ಜನರು ರೈಲು ಪ್ರಯಾಣ ಅತ್ಯಂತ ಕಡಿಮೆ ಬೆಲೆ ಇಂದ ಕೂಡಿದೆ ಎಂದು ಹೆಚ್ಚಾಗಿ ರೈಲಿನಲ್ಲೇ ಪ್ರಯಾಣ ಮಾಡಲು ಇಷ್ಟಪಡುತ್ತಾರೆ. ಆದರೆ ರೈಲಿನ ಟಿಕೆಟ್ ಕಡಿಮೆ ಇದ್ದರು ರೈಲಿನಲ್ಲಿ ಸಪ್ಲೈ ಆಗುವ ತಿಂಡಿ ಕಾಫೀ ಬೆಲೆ ಮಾತ್ರ ಗಗನಕ್ಕೇರಿದೆ. ಏಕೆಂದರೆ ರೈಲಿನ ಪ್ರಯಾಣಿಕರೊಬ್ಬರು ಒಂದು ಕಪ್ ಕಾಫೀ ಆರ್ಡರ್ ಮಾಡಿದಕ್ಕೆ ಅವರಿಗೆ 70ರೂ. ವಿಧಿಸಲಾಗಿದೆ. ಇದು ಹೇಗೆ ಸಾದ್ಯ ಅಂತೀರಾ…?
ಈ ಘಟನೆ ನಡೆದಿರುವುದು ಜೂನ್ 28 ರಂದು. ರೈಲ್ವೆ ಪ್ರಯಾಣಿಕರೊಬ್ಬರು ದೆಹಲಿಯಿಂದ ಭೋಪಾಲ್ಗೆ ಶತಾಬ್ದಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಮಯದಲ್ಲಿ ಅವರು ಒಂದು ಕಪ್ ಚಹಾವನ್ನು ಆರ್ಡರ್ ಮಾಡಿದ್ದಾರೆ. ಇವರಿಗೆ ಇದರ ಬಿಲ್ ನೀಡಿದ್ದಾಗ ಇಂದು ಕ್ಷಣ ಶಾಕ್ ಆಗಿದ್ದಾರೆ. ಏಕೆಂದರೆ ಕಾಫೀ ಬೆಲೆ ಕೇವಲ 20ರೂ. ಗಳಾಗಿದ್ದಾರೆ ಇದರ ಸರ್ವಿಸ್ ಟ್ಯಾಕ್ಸ್ ಬೆಲೆ ಬರೋಬ್ಬರಿ 50ರೂ. ಗಳು. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
20 रुपये की चाय पर 50 रुपये का टैक्स, सच मे देश का अर्थशास्त्र बदल गया, अभी तक तो इतिहास ही बदला था! pic.twitter.com/ZfPhxilurY
— Balgovind Verma (@balgovind7777) June 29, 2022
ಇದು ಹೇಗೆ ಸದ್ಯ ಎಂಬುದನ್ನು ತಿಳಿಯಲು ಹೊರಟಾಗ ಟಿಕೆಟ್ ಬುಕ್ ಮಾಡುವ ಸಮಯದಲ್ಲಿ ಅಡುಗೆ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳದ ಪ್ರಯಾಣಿಕರು ಪ್ರಯಾಣಿಸುವ ವೇಳೆ ಊಟವನ್ನು ಖರೀದಿಸಲು ನಿರ್ಧರಿಸಿದರೆ ಪ್ರತಿ ಆಹಾರಕ್ಕೆ 50 ರೂಪಾಯಿ ಹೆಚ್ಚುವರಿ ಮೊತ್ತದ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಭಾರತೀಯ ರೈಲ್ವೇಯು 2018ರಲ್ಲಿ ಸುತ್ತೋಲೆಯೊಂದನ್ನು ಪ್ರಕಟಿಸಿತ್ತು. ಇದೇ ಕಾರಣಕ್ಕಾಗಿ ಪ್ರಯಾಣಿಕರಿಗೆ ಹೆಚ್ಚುವರಿಯಾಗಿ ಸರ್ವಿಸ್ ಟ್ಯಾಕ್ಸ್ ಮೂಲಕ 50ರೂ. ಗಳನ್ನೂ ವಿಧಿಸಲಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
