fbpx
ಸಮಾಚಾರ

“6 ವರ್ಷಗಳಿಂದ ನಾನು ಸುಚೇಂದ್ರ ಪ್ರಸಾದ್ ಜೊತೆ ಇಲ್ಲ” ನಟಿ ಪವಿತ್ರಾ ಲೋಕೇಶ್

ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ಎರಡೂ ಕಡೆಗಳಲ್ಲಿಯೂ ಸದ್ಯ ನಟಿ ಪವಿತ್ರಾ ಲೋಕೇಶ್​ ಅವರು ತಮ್ಮ ವೈಯಕ್ತಿಕ ಕಾರಣಗಳಿಂದ ಸುದ್ದಿಯಲ್ಲಿದ್ದಾರೆ.. ಟಾಲಿವುಡ್​ನ ಹೆಸರಾಂತ ನಟ ನರೇಶ್​ ಅವರ ಜೊತೆ ಪವಿತ್ರಾ ಲೋಕೇಶ್​ ಅವರ ಸಂಬಂಧದ ಬಗ್ಗೆ ಸುದ್ದಿಗಳು ಹರಿದಾಡುತ್ತಿದೆ. ಈಗಷ್ಟೇ ನರೇಶ್​ ಅವರ ಪತ್ನಿ ರಮ್ಯಾ ರಘುಪತಿ ಕೂಡ ಇಬ್ಬರ ವಿರುದ್ಧ ಕಿಡಿಕಾರಿದ್ದಾರೆ. ಆದರೆ ಈ ಎಲ್ಲಾ ಸುದ್ದಿಗಳ ಮಧ್ಯೆ ಪವಿತ್ರಾ ಲೋಕೇಶ್ ಈ ವಿಚಾರವಾಗಿ ಮಾಧ್ಯಮದ ಜೊತೆ ಮಾತನಾಡಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇದೇ ಸಮಯದಲ್ಲಿ ನಟ ಸುಚ್ಚೇಂದ್ರ ಪ್ರಸಾದ್ ಜೊತೆಗಿನ ಮದುವೆ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಮದುವೆನೇ ಆಗಿಲ್ಲ, ವಿಚ್ಛೇದನ ಯಾಕೆ ತೆಗೆದುಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ. ನಾನು ಈಗ ಬೇರೆ ಇದ್ದೀನಿ. ನಾನು ಮದುವೆ ಆಗಿರುವುದಕ್ಕೆ ಏನಾದರೂ ದಾಖಲೆ ಇದಿಯಾ. ಅದು ನನಗೆ ಬಿಟ್ಟಿದ್ದು. ಮಾಧ್ಯಮದ ಮುಂದೆ ನಾನ್ಯಾಕೆ ಮಾತನಾಡಬೇಕು’ ಎಂದು ಹೇಳಿದ್ದಾರೆ.

“ನಾನು ಮತ್ತು ಸುಚೇಂದ್ರ ಪ್ರಸಾದ್ ಒಟ್ಟಿಗೆ ಹನ್ನೊಂದು ವರ್ಷ ಇದ್ದದ್ದು ನಿಜ. ಆದರೆ, ಅವರ ಜೊತೆ ನನ್ನ ಮದುವೆ ಆಗಿಲ್ಲ. ಮದುವೆ ಆಗದೇ ಯಾಕೆ 11 ವರ್ಷಗಳ ಕಾಲ ಜೊತೆಗೆ ಇದ್ದವು ಎನ್ನುವುದನ್ನು ನಾನು ಹೇಳಲಾರೆ. ಅದನ್ನು ಸುಚೇಂದ್ರ ಪ್ರಸಾದ್ ಅವರೇ ಹೇಳಬೇಕು. ಮದುವೆ ಆಗದೇ ಇರುವುದಕ್ಕೆ ಅವರೇ ಕಾರಣ. ಆದರೂ, ಅವರನ್ನು ನಾನು ಇವತ್ತಿಗೂ ಗೌರವಿಸುತ್ತೇನೆ. ನಮ್ಮ ಮದುವೆ ವಿಚಾರವನ್ನು ಇಷ್ಟೇ ಹೇಳುವುದಕ್ಕೆ ಸಾಧ್ಯ’ ಎಂದಿದ್ದಾರೆ ಪವಿತ್ರಾ ಲೋಕೇಶ್.

“ಸುಚೇಂದ್ರ ಪ್ರಸಾದ್ ನನ್ನ ಕುರಿತು ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಆದರೆ, ನಾನು ಆರು ವರ್ಷಗಳಿಂದ ಅವರ ಜೊತೆ ಬದುಕುತ್ತಿಲ್ಲ. 2017ರಿಂದಲೇ ನಾನು ಅವರಿಂದ ದೂರವಾಗಿ, ಬೇರೆ ಫ್ಲ್ಯಾಟ್ ನಲ್ಲಿ ಬದುಕುತ್ತಿದ್ದೇನೆ. ಯಾಕೆ ಅವರಿಂದ ದೂರವಾದೆ, ನಮ್ಮಿಬ್ಬರ ಮಧ್ಯೆ ಅದೇನಾಯಿತು ಎನ್ನುವುದನ್ನು ನಾನು ಹೇಳಲಾರೆ. ಅದು ನನ್ನ ವೈಯಕ್ತಿಕ ನಿರ್ಧಾರ. ಈ ಕುರಿತು ಮತ್ತೇನೂ ಹೇಳಲಾರೆ” ಎಂದಿದ್ದಾರೆ ಪವಿತ್ರಾ ಲೋಕೇಶ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top