fbpx
ಸಮಾಚಾರ

ಬಡ ಅನಾಥ ಮಹಿಳೆಗೆ ಹೊಸ ಮನೆ ಕಟ್ಟಿಸಿಕೊಟ್ಟ ಸುದೀಪ್: ವಿಕ್ರಾಂತ್ ರೋಣ ಪ್ರಮೋಷನ್ ನಡುವೆ ಕಿಚ್ಚನ ಒಂದೊಳ್ಳೆ ಕೆಲಸ

ನಟ ಕಿಚ್ಚ ಸುದೀಪ್ ಅವರು ನಟನೆಗೆ ಮಾತ್ರವಲ್ಲದೆ ಹಲವಾರು ಸಮಾಜಮುಖಿ ಕಾರ್ಯಗಳಿಗೆ ಹೆಸರುವಾಸಿ ಯಾದವರು. ತಮ್ಮ ವಿಕ್ರಾಂತ್ ರೋಣ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿ ಯಾಗಿರುವ ನಟ ಇದೀಗ ಸಮಾಜ ಸೇವೆ ಕೆಲಸ ಮಾಡುವ ಮೂಲಕ ಮತ್ತೆ ಸುದ್ದಿ ಯಾಗಿದ್ದಾರೆ.

ನಟ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾದ ಪ್ರಮೋಷನ್ ಮಾಡುತ್ತಿದ್ದರು ತಾವು ಮಡಿವ ಸಮಾಜಸೇವೆ ಕೆಲಸಗಳನ್ನು ಮಾತ್ರ ಇಂದಿಗೂ ಮರೆಯುವುದಿಲ್ಲ. ಕೆಲವೊಂದು ಘಟನೆಗಳು ನಮ್ಮ ಕಣ್ಣು ಮುಂದೆ ನಡೆದರೆ ಮತ್ತೊಂದು ಘಟನೆಗಳು ತೆರೆಯ ಹಿಂದೆ ನಡೆಯುತ್ತದೆ. ಸುದೀಪ್ ತಮ್ಮದೇ ಟ್ರಸ್ಟ್ ಒಂದನ್ನು ಸ್ಥಾಪಿಸಿದ್ದು, ಇದರಲ್ಲಿ ಹಲವಾರು ಸಮಾಜಮುಖಿ ಕೆಲಸಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಇದೀಗ ಈ ಟ್ರಸ್ಟ್ ವತಿಯಿಂದ ಅನಾಥ ಮಹಿಳೆಯ ಸಂಕಷ್ಟಕ್ಕೆ ಸುದೀಪ್ ಸಾಥ್ ನೀಡಿದ್ದಾರೆ.

ಚಿತ್ರದುರ್ಗದ ಚಳ್ಳಕೆರೆಯ ಒಂದು ಪುಟ್ಟ ಗ್ರಾಮದಲ್ಲಿ ವಾಸವಾಗುತ್ತಿದ್ದ ಅನಾಥೆ ಮಹಿಳೆ ಹೊನ್ನೂರಮ್ಮ ಎಂಬುವರ ಮನೆ ಬೀಳುವ ಪರಿಸ್ಥಿಯಲ್ಲಿತ್ತು. ಇದನ್ನು ಅರಿತ ಕಿಚ್ಚ ಇದೀಗ ಇವರ ಸಹಾಯಕ್ಕೆ ಕೈ ಜೋಡಿಸಿದ್ದಾರೆ. ಇವರ ಹಳೆ ಮನೆ ದುರಸ್ತಿ ಮಾಡಿಸಿ ಕಾಳಿ ಜಗದಲ್ಲಿ ಸುಮಾರು 2 ಲಕ್ಷ ಖರ್ಚು ಮಾಡಿ ಇವರಿಗೆ ಒಂದು ಕೋಣೆ, ಬಚ್ಚಲುಮನೆ ಇರೋ ಪುಟ್ಟ ಶೀಟ್ ಮನೆ ಕಟ್ಟಿಸಿದ್ದಾರೆ. ಅಗತ್ಯದ ಸಮಯದಲ್ಲಿ ಸಹಾಯ ಮಾಡಿದ ಕಿಚ್ಚನಿಗೆ ಹೊನ್ನೂರಮ್ಮ ಧನ್ಯವಾದ ತಿಳಿಸಿದ್ದಾರೆ. ಇನ್ನು ಕಿಚ್ಚ ಅವರ ಈ ನಡೆಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top