ್ ಆಗಿ ತೆರೆಕಂಡಿದ್ದ ಚಿತ್ರವೊಂದನ್ನು ರೀಮೇಕ್ ಮಾಡಲು ಮುಂದಾಗಿವೆಯಂತೆ.. ಇದು ಕೇಳಲು ವಿಚಿತ್ರ ಅನಿಸಿದರೂ ಸತ್ಯ…
ಹೌದು,, ಕನ್ನಡದ ಸಿಂಪಲ್ ಹುಡುಗ ರಕ್ಷಿತ್ ಶೆಟ್ಟಿ ನಟಿಸಿರುವ ಚಾರ್ಲಿ 777 ಚಿತ್ರವು ಹಿಂದಿಯೂ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ರಿಲೀಸ್ ಆಗಿತ್ತು.. ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲಿಯೂ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಚಾರ್ಲಿ ಪ್ರೇಕ್ಷಕ ಮತ್ತು ವಿಮರ್ಶಕ ವಲಯ ಎರಡರಲ್ಲಿಯೂ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ.. ನಾಯಿ ಮತ್ತು ಮನುಷ್ಯನರ ನಡುವಿನ ಭಾಂದವ್ಯ ಕುರಿತ ಈ ಚಿತ್ರದ ಹಿಂದಿ ರೀಮೇಕ್ ಹಕ್ಕಿಗೆ ಬೇಡಿಕೆ ಬಂದಿದೆಯಂತೆ…
Believe it or not!
There is enquiry for remake rights of @777CharlieMovie in Hindi even though the dubbed version released in the language! #777Charlie pic.twitter.com/A7EDNIKd0n— S Shyam Prasad (@ShyamSPrasad) June 27, 2022
ಅರೇ.. ಸ್ವತಃ ಹಿಂದಿಯಲ್ಲೂ ತೆರೆಕಂಡಿದ್ದ ಸಿನಿಮಾವನ್ನು ಮತ್ತೆ ಯಾಕೆ ರೀಮೇಕ್ ಮಾಡ್ತಾರೆ ಎಂಬ ವಿಚಿತ್ರ ಪ್ರಶ್ನೆ ನಿಮ್ಮ ತಲೆಯಲ್ಲೂ ಮೂಡಬಹುದು. ಆದರೆ ಬಾಲಿವುಡ್ ಮಂದಿಯ ಖಾಲಿ ತಲೆಯ ಆಸಾಮಿಗಳು ಈ ಒಂದು ಪ್ರಯತ್ನಕ್ಕೆ ಮುಂದಾಗಿದ್ದಾರಂತೆ.. ಈ ವಿಚಾರವಾಗಿ ಅದಾಗಲೇ “ಚಾರ್ಲಿ 777” ಚಿತ್ರತಂಡವನ್ನು ಸಂಪರ್ಕಿಸಲಾಗಿದೆಯಂತೆ. ಆದರೆ ಈ ಬಗ್ಗೆ ನಿರ್ಮಾಪಕರೂ ಯಾವುದೇ ನಿರ್ಧಾರವನ್ನು ಇನ್ನೂ ಕೈಗೊಂಡಿಲ್ಲ ಎಂಬುದು ಗಾಂಧಿನಗರದ ಮೂಲಗಳ ಮಾತು..
ಒಟ್ಟಿನಲ್ಲಿ ಹಿಂದಿಯಲ್ಲೂ ರಿಲೀಸ್ ಆಗಿ ಅಬ್ಬರಿಸಿದ್ದ ‘ಚಾರ್ಲಿ’ ಚಿತ್ರ ಬಾಲಿವುಡ್ ನಲ್ಲಿ ರಿಮೇಕ್ ಆಗುತ್ತಾ? ಇಲ್ಲವಾ? ಎಂಬುದನ್ನು ಕಾದುನೋಡಬೇಕು
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
