fbpx
ಸಮಾಚಾರ

ಜುಲೈ 2022:ತಿಂಗಳ ರಾಶಿ ಭವಿಷ್ಯ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ ರಾಶಿ.

 

 

ಹೊಸ ವ್ಯವಹಾರಗಳಿಂದ ಲಾಭ , ಯತ್ನ ಕೆಲಸ ಕಾರ್ಯದಲ್ಲಿ ಜಯ, ಹಿತಾಸಕ್ತಿಗಳಿಂದ ತೊಂದರೆ, ಸ್ವಲ್ಪ ಜಾಗರೂಕತೆಯನ್ನು ವಹಿಸಿ, ದಾಂಪತ್ಯದಲಿ ಜಗಳಗಳಾಗುವ ಸಾಧ್ಯತೆ ಹೆಚ್ಚಾಗಿದೆ , ಮಾತಿನ ಮೇಲೆ ನಿಗವನ್ನು ಇಟ್ಟು ಮಾತನಾಡಿ , ಮನಸ್ಸಿನ ಮೇಲೆ ದುಷ್ಟ ಪರಿಣಾಮಗಳು ಬೀರುವ ಸಾಧ್ಯತೆ ಹೆಚ್ಚಾಗಿದೆ , ಉದ್ಯೋಗಸ್ಥ ಮಹಿಳೆಯರಿಗೆ ಕೆಲಸದಲ್ಲಿ ಬಡ್ತಿ, ಪ್ರಮೋಷನ್ ಲಭ್ಯವಾಗಲಿದೆ.
ಪರಿಹಾರ.
“ಓಂ ನಮೋ ಭಗವತೆ ವಾಸುದೇವಾಯ ನಮಃ” ಈ ಮಂತ್ರವನ್ನು ಪ್ರತಿನಿತ್ಯ ನೂರಾ ಎಂಟು ಬಾರಿ ಜಪಿಸಿ, ಅಂಧ ಮಕ್ಕಳಿಗೆ ಅನ್ನದಾನವನ್ನು ಮಾಡಿ.

ವೃಷಭ ರಾಶಿ.

 

ಈ ವಾರ ಗುರು ಹಿರಿಯರ ಭೇಟಿ ಮಾಡಲಿದ್ದೀರಿ , ಹಣಕಾಸು ವಿಚಾರದಲ್ಲಿ ವಂಚನೆ, ಮೋಸ ಹೋಗಲಿದ್ದೀರಿ, ಚಂಚಲ ಮನಸ್ಸು , ಶತ್ರು ಬಾಧೆ, ಮಹಿಳೆಯರಲ್ಲಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ, ಯಾರನ್ನೂ ಕೂಡ ಹೆಚ್ಚಿಗೆ ನಂಬಬೇಡಿ, ದೈವಾನುಗ್ರಹದಿಂದ ಅನುಕೂಲವಾಗುವ ಸಾಧ್ಯತೆ ವಾರಾಂತ್ಯದಲ್ಲಿ ಕಂಡುಬರುತ್ತದೆ, ಮನಃಶಾಂತಿ ನಿಮಗೆ ಲಭ್ಯವಾಗಲಿದೆ.
ಪರಿಹಾರ .
ಪ್ರತಿನಿತ್ಯ “ಓಂ ನಮಃ ಶಿವಾಯ”ಎನ್ನುವ ಈ ಶಿವ ಪಂಚಾಕ್ಷರಿ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಿ, ಸೋಮವಾರ ಶಿವಾಲಯಕ್ಕೆ ಹೋಗಿ ರುದ್ರಾಭಿಷೇಕವನ್ನು ಮಾಡಿಸಿ , ದೀರ್ಘ ದಂಡ ನಮಸ್ಕಾರವನ್ನು ಮಾಡಿ.

ಮಿಥುನ ರಾಶಿ.

