fbpx
ಸಮಾಚಾರ

ಮೊಣಕಾಲು ನೋವಿಗೆ ಹಳ್ಳಿ ಮದ್ದಿನ ಮೊರೆ ಹೋದ ಕ್ಯಾಪ್ಟನ್ ಕೂಲ್! ವೈದ್ಯರ ಫೀಸ್ ಕೇವಲ 40 ರೂಪಾಯಿ

ಭಾರತ ತಂಡದ ಫಿನಿಶರ್ ಮತ್ತು ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ಅವರು ಮೃದು ಸ್ವಭಾವದವರು ಎಂದು ಹೇಳಿದರೆ ತಪ್ಪಾಗಲಾರದು. ಎಲ್ಲರ ಜೊತೆಗೂ ಅವರು ಬಹಳ ಆತ್ಮೀಯವಾಗಿ ಬೆರೆಯುತ್ತಾರೆ. ಆದರೆ ಇಂದು ಮಾಹಿ ತಮ್ಮ ಕಾಲು ನೋವಿಗಾಗಿ ಪಡೆದುಕೊಂಡ ಚಿಕಿತ್ಸೆಯಿಂದ ಸಕತ್ ಸುದ್ದಿಯಾಗುತ್ತಿದ್ದಾರೆ.

ಭಾರತ ತಂಡದ ಶ್ರೇಷ್ಠ ಆಟಗಾರರಲ್ಲಿ ಮಾಹಿ ಕೂಡ ಒಬ್ಬರು. ಇವರ ಬಳಿ ಅಪಾರವಾದ ಸಂಪತ್ತು ಕೂಡ ಇದೆ. ಇವರ ನೋವಿಗೆ ವೈದ್ಯರು ಮನೆಗೆ ಬಂದು ಚಿಕಿತ್ಸೆ ನೀಡಬಹುದು ಅಥವಾ ಹೆಸರಾಂತ ಆಸ್ಪತ್ರೆಗೆ ಹೋಗಿ ಇವರು ಚಿಕಿತ್ಸೆ ಪಡೆಯಬಹುದು. ಆದರೆ ಇದನ್ನು ಯಾವುದನ್ನೂ ಮಾಡದ ಮಾಹಿ ತಮ್ಮ ಕಾಲುಗಳ ಮಂಡಿನೋವಿಗಾಗಿ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಪಡೆದಿದ್ದಾರೆ.

ಕಳೆದ ಕೆಲವು ದಿನಗಳಿಂದ ಇವರಿಗೆ ಮಂಡಿ ನೋವಿನ ಸಮಸ್ಯೆ ಕಾಡುತಿತ್ತು. ಇದಕ್ಕಾಗಿ ಇವರು ಆಸ್ಪತ್ರೆಗೆ ತೆರಳದೆ ರಾಂಚಿಯ ಸ್ಥಳೀಯ ಹಳ್ಳಿ ವೈದ್ಯರ ಬಳಿ ಕಾಡಿನಲ್ಲಿ ಸಿಗುವ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧ ಸೇವಿಸಿ ತಮ್ಮ ನೋವಿಗೆ ಚಿಕಿತ್ಸೆಯನ್ನು ಪಡೆದುಕೊಡಿದ್ದಾರೆ. ಮತ್ತು ಈ ಚಿಕಿತ್ಸೆಗಾಗಿ ಇವರು ಕೇವಲ 40 ರೂಪಾಯಿಗಳನ್ನು ಮಾತ್ರ ಖರ್ಚು ಮಾಡಿದ್ದಾರೆ.

ಇನ್ನು ಈ ಘಟನೆ ಕುರಿತು ಮಾತನಾಡಿದ ವೈದ್ಯ “ಧೋನಿ ಮೊದಲ ಬಾರಿಗೆ ಚಿಕಿತ್ಸೆಗಾಗಿ ನನ್ನ ಬಳಿ ಬಂದಾಗ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಸಾಮಾನ್ಯ ವ್ಯಕ್ತಿಯಂತೆ ನನ್ನ ಬಳಿ ಬಂದು ತಮ್ಮ ಸಮಸ್ಯೆ ಹೇಳಿಕೊಂಡರು. ಔಷಧಿಗೆ 40 ರೂಪಾಯಿ ತೆಗೆದುಕೊಂಡೆ. ಅವರ ಕಾರನ್ನು ನೋಡಿ ಇಲ್ಲಿನ ಹುಡುಗರು ಅವರು ಧೋನಿ ಎಂದು ಹೇಳಿದ್ದರಿಂದ ನನಗೆ ಗೊತ್ತಾಯಿತು ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top