fbpx
ಸಮಾಚಾರ

“ಮದುವೆ ಆಗದೇ ಸುಚೇಂದ್ರ ಪ್ರಸಾದ್ ಜೊತೆ 11 ವರ್ಷ ಇದ್ದೆ” ನಟಿ ಪವಿತ್ರಾ ಲೋಕೇಶ್ ಶಾಕಿಂಗ್ ಹೇಳಿಕೆ

ನಟಿ ಪವಿತ್ರಾ ಲೋಕೇಶ್​ ನಟನೆಯ ವಿಚಾರದಿಂದ ಸ್ಯಾಂಡಲ್​ವುಡ್ ಹಾಗು ಟಾಲಿವುಡ್​ ಜನರ ಮನಗೆದ್ದವರು. ಆದರೆ ಇದೀಗ ಅವರು ತಮ್ಮ ವೈಯಕ್ತಿಕ ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಸ್ಯಾಂಡಲ್​ವುಡ್​ ಹಾಗೂ ಟಾಲಿವುಡ್​ನಲ್ಲಿ ಅದೇ ಸುದ್ದಿ ಹರಿದಾಡುತ್ತಿದೆ. ಟಾಲಿವುಡ್​ನ ಹೆಸರಾಂತ ನಟ ನರೇಶ್​ ಅವರ ಜೊತೆ ಪವಿತ್ರಾ ಲೋಕೇಶ್​ ಅವರ ಸಂಬಂಧದ ಬಗ್ಗೆ ಸುದ್ದಿಗಳು ಹರಿದಾಡುತ್ತಿದೆ. ಈಗಷ್ಟೇ ನರೇಶ್​ ಅವರ ಪತ್ನಿ ರಮ್ಯಾ ಕೂಡ ಇಬ್ಬರ ವಿರುದ್ಧ ಕಿಡಿಕಾರಿದ್ದಾರೆ. ಆದರೆ ಈ ಎಲ್ಲಾ ಸುದ್ದಿಗಳ ಮಧ್ಯೆ ಪವಿತ್ರ ಲೋಕೇಶ್ ಅವರು ಸುಚೇಂದ್ರ ಪ್ರಸಾದ್ ಬಗ್ಗೆ ಬಾಂಬ್ ವೊಂದನ್ನು ಸಿಡಿಸಿದ್ದಾರೆ..

“ಸುಚೇಂದ್ರ ಪ್ರಸಾದ್ ಜೊತೆ ನಾನು ಮದ್ವೆನೇ ಆಗಿಲ್ಲ. ಅದಕ್ಕೆ ನನ್ನ ಬಳಿ ಯಾವುದೇ ಪುರಾವೆ ಇಲ್ಲ” ಎಂಬ ಹೇಳಿಕೆಯನ್ನು ಪವಿತ್ರ ಲೋಕೇಶ್ ಹೇಳಿಕೆ ನೀಡಿದ್ದಾರೆ. ಸದ್ಯ ನಡೆಯುತ್ತಿರುವ ಪವಿತ್ರ ಲೋಕೇಶ್ ಮತ್ತು ನರೇಶ್ ನಡುವಿನ ಸಂಭಂದದ ಸುದ್ದಿಗಳ ಬಗ್ಗೆ ಕನ್ನಡ ವಾಹಿನಿಯೊಂದಕ್ಕೆ ಈ ವಿಚಾರವನ್ನು ಸ್ವತಃ ಪವಿತ್ರ ಲೋಕೇಶ್ ಅವರೇ ಬಾಯಿಬಿಟ್ಟಿದ್ದಾರೆ..