 

ಇತರರ ಕಷ್ಟಕ್ಕೆ ಸ್ಪಂದಿಸುವಿರಿ, ಇತರರಿಗೆ ಸಹಾನುಭೂತಿಯನ್ನು ತೋರಿಸುವಿರಿ, ಹಳೆ ಬಾಕಿ ವಸೂಲಿಯನ್ನು ಮಾಡಲು ಬಹಳಷ್ಟು ಓಡಾಟ ಮಾಡುವಿರಿ , ದ್ರವ್ಯಲಾಭ, ಚಂಚಲ ಮನಸ್ಸು, ಇಲ್ಲ ಸಲ್ಲದ ಅಪವಾದಗಳು ನಿಮ್ಮ ಮೇಲೆ ಈ ವಾರ ಬರಲಿವೆ, ಹೇಳಲಾಗದಂತಹ ಸಂಕಟ ಈ ವಾರ ನೀವು ಅನುಭವಿಸಬೇಕಾಗುತ್ತದೆ, ಉನ್ನತ ಮಟ್ಟದ ಅಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗುತ್ತೀರಿ.
ಪರಿಹಾರ.
“ಓಂ ಕಾರ್ಯಸಿದ್ಧಿ ಆಂಜನೇಯಾಯ ನಮಃ” ಈ ಮಂತ್ರವನ್ನು ಪ್ರತಿನಿತ್ಯ ನೂರಾ ಎಂಟು ಬಾರಿ ಜಪಿಸಿ, ಮಂಗಳವಾರ ನೂರೆಂಟು ವೀಳ್ಯದೆಲೆಯ ಹಾರವನ್ನು ಆಂಜನೇಯ ಸ್ವಾಮಿಗೆ ಹಾಕಿ, ದೀರ್ಘ ದಂಡ ನಮಸ್ಕಾರ ಮಾಡಿ.

ಕಟಕ ರಾಶಿ .

 

ಸಮಾಜದಲ್ಲಿ ಗೌರವ , ವೃತ್ತಿರಂಗದಲ್ಲಿ ಯಶಸ್ಸು , ಪ್ರತಿಭೆಗೆ ತಕ್ಕ ಪ್ರತಿಫಲ ನಿಮಗೆ ಲಭ್ಯವಾಗಲಿದೆ, ಈ ವಾರ ಮನಃಶಾಂತಿ ಲಭ್ಯವಾಗಲಿದೆ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ ,ಸುಖ ಭೋಜನ ಪ್ರಾಪ್ತಿ, ಆದರೆ ವಾಹನ ರಿಪೇರಿಗೆ ಬಹಳಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ ,ಪಿತ್ರಾರ್ಜಿತ ಆಸ್ತಿ ನಿಮಗೆ ಲಭ್ಯವಾಗಲಿದೆ.
ಪರಿಹಾರ
ಪ್ರತಿನಿತ್ಯ “ಓಂ ನಮೋ ನಾರಾಯಣಾಯ ನಮಃ” ಈ ಮಂತ್ರವನ್ನು 54 ಬಾರಿ ಜಪಿಸಿ ,ಪ್ರತಿನಿತ್ಯ ನಿಮ್ಮ ಕುಲ ದೇವರಿಗೆ ತುಪ್ಪದ ದೀಪವನ್ನು ಹಚ್ಚಿ ನಮಸ್ಕಾರ ಮಾಡಿ .

ಸಿಂಹ ರಾಶಿ .

 

ಈ ವಾರ ಮನಸ್ಸಿಗೆ ಸಂತಸ, ಸಂತೋಷ ದೊರೆಯಲಿದೆ, ಉದ್ಯೋಗದಲ್ಲಿ ಅಭಿವೃದ್ಧಿಯನ್ನು ಕಾಣುತ್ತೀರ, ಪರಸ್ತ್ರೀಯಿಂದ ಧನಲಾಭವಾಗಲಿದೆ, ಟ್ರಾವೆಲ್ಸ್ ಉದ್ಯಮದಲ್ಲಿ ಇರುವವರಿಗೆ ಬಹಳಷ್ಟು ಲಾಭವಾಗಲಿದೆ, ಮಾತಿನ ಮೇಲೆ ಹಿಡಿತ ಅಗತ್ಯವಿರಲಿ, ಇಲ್ಲವೆಂದರೆ ನಾನಾ ರೀತಿಯ ತೊಂದರೆಗಳು ವಾರಾಂತ್ಯದಲ್ಲಿ ಕಾಣಿಸಿಕೊಳ್ಳುತ್ತವೆ, ಆದ್ದರಿಂದ ಸ್ವಲ್ಪ ಜಾಗ್ರತೆಯನ್ನು ವಹಿಸಿ.
ಪರಿಹಾರ.
ಪ್ರತಿನಿತ್ಯ ಸೂರ್ಯ ನಮಸ್ಕಾರವನ್ನು ಮಾಡಿ, ಪಕ್ಷಿಗಳಿಗೆ ಧಾನ್ಯವನ್ನು ಹಾಕಿ .

