fbpx
ಸಮಾಚಾರ

ಪತಿಯನ್ನು ಕಳೆದುಕೊಂಡ ದುಃಖದಲ್ಲಿ ವಿಶೇಷ ಮನವಿ ಮಾಡಿದ ನಟಿ ಮೀನಾ

ನಟಿ ಮೀನಾ ಅವರ ಪತಿ ವಿದ್ಯಾ ಸಾಗರ್ ಅವರು ಇತ್ತೀಚೆಗೆ ಮೃತಪಟ್ಟರು. ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಪತಿಯನ್ನು ಕಳೆದುಕೊಂಡ ನೋವು ಮೀನಾ ಅವರನ್ನು ಬಹುವಾಗಿ ಕಾಡಿದೆ. ವಿದ್ಯಾ ಸಾಗರ್ ನಿಧನದ ನಂತರದಲ್ಲಿ ಅವರು ಇದೇ ಮೊದಲ ಬಾರಿಗೆ ಮೀನಾ ಪ್ರತಿಕ್ರಿಯೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಭಾವುಕರಾಗಿ ಪೋಸ್ಟ್ ಹಾಕಿದ್ದಾರೆ.

 

 

View this post on Instagram

 

A post shared by Meena Sagar (@meenasagar16)

 

ಪತಿಯನ್ನು ಕಳೆದುಕೊಂಡು ದುಃಖದಲ್ಲಿರುವ ಮೀನಾ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಮನವಿ ಮಡಿದ್ದಾರೆ. ದಯವಿಟ್ಟು ತನ್ನ ಪತಿಯ ಸಾವಿನ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಕೇಳಿಕೊಂಡಿದ್ದಾರೆ. ಇಂತ ಕಷ್ಟದ ಸಮಯದಲ್ಲಿ ತಮ್ಮ ಖಾಸಗಿ ಜೀವನಕ್ಕೆ ಗೌರವ ನೀಡಿ ಎಂದು ಮನವಿ ಮಾಡಿದ್ದಾರೆ. ನನ್ನ ಪ್ರೀತಿಯ ವಿದ್ಯಾಸಾಗರ್ ಅಗಲಿಕೆ ಇಂದ ನಾನು ತುಂಬಾ ಬೇಸರದಲ್ಲಿರುವೆ. ಅಲ್ಲದೇ ನಮ್ಮ ಖಾಸಗಿತನವನ್ನು ಗೌರವಿಸಿ ಜೊತೆಗೆ ಸ್ವಲ್ಪ ಸಹಾನುಭೂತಿಯನ್ನು ತೋರಿಸಿ ಎಂದು ಮಾಧ್ಯಗಳ ಬಳಿ ಹಾಗೂ ಅಭಿಮಾನಿಗಳಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.

 

 

“ಈ ಕಷ್ಟದ ಸಮಯದಲ್ಲಿ, ನಮ್ಮ ಕುಟುಂಬಕ್ಕೆ ಸಹಾಯ ಮಾಡಿದ ಮತ್ತು ನಮ್ಮ ಪರ ನಿಂತ ಎಲ್ಲಾ ಸಹೃದಯಿಗಳಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ತಮ್ಮ ಕೈಲಾದ ಪ್ರಯತ್ನ ಮಾಡಿದ ಎಲ್ಲಾ ವೈದ್ಯಕೀಯ ತಂಡ, ನಮ್ಮ ಮುಖ್ಯಮಂತ್ರಿ, ಆರೋಗ್ಯ ಸಚಿವರು, ರಾಧಾಕೃಷ್ಣನ್ ಐಎಎಸ್, ಸಹೋದ್ಯೋಗಿಗಳು, ಸ್ನೇಹಿತರು, ಕುಟುಂಬ, ಮಾಧ್ಯಮಗಳು ಹಾಗೂ ತಮ್ಮ ಪ್ರೀತಿ ಮತ್ತು ಪ್ರಾರ್ಥನೆಗಳನ್ನು ಕಳುಹಿಸಿದ್ದಕ್ಕಾಗಿ ನನ್ನ ಪ್ರೀತಿಯ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ಹೇಳಿದ್ದಾರೆ. ಮೀನಾ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿ ಧೈರ್ಯ ತುಂಬುತ್ತಿದ್ದಾರೆ.” ಎಂದು ಮೀನಾ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top