fbpx
ಸಮಾಚಾರ

“ಸುಚೇಂದ್ರ ಪ್ರಸಾದ್​ಗೆ ನಾನು ಅನ್ಯಾಯ ಮಾಡಿಲ್ಲ,…” ನರೇಶ್ ಜೊತೆಗಿನ ಮದುವೆ ಬಗ್ಗೆ ಕೊನೆಗೂ ಪ್ತತಿಕ್ರಿಯೆ ನೀಡಿದ ಪವಿತ್ರಾ ಲೋಕೇಶ್

ನಟಿ ಪವಿತ್ರಾ ಲೋಕೇಶ್​ ನಟನೆಯ ವಿಚಾರದಿಂದ ಸ್ಯಾಂಡಲ್​ವುಡ್ ಹಾಗು ಟಾಲಿವುಡ್​ ಜನರ ಮನಗೆದ್ದವರು. ಆದರೆ ಇದೀಗ ಅವರು ತಮ್ಮ ವೈಯಕ್ತಿಕ ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಸ್ಯಾಂಡಲ್​ವುಡ್​ ಹಾಗೂ ಟಾಲಿವುಡ್​ನಲ್ಲಿ ಅದೇ ಸುದ್ದಿ ಹರಿದಾಡುತ್ತಿದೆ. ಟಾಲಿವುಡ್​ನ ಹೆಸರಾಂತ ನಟ ನರೇಶ್​ ಅವರ ಜೊತೆ ಪವಿತ್ರಾ ಲೋಕೇಶ್​ ಅವರ ಸಂಬಂಧದ ಬಗ್ಗೆ ಸುದ್ದಿಗಳು ಹರಿದಾಡುತ್ತಿದೆ. ಈಗಷ್ಟೇ ನರೇಶ್​ ಅವರ ಪತ್ನಿ ರಮ್ಯಾ ರಘುಪತಿ ಕೂಡ ಇಬ್ಬರ ವಿರುದ್ಧ ಕಿಡಿಕಾರಿದ್ದಾರೆ. ಆದರೆ ಇದೀಗ ಮೊಟ್ಟ ಮೊದಲ ಬಾರಿಗೆ ಪವಿತ್ರಾ ಲೋಕೇಶ್ ಅವರು ಪ್ರತಿಕ್ರಿಯಿಸಿದ್ದಾರೆ.

ಖಾಸಗಿ ಸುದ್ದಿ ಮಾಧ್ಯಮದ ಜೊತೆ ಮಾತನಾಡಿದ ಪವಿತ್ರಾ ನರೇಶ್ ಅವರಿಗೆ ಯಾವುದೇ ಕೆಟ್ಟ ಬುದ್ದಿ ಇಲ್ಲಾ.. ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಮಾಡಿರುವ ಆರೋಪಗಳು ಸುಳ್ಳು, ಅವರು ಮೋಸ ಮಾಡ್ತಿಲ್ಲ, ಸುಳ್ಳು ಹೇಳ್ತಿಲ್ಲಾ ಎಂದು ಹೇಳಿದರು. ಮತ್ತು ತಮ್ಮ ಎರಡನೆಯ ಪತಿ ಸುಚೇಂದ್ರ ಪ್ರಸಾದ್ ಅವರಿಗೆ ನಾನು ಯಾವುದೇ ಅನ್ಯಾಯ ಮಾಡಿಲ್ಲ ಎಂದು ಹೇಳಿದ್ದಾರೆ.

ಇದಲ್ಲದೆ ಪತ್ರಕರ್ತರೊಬ್ಬರು ನರೇಶ್​ ಹೇಳಿ ಕೇಳಿ ದೊಡ್ಡ ಮನೆಯಲ್ಲಿ ಹುಟ್ಟಿದವರು. ಹುಟ್ಟಿದಾಗಿನಿಂದಲೂ ಗೋಲ್ಡನ್​ ಸ್ಪೂನ್​ ಇಟ್ಟುಕೊಂಡೇ ಬಂದವರು. ನರೇಶ್​ ಒಟ್ಟು ಆಸ್ತಿ 6 ಸಾವಿರ ಕೋಟಿ ಎಂದು ಹೇಳಲಾಗುತ್ತಿದೆ. ಜೊತೆಗೆ ನರೇಶ್​ ಅವರಿಗೂ ಇದು ನಾಲ್ಕನೇ ಮದುವೆ ಎಂದು ಹೇಳಲಾಗುತ್ತಿದೆ. 62 ವರ್ಷದ ನರೇಶ್​ ಇದೀಗ 43 ವರ್ಷದ ಪವಿತ್ರಾ ಲೋಕೇಶ್​ ಅವರನ್ನು ಮದುವೆಯಾಗುತ್ತಿದ್ದಾರಂತೆ. ಹೀಗಾಗಿ ಹಣಕ್ಕಾಗಿಯೇ ಪವಿತ್ರಾ ಲೊಕೇಶ್​ ಅವರನ್ನು ವಿವಾಹವಾಗಲಿದ್ದಾರೆ ಎಂದು ಹೇಳಲಾಗಿತ್ತು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪವಿತ್ರಾ ನಾನು ನರೇಶ್ ಅವರ ಬಳಿ ಇರುವ ಹಣಕ್ಕಾಗಿ ಆತ್ಮೀಯನಾಗಿಲ್ಲ, ಅವರ ಸ್ವಭಾವಕ್ಕೆ ಮೆಚ್ಚಿ ಅವರ ಜೊತೆ ಇದ್ದೇನೆ ಎಂದು ಹೇಳಿದರು.

ನರೇಶ್ ಅವರ ಪತ್ನಿ ರಮ್ಯಾ ರಘುಪತಿ ಅವರು ನಮ್ಮ ಗಂಡ ಒಬ್ಬ ಹೆಣ್ಣುಬಾಕ. ಆತ ಹೆಣ್ಣುಬಾಕ ಅನ್ನುವುದು ಮದುವೆಯಾದ ಮೂರು ವರ್ಷಕ್ಕೆ ತಿಳಿದಿತ್ತು. ನಮ್ಮ ಅತ್ತೆಯವರದ್ದು ತುಂಬು ಕುಟುಂಬ. ಎಲ್ಲರೂ ಒಟ್ಟಿಗೆ ಇರುತ್ತೇವೆ. ಪ್ರತಿಯೊಂದು ಕ್ಷಣವನ್ನು ನಾವು ಅನುಭವಿಸೋಣ ಎಂದು ಅವರು ಹೇಳಿದ್ದರು. ಇವರು ನೋಡಿದರೆ, ಹೆಂಗಸರು ಅಂದರೆ ಬಾಯಿ ಬಿಡುತ್ತಿದ್ದರು ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top