ಕನ್ಯಾ ರಾಶಿ .

 

ಈ ವಾರ ಯತ್ನ ಕಾರ್ಯಗಳಲ್ಲಿ ಸ್ವಲ್ಪ ವಿಳಂಬವಾಗಲಿದೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟಾಗಲಿದೆ, ಸ್ತ್ರೀ ಸೌಖ್ಯ, ಕೆಲಸ ಕಾರ್ಯಗಳಲ್ಲಿ ತೊಂದರೆ ತಾಪತ್ರಯಗಳನ್ನು ಅನುಭವಿಸಬೇಕಾಗುತ್ತದೆ, ಯಾರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೋ ಅವರಿಗೆ ಬಹಳಷ್ಟು ಲಾಭ, ಇತರರಿಗೆ ಮಾತಿಗೆ ಮರುಳಾಗುವ ಸಂಭವ ಇದೆ, ಶತ್ರು ಧ್ವಂಸವಾಗಲಿದ್ದಾರೆ.
ಪರಿಹಾರ
“ಓಂ ಸ್ಕಂದಾಯ ನಮಃ” ಈ ಮಂತ್ರವನ್ನು ಪ್ರತಿನಿತ್ಯ ನೂರಾ ಎಂಟು ಬಾರಿ ಜಪಿಸಿ ಮಂಗಳವಾರ ನಾಟಿ ತುಳಸಿಯಿಂದ ಅರ್ಚನೆಯನ್ನು ಮಾಡಿಸಿ, ನಮಸ್ಕಾರ ಮಾಡಿ.

ತುಲಾ ರಾಶಿ .

 

ಪ್ರಿಯ ಜನರ ಭೇಟಿಯನ್ನು ಮಾಡಲಿದ್ದೀರಿ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿಗೆ ಹೆಚ್ಚಾಗಲಿದೆ, ಶರೀರದಲ್ಲಿ ಏನೋ ಒಂದು ರೀತಿಯ ತಳಮಳ, ವಾರದ ಮಧ್ಯ ಭಾಗದಲ್ಲಿ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ, ಅನಗತ್ಯ ವೈಮನಸ್ಯ, ನಂಬಿಕೆ ದ್ರೋಹಕ್ಕೆ ಒಳಗಾಗುವ ಸಾಧ್ಯತೆಗಳಿವೆ, ಪಾಪ ಕಾರ್ಯಗಳಿಗೆ ಪ್ರಚೋದನೆ ಮಾಡುವತ್ತ ನಿಮ್ಮ ಮನಸ್ಸು ಮೂಡಲಿದೆ , ಆದರೆ ಪಾಪದ ಕೆಲಸಗಳನ್ನು ಹೆಚ್ಚಾಗಿ ಮಾಡಬೇಡಿ ಅದರಿಂದ ನಾನಾ ರೀತಿಯ ಸಮಸ್ಯೆಗಳು ಅನುಭವಿಸಬೇಕಾಗುತ್ತದೆ.
ಪರಿಹಾರ .
ಪ್ರತಿನಿತ್ಯ ಸುಂದರ ಕಾಂಡವನ್ನು ಪಾರಾಯಣ ಮಾಡಿ, ಶನಿವಾರ ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಿ, ನಾಟಿ ತುಳಸಿಯನ್ನು ಅರ್ಪಿಸಿ ,ದೀರ್ಘದಂಡ ನಮಸ್ಕಾರವನ್ನು ಮಾಡಿ.

ವೃಶ್ಚಿಕ ರಾಶಿ .

