ನಟ ಕಿಚ್ಚ ಸುದೀಪ್ ಹಾಗು ಅನೂಪ್ ಬಂಡಾರಿ ಅವರ ಕಾಂಬಿನೇಶನ್ ನಲ್ಲಿ ಮೂಡಿಬರುವ ಮುಂದಿನ ಸಿನಿಮಾ ಯಾವುದೆಂಬುದು ಅಭಿಮಾನಿಗಳಿಗೆ ಪ್ರಶ್ನೆಯಾಗಿ ಉಳಿದಿತ್ತು. ಇದೀಗ ಇದಕ್ಕೆ ಉತ್ತರ ಸಿಕ್ಕಿದ್ದು ವಿಕ್ರಾಂತ್ ರೋಣ ಸಿನಿಮಾದ ನಂತರ ಕಿಚ್ಚ ‘ಬಿಲ್ಲ ರಂಗ ಭಾಷಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಕೂಡ ಒಂದು ಪಾನ್ ಇಂಡಿಯಾ ಸಿನಿಮಾ ವಾಗಿದ್ದು, ಹಲವು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.
ಸದ್ಯ ವಿಕ್ರಾಂತ್ ರೋಣ ಸಿನಿಮಾದ ಪ್ರಮೋಷನ್ ನಲ್ಲಿ ಬಿಸಿಯಾಗಿರುವ ಕಿಚ್ಚ ಇದೇ ತಿಂಗಳು 28 ರಂದು ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾದ ನಂತರ ಅನೂಪ್ ಬಂಡಾರಿ ಅವರ ಜೊತೆಗೂಡಿ ‘ಬಿಲ್ಲ ರಂಗ ಭಾಷಾ’ ಸಿನಿಮಾದಲ್ಲಿ ನಟಿಸಲಿದ್ದಾರೆ.
ಪಾನ್ ಇಂಡಿಯಾ ಎಂದಾಕ್ಷಣ ಇದರ ಕ್ರೇಜ್ ಬಹಳಷ್ಟು ಇರುತ್ತದೆ. ಹಲವು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಯಾಗುತ್ತದೆ. ಇದಲ್ಲದೆ ಇದರಲ್ಲಿ ಎರಡಕ್ಕಿಂತ ಹೆಚ್ಚು ಭಾಗಗಳಿರುತ್ತದೆ. ಆದರೆ ವಿಕ್ರಾಂತ್ ರೋಣ ಸಿನಿಮಾದಲ್ಲಿ ಅದು ಇಲ್ಲದಂತೆ ಕಾಣುತ್ತಿದೆ. ಇದು ಅಭಿಮಾನಿಗಳಿಗೆ ಸ್ವಲ್ಪ ಮಟ್ಟಿಗೆ ಬೇಸರ ತಂದುಕೊಟ್ಟಿತ್ತು. ಆದರೆ ಸಂತಸದ ಸುದ್ದಿ ಎಂದರೆ ‘ಬಿಲ್ಲ ರಂಗ ಭಾಷಾ’ ಸಿನಿಮಾವು ಎರಡು ಭಾಗಗಳಲ್ಲಿ ಚಿತ್ರೀಕರಣವಾಗುತ್ತದೆ ಎಂದು ಹೇಳಲಾಗುತ್ತಿದೆ.
ವಿಕ್ರಾಂತ್ ರೋಣ ಸಿನಿಮಾದ ಮೊದಲೇ ‘ಬಿಲ್ಲ ರಂಗ ಭಾಷಾ’ ಸಿನಿಮಾ ಸೆಟ್ಟೇರಬೇಕಿತ್ತು. ಆದರೆ ಈ ಸಿನಿಮಾದ ಚಿತ್ರೀಕರಣಕ್ಕೆ ಹೆಚ್ಚಿನ ಸಮಯಬೇಕಾಗಿದ್ದ ಕಾರಣ ವಿಕ್ರಾಂತ್ ರೋಣ ಸಿನಿಮಾದ ನಂತರ ‘ಬಿಲ್ಲ ರಂಗ ಭಾಷಾ’ ಸಿನಿಮಾವನ್ನು ಚಿತ್ರಿಸಬೇಕೆಂದು ಚಿತ್ರತಂಡ ತೀರ್ಮಾನಿಸಿತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
