ಬರ್ಮಿನ್ಗ್ ಹಾಂ ನ ಎಡ್ಜ್ ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ವಿಶ್ವದಾಖಲೆಯೊಂದು ನಿರ್ಮಾಣವಾಗಿದೆ.. ಒಂದು ಓವರ್ ನಲ್ಲಿ ಅತಿ ಹೆಚ್ಚು ರನ್ ಹೊಡೆದ ಖ್ಯಾತಿಗೆ ಜಸ್ಮಿತ್ ಬುಮ್ರಾಹ್ ಪಾತ್ರರಾದರೆ ಇನ್ನೊಂದು ಕಡೆ ಅತಿ ಹೆಚ್ಚು ರನ್ (35 ರನ್) ಹೊಡೆಸಿಕೊಂಡ ಕುಖ್ಯಾತಿಗೆ ಇಂಗ್ಲೆಂಡ್ ನ ದೈತ್ಯ ಬೌಲರ್ ಸ್ಟುವರ್ಟ್ ಬ್ರಾಡ್ ತುತ್ತಾಗಿದ್ದಾರೆ..
Ek over mein full राडा! ft. #OneFamily #ENGvIND @Jaspritbumrah93 pic.twitter.com/2EEG25Gwe5
— Mumbai Indians (@mipaltan) July 2, 2022
ಎರಡನೇ ದಿನದಾಟದಲ್ಲಿ ಶಮಿ ವಿಕೆಟ್ ಪಡೆಯುವ ಮೂಲಕ ಶುಭಾರಂಭ ಮಾಡಿದ್ದ ಬ್ರಾಡ್ ತಾವು ಎಸೆದ ಇನ್ನಿಂಗ್ಸ್ ನ 84ನೆ ಓವರ್ ನಲ್ಲಿ ಬರೋಬ್ಬರಿ 35 ರನ್ ನೀಡಿದ್ದಾರೆ.. ಇದರಲ್ಲಿ 29 ರನ್ (4 ಬೌಂಡರಿ, 2 ಸಿಕ್ಸರ್, 1 ಸಿಂಗಲ್) ಜಸ್ಮಿತ್ ಬುಮ್ರಾ ಬ್ಯಾಟ್ ನಿಂದ ಬಂದರೆ 6 ರನ್ ವೈಡ್ ಮತ್ತು ನೋಬಾಲ್ ನಿಂದ ಬಂದಿದೆ. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ನೀಡಿದ ಓವರ್ ಎಂಬ ಕುಖ್ಯಾತಿಗೆ ಕಾರಣವಾಗಿದೆ.. ಇದಕ್ಕೂ ಮೊದಲು ವಿಂಡೀಸ್ ಆಟಗಾರ ಬ್ರಯಾನ್ ಲಾರಾ ದಕ್ಷಿಣ ಆಫ್ರಿಕಾದ R ಪೀಟರ್ಸನ್ ಅವರ ಓವರ್ ಒಂದರಲ್ಲಿ ಬಾರಿಸಿದ್ದ 28 ರನ್ನೇ ಅಧಿಕವಾಗಿತ್ತು..
35 runs off the Stuart Broad over. And of all people, it’s Jasprit Bumrah who was the batsman
Ball 1: FOUR
Ball 2: Five wides
Ball 2: no ball + SIX
Ball 2: FOUR
Ball 3: FOUR
Ball 4: FOUR
Ball 5: SIX
Ball 6: 1 runTHE MOST EXPENSIVE OVER IN TEST CRICKET, EVER! #ENGvIND pic.twitter.com/4Ix5btsdg7
— Cricbuzz (@cricbuzz) July 2, 2022
84ನೇ ಓವರ್ ನ ಮೊದಲ ಎಸೆತವನ್ನು ಬುಮ್ರಾಹ್ ಬೌಂಡರಿಗೆ ಅಟ್ಟಿದರು. ನಂತರದ ಎಸೆತ ವೈಡ್ ಆಗಿ ಬೌಂಡರಿ ದಾಟಿತು. ಬಳಿಕ ಎಸೆದ ಎಸೆತ ನೋಬಾಲ್ ಆಗಿತ್ತು ಅದರಲ್ಲಿಯೂ ಬುಮ್ರಾಹ್ ಫೋರ್ ಹೊಡೆದರು.. ನಂತರದ ಎಸೆತಗಳನ್ನು ಕ್ರಮವಾಗಿ 4 4 4 6 ರನ್ ಗಳನ್ನೂ ಚಚ್ಚಿದರು. ಕೊನೆ ಎಸೆತದಲ್ಲಿ ಕೇವಲ ಒಂದು ರನ್ ಮಾತ್ರ ಪಡೆದುಕೊಂಡರು.
Stuart Broad to Jasprit Bumrah 4,4WD,6NB,4,4,4,6,1 – 35 runs
World Record.#StuartBroad #ENGvsIND#JaspritBumrah #INDvsENG— Cricket Videos (@Abdullah__Neaz) July 2, 2022
ಟೆಸ್ಟ್ ಕ್ರಿಕೆಟ್ನಲ್ಲಿ ಒಂದು ಓವರ್ನಲ್ಲಿ ಅತಿ ಹೆಚ್ಚು ರನ್
35 ಜೆ ಬುಮ್ರಾ V ಎಸ್ ಬ್ರಾಡ್ ಬರ್ಮಿಂಗ್ಹ್ಯಾಮ್ 2022 *
28 ಬಿ ಲಾರಾ V ಆರ್ ಪೀಟರ್ಸನ್ ಜೋಹಾನ್ಸ್ಬರ್ಗ್ 2003
28 ಜಿ ಬೈಲಿ V ಜೆ ಆಂಡರ್ಸನ್ ಪರ್ತ್ 2013
28 ಕೆ ಮಹಾರಾಜ್ V ಜೆ ರೂಟ್ ಪೋರ್ಟ್ ಎಲಿಜಬೆತ್ 2020
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