 

ಈ ವಾರ ಥಳುಕಿನ ಮಾತಿಗೆ ಮರುಳಾಗಬೇಡಿ, ಯಾರಾದರೂ ಚೆನ್ನಾಗಿ ಮಾತನಾಡಿದರೆ ನೀವು ಈ ವಾರ ಸುಲಭವಾಗಿ ಮರುಳಾಗುವ ಸಾಧ್ಯತೆಗಳು ಈ ವಾರದಲ್ಲಿ ಮೂಡಲಿದೆ, ಸತ್ಕಾರ್ಯಗಳನ್ನು ಮಾಡಲಿಕ್ಕೆ ಮುಂದಾಗುತ್ತೀರಾ, ಯಾರೇ ಬಂದರೂ ಅತಿಥಿ ದೇವೋಭವ ಎನ್ನುವ ಸತ್ಕಾರ್ಯ ಮಾಡುತ್ತೀರಾ, ಪುಣ್ಯ ಕ್ಷೇತ್ರ ದರ್ಶನ ಮಾಡುವ ಶುಭಯೋಗ,ವಾರದ ಮಧ್ಯ ಭಾಗದಲ್ಲಿ ಮನಃಶಾಂತಿ , ದಾಂಪತ್ಯದಲಿ ಪ್ರೀತಿ, ಸಮಾಧಾನವಾಗಲಿದೆ, ಮಿತ್ರರಿಂದ ಕೆಡುಕಾಗುತ್ತದೆ, ಆದ್ದರಿಂದ ಸ್ವಲ್ಪ ಜಾಗ್ರತೆಯನ್ನು ವಹಿಸಿ, ದುರಾಭ್ಯಾಸಕ್ಕೆ ಖರ್ಚನ್ನು ಹೆಚ್ಚಾಗಿ ಮಾಡುತ್ತೀರ.ಈ ವಾರ ಸಾಧಾರಣವಾಗಿರುವ ಲಾಭ ಲಭ್ಯವಾಗಲಿದೆ.
ಪರಿಹಾರ.
“ಓಂ ಗಕಾರ ಗಣಪತಯೇ ನಮಃ” ಈ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಿ, ಮಂಗಳವಾರ ಗರಿಕೆಯನ್ನು ಗಣೇಶನಿಗೆ ಅರ್ಪಿಸಿ ನಮಸ್ಕಾರವನ್ನು ಮಾಡಿ .

ಧನಸ್ಸು ರಾಶಿ .

 

ಈ ವಾರ ವಿಧೇಯಕತೆಯೇ ಯಶಸ್ಸಿನ ಮೆಟ್ಟಿಲಾಗುತ್ತದೆ, ಯಾರು ಧನಸ್ಸು ರಾಶಿಯವರು ವಿಧೇಯತೆಯಿಂದ ನಡೆದುಕೊಳ್ಳುತ್ತೀರಿ ಅವರಿಗೆ ಯಶಸ್ಸು ಸಿಗುತ್ತದೆ, ಗಣ್ಯ ವ್ಯಕ್ತಿಗಳ ಪರಿಚಯವಾಗುತ್ತದೆ, ಶತ್ರುಗಳ ಬಾಧೆ, ಹಣಕಾಸಿನ ಪರಿಸ್ಥಿತಿ ಉತ್ತಮವಾಗಲಿದೆ, ಕುಟುಂಬದಲ್ಲಿ ಸೌಖ್ಯ, ವಿದೇಶ ಪ್ರಯಾಣ ಮಾಡುವ ಸಾಧ್ಯತೆ ಹೆಚ್ಚಾಗಿ ಕಂಡುಬರಲಿದೆ,ಈ ವಾರ ಉತ್ತಮ ಹೆಸರು , ಕೀರ್ತಿ ಲಭ್ಯವಾಗಲಿದೆ.
ಪರಿಹಾರ .
ಅಶ್ವತ್ಥ ವೃಕ್ಷಕ್ಕೆ ಪ್ರತಿನಿತ್ಯ ಹದಿನೆಂಟು ಬಾರಿ ಪ್ರದಕ್ಷಿಣೆ ಮಾಡಿ, ಗೋ ಪೂಜೆಯನ್ನು ಮಾಡಿ ನಮಸ್ಕಾರ ಮಾಡಿ.

ಮಕರ ರಾಶಿ.

