fbpx
ಸಮಾಚಾರ

ತಿಂಗಳ ಮೊದಲ ದಿನವೇ ರಾಜ್ಯದ ಜನತೆಗೆ ಶಾಕ್! ಇಂದಿನಿಂದ ವಿದ್ಯುತ್ ದರ ಏರಿಕೆ- ಪ್ರತಿ ಯೂನಿಟ್ ಗೆ ಎಷ್ಟು ಹೆಚ್ಚಳ ಗೊತ್ತಾ?

ರಾಜ್ಯದ ಜನತೆಗೆ ಇದೀಗ ಸರ್ಕಾರ ಶಾಕ್ ನೀಡಲು ಸಜ್ಜಾಗಿದೆ. ಇಂದಿನಿಂದ ವಿದ್ಯುತ್ ದರ ಹೆಚ್ಚಳವಾಗಲಿದ್ದು ಮಾಸಿಕ 100 ಯೂನಿಟ್ ಹಾಗೂ ಅದರ ಮೇಲಿನ ವಿದ್ಯುತ್ ಯೂನಿಟ್ ಬಳಕೆ ಮೇಲಿದ್ದ 19 ರೂಪಾಯಿ ದರವನ್ನು 31ಕ್ಕೆ ಏರಿಕೆ ಮಾಡಲಿದೆ.

ಪೆಟ್ರೋಲ್, ಡೀಸೆಲ್, ಇನ್ನಿತರ ದಿನನಿತ್ಯ ಬಳಕೆಯ ವಸ್ತುಗಳ ದರದ ಏರಿಕೆಯಿಂದ ಕಂಗೆಟ್ಟಿದ್ದ ಜನಕ್ಕೆ ಇದೀಗ ಸರ್ಕಾರ ವಿದ್ಯುತ್ ದರವನ್ನು ಏರಿಸುವ ಮೂಲಕ ಮತ್ತೊಂದು ಶಾಕ್ ನೀಡಿದೆ. ಪ್ರತಿ ತಿಂಗಳು 100 ಯೂನಿಟ್ ಮತ್ತು ಅದಕ್ಕಿಂತ ಹೆಚ್ಚುವರಿಯಾಗಿ ವಿದ್ಯುತ್ ಬಳಸುವವರು ಇನ್ಮುಂದೆ 19 ರಿಂದ 31 ಪೈಸೆ ಪಾವತಿಸಬೇಕು.

2021 -2022ರ ಕೊನೆಯ ತ್ರೈಮಾಸಿಕದಲ್ಲಿ ಕಲ್ಲಿದ್ದಲು ಬೆಲೆ ಏರಿಕೆಯಾಗಿತ್ತು. ಇದರಿಂದಾಗಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದ್ಯ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದ್ದು ಎಸ್ಕಾಂಗಳ ಮನವಿ ಮೇರೆಗೆ KERC ದರ ಏರಿಕೆ ಮಾಡಲಿದೆ.

ಬೆಸ್ಕಾಂ 55.28ರೂ., ಹೆಸ್ಕಾಂ 49.54ರೂ, ಮೆಸ್ಕಾಂ 38.98 ರೂ., ಸೆಸ್ಕ್ 40.47 ಹಾಗೂ ಗೆಸ್ಕಾಂ 39.36 ರೂ. ಹೆಚ್ಚು ಮಾಡುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ ಸರ್ಕಾರ ಎಸ್ಕಾಂ ಗಳು ಕೇಳಿಕೊಂಡಿದ್ದ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಿಲ್ಲ. ಇಷ್ಟು ದರ ಏರಿಕೆಯಿಂದ ಗ್ರಾಹಕರಿಗೆ ಹೊರೆಯಾಗಲಿದೆ ಎಂದು ಅರಿತ ಸರ್ಕಾರ ಎಸ್ಕಾಗಳು ಕೇಳಿಕೊಂಡಿದ್ದ ದರ ಕಡಿತಗೊಳಿಸಿ ಹೊಸ ದರಕ್ಕೆ ಅನುಮೋದನೆ ನೀಡಿ ಆದೇಶ ಹೊರಡಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top