fbpx
ಸಮಾಚಾರ

ಟ್ರಾಫಿಕ್ ನಿಯಮ ಉಲ್ಲಂಘಿಸಿ ರೀಲ್ಸ್ ಮಾಡುವವರಿಗೆ ಬಿಸಿ ಮುಟ್ಟಿಸಿದ ಪೊಲೀಸರು! ಬಿತ್ತು ಬರೋಬ್ಬರಿ 17500ರೂ. ದಂಡ

ಇತ್ತೀಚಿನ ದಿನಗಳಲ್ಲಿ ಜನರು ತಾವು ಹೆಚ್ಚು ಫೇಮಸ್ ಆಗಬೇಕು, ಬಹು ಬೇಗ ಗುರಿತಿಸಿಕೊಳ್ಳಬೇಕು ಎಂದು ಯೋಚಿಸುತ್ತಾರೆ. ಇದಕ್ಕಾಗಿ ಅವರು ಹಲವಾರು ಸಾಹಸಗಳನ್ನು ಸಹ ಮಾಡುತ್ತಾರೆ. ಇಂತಹ ಸಾಹಸಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಾರೆ. ಆದರೆ ಇದೀಗ ಸಂಚಾರಿ ಪೊಲೀಸರು ಇವರ ವಿರುದ್ಧ ಕೇಸ್ ಧಾಖಲಿಸಿ ಫೈನ್ ಕಟ್ಟಿಸಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಮ್ ರೀಲ್ಸ್ ತುಂಬಾ ಕಾಮನ್ ಆಗಿದೆ. ಕೇವಲ ಒಂದು ಲೈಕ್ಸ್ ಮತ್ತು ಕಮೆಂಟ್ ಗಳಿಗೋಸ್ಕರ ತಮ್ಮ ಜೀವವನ್ನೇ ಪಣಕ್ಕಿಟ್ಟು ಹಲವಾರು ಸಾಹಸಗಳನ್ನು ಮಾಡುತ್ತಾರೆ. ಕೆಲವರು ಮೊಬೈಲ್ ನಲ್ಲಿ ಮಾತನಾಡುತ್ತಾ ಬೈಕ್ ಓಡಿಸುವುದು, ಹೆಲ್ಮೆಟ್ ಇಲ್ಲದೆ ದ್ವಿಚಕ್ರವಾಹನದಲ್ಲಿ ಪ್ರಯಾಣಿಸುವುದು ಹೀಗೆ ಹತ್ತು ಹಲವಾರು ಸಾಧನೆಗಳನ್ನು ಮಾಡುತ್ತಾರೆ. ಇದೀಗ ಸಂಚಾರಿ ಪೊಲೀಸರು ಇಂತವರನ್ನು ಹುಡುಕಿ ಅವರಿಗೆ ದಂಡ ವಿಧಿಸಿದ್ದಾರೆ.

ಈ ಶಿಕ್ಷೆಗೆ ಗುರಿಯಾಗಿರುವುದು ಇನ್ಸ್ಟಾಗ್ರಾಮ್ ರೀಲ್ಸ್ ಮೂಲಕ ಖ್ಯಾತಿ ಗಳಿಸಿರುವ ಒಬ್ಬ ವ್ಯಕ್ತಿ. ಈತ ತಾನು ಮಾಡುವ ಇನ್ಸ್ಟಾಗ್ರಾಮ್ ರಿಲ್ಸ್ ಗಳಲ್ಲಿ ಎಲ್ಲಿಯೂ ಸಹ ಹೆಲ್ಮೆಟ್ ಬಳಸದೆ ಸಂಚಾರಿ ನಿಯಮವನ್ನು ಗಾಳಿಗೆ ತೂರಿದ್ದಾನೆ. ಇದೇ ಕಾರಣಕ್ಕಾಗಿ ಇವನ ಮೇಲೆ ಸುಮಾರು 44 ಕೇಸ್ ಗಳನ್ನೂ ಧಾಖಲಿಸಿರುವ ಪೊಲೀಸರು ಬರೋಬ್ಬರಿ 17500ರೂ. ದಂಡ ವಿಧಿಸಿದ್ದಾರೆ. ತಾನು ದಂಡ ಕಟ್ಟಿರುವ ವಿಚಾರವನ್ನು ಸಹ ಆತ ರೀಲ್ಸ್ ಮಾಡಿ ಅಪ್ಲೋಡ್ ಮಾಡಲಾಗಿದ್ದು, ಇದು ಕೂಡ ಸಕತ್ ವೈರಲ್ ಆಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top