 

ಮನೆಯಲ್ಲಿ ಶುಭ ಕಾರ್ಯಗಳನ್ನು ಮಾಡುವುದಕ್ಕೆ ಬಹಳಷ್ಟು ಓಡಾಟವನ್ನು ಮಾಡುತ್ತೀರಾ, ಧನಲಾಭ, ಮಾನಸಿಕ ನೆಮ್ಮದಿ, ಕಾರ್ಯ ಸಿದ್ಧಿಯಾಗಲಿದೆ, ಯಾರು ಷೇರು ವ್ಯವಹಾರಗಳಲ್ಲಿ ತೊಡಗಿದ್ದೀರೋ ಅವರಿಗೆ ಬಹಳಷ್ಟು ಲಾಭವಾಗಲಿದೆ , ದೂರ ಪ್ರಯಾಣ ಮಾಡುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತದೆ, ಅಪರಿಚಿತ ವ್ಯಕ್ತಿಗಳಿಂದ ಕಲಹ ಉಂಟಾಗಲಿದೆ, ಸ್ವಲ್ಪ ಜಾಗರೂಕತೆಯನ್ನು ವಹಿಸಿ.
ಪರಿಹಾರ.
ಪ್ರತಿನಿತ್ಯ ಹನುಮಾನ್ ಚಾಲೀಸವನ್ನು ಪಾರಾಯಣ ಮಾಡಿ, ಬಡ ಮಕ್ಕಳಿಗೆ ಪೆನ್ನು, ಪುಸ್ತಕಗಳನ್ನು ದಾನ ಮಾಡಿ.

ಕುಂಭ ರಾಶಿ .

 

ಈ ವಾರ ಅನಾವಶ್ಯಕ ಖರ್ಚಿಗೆ ನೂರಾರು ದಾರಿಯಾಗುತ್ತವೆ, ಹಿತೈಷಿಗಳಿಂದ ಸಲಹೆಯನ್ನು ಪಡೆದುಕೊಳ್ಳುವುದು ಉತ್ತಮ, ವಿಪರೀತ ವ್ಯಸನ, ಮನಸ್ಸಿನಲ್ಲಿ ನಾನಾ ರೀತಿಯ ಯೋಚನೆ ,ದುಃಖ, ನೋವು ನಿಮ್ಮನ್ನು ಕಾಡಲಿವೆ, ವಿದ್ಯಾರ್ಥಿಗಳಿಗೆ ಹಿನ್ನಡೆ ಉಂಟಾಗಲಿದೆ , ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗಲಿದೆ, ಮಾನಸಿಕವಾಗಿ ಅಶಾಂತಿ , ಮನಃಕ್ಲೇಶ ಆದ್ದರಿಂದ ಆದಷ್ಟು ತಾಳ್ಮೆಯನ್ನು ವಹಿಸಿ.
ಪರಿಹಾರ .
“ಓಂ ಲಕ್ಷ್ಮೀ ನಾರಸಿಂಹಾಯ ನಮಃ” ಈ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸಿ , ಕುಲದೇವರಿಗೆ ತುಪ್ಪದ ದೀಪವನ್ನು ಹಚ್ಚಿ ನಮಸ್ಕಾರ ಮಾಡಿ.

ಮೀನ ರಾಶಿ .

 

ಈ ವಾರ ಮಹಿಳಾ ಉದ್ಯಮಿಗಳಿಗೆ ಬಹಳಷ್ಟು ಉತ್ತಮವಾದ ವಾರವಾಗಲಿದೆ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಮಾನಸಿಕ ನೆಮ್ಮದಿ , ಸುಖ ಭೋಜನ ಪ್ರಾಪ್ತಿ ,ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವ ಯೋಗ , ಶಕ್ತಿ, ಚೈತನ್ಯ ನಿಮಗೆ ಲಭವಾಗಲಿದೆ, ಕೈ ಹಾಕಿರುವ ಕೆಲಸ ಕಾರ್ಯಗಳಲ್ಲಿ ಜಯ ಲಭಿಸಲಿದೆ, ಭೂ ಲಾಭ , ಉತ್ತಮ ಪ್ರಗತಿಯನ್ನು ಕಾಣಲಿದ್ದೀರಿ.
ಪರಿಹಾರ.
“ಓಂ ಕನಕ ದುರ್ಗಾಯೇ ನಮಃ” ಈ ಮಂತ್ರವನ್ನು ಪ್ರತಿನಿತ್ಯ 54 ಬಾರಿ ಜಪಿಸಿ , ಶುಕ್ರವಾರ ಸುಮಂಗಲಿಯರಿಗೆ ಅರಿಶಿನ ಕುಂಕುಮವನ್ನು ಕೊಟ್ಟು ನಮಸ್ಕಾರವನ್ನು ಮಾಡಿ .

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top