ಇಷ್ಟು ದಿನ ಪವಿತ್ರಾ ಲೋಕೇಶ್ ಮತ್ತು ಸುಚೇಂದ್ರ ಪ್ರಸಾದ್ ದಂಪತಿಗಳು ಎಂದೇ ಹೇಳಲಾಗುತ್ತಿತ್ತು.. ಇಬ್ಬರೂ ಒಟ್ಟೊಟ್ಟಿಗೆ ಹೊರಗೆ ಕಾಣಿಸಿಕೊಳ್ಳುತ್ತಿದ್ದರು. ಒಮ್ಮೆ ಜೊತೆಯಾಗಿಯೇ ಹೋಗಿ ಮತ ಚಲಾಯಿಸಿ ಫೋಟೋಗೆ ಪೋಸ್ ಕೊಟ್ಟು ಬಂದಿದ್ದರು. ಅಷ್ಟೇ ಅಲ್ಲದೆ ಇವರಿಬ್ಬರ ದಾಂಪತ್ಯಕ್ಕೆ ಸಾಕ್ಷಿ ಅನ್ನೋ ಹಾಗಿ ಎರಡು ಮುದ್ದಾದ ಮಕ್ಕಳು ಕೂಡ ಇದ್ವು… ಆದರೆ ಇದ್ದಕ್ಕಿದ್ದ ಹಾಗೆ “ಸುಚೇಂದ್ರ ಪ್ರಸಾದ್ ಜೊತೆ ನಾನು ಮದ್ವೆನೇ ಆಗಿಲ್ಲ” ಎನ್ನುವಂತಹ ಮಾತನ್ನು ಪವಿತ್ರ ಲೋಕೇಶ್ ಆಡಿದ್ದಾರೆ. ಈ ಮಾತು ಎಲ್ಲರಿಗೂ ಶಾಕ್ ತಂದಿದೆ.

” ನಾನು ಮತ್ತು ಸುಚೇಂದ್ರ ಪ್ರಸಾದ್ ಒಟ್ಟಿಗೆ ಹನ್ನೊಂದು ವರ್ಷ ಇದ್ದದ್ದು ನಿಜ. ಆದರೆ, ಅವರ ಜೊತೆ ನನ್ನ ಮದುವೆ ಆಗಿಲ್ಲ. ಮದುವೆ ಆಗದೇ ಯಾಕೆ 11 ವರ್ಷಗಳ ಕಾಲ ಜೊತೆಗೆ ಇದ್ದವು ಎನ್ನುವುದನ್ನು ನಾನು ಹೇಳಲಾರೆ. ಅದನ್ನು ಸುಚೇಂದ್ರ ಪ್ರಸಾದ್ ಅವರೇ ಹೇಳಬೇಕು. ಮದುವೆ ಆಗದೇ ಇರುವುದಕ್ಕೆ ಅವರೇ ಕಾರಣ. ಆದರೂ, ಅವರನ್ನು ನಾನು ಇವತ್ತಿಗೂ ಗೌರವಿಸುತ್ತೇನೆ. ನಮ್ಮ ಮದುವೆ ವಿಚಾರವನ್ನು ಇಷ್ಟೇ ಹೇಳುವುದಕ್ಕೆ ಸಾಧ್ಯ’ ಎಂದಿದ್ದಾರೆ ಪವಿತ್ರಾ ಲೋಕೇಶ್.

” ನಾನು ಮದುವೆನೇ ಆಗಿಲ್ಲ…ವಿಚ್ಛೇದನ ಯಾಕೆ ತೆಗೆದುಕೊಳ್ಳಬೇಕು ನಾನು ಬೇರೆ ಇದ್ದೀನಿ. ನಾನು ಮದುವೆ ಆಗಿರುವುದು ದಾಖಲೆ ಇದಿಯಾ. ಅದು ನನಗೆ ಬಿಟ್ಟಿರುವ ವಿವಾರ. ಮಾಧ್ಯಮದ ಮುಂದೆ ನಾನ್ಯಾಕೆ ಮಾತನಾಡಬೇಕು ನನಗೇನು ಮಾಧ್ಯಮ ಸಹಾಯ ಮಾಡುತ್ತಾ, ನ್ಯಾಯ ಕೊಡಿಸುತ್ತಾ, ಜನ ಸಹಾಯ ಮಾಡುತ್ತಾರಾ, ಜನ ನನಗೆ ಸ್ಪಂದನೆ ನೀಡಬಹುದು.ನನ್ನ ಸಮಸ್ಯೆನ ನಾನೆ ಬಗೆಹರಿಸಿಕೊಳ್ಳುತ್ತೇನೆ.” ಎಂದು ಪವಿತ್ರ ಲೋಕೇಶ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top