fbpx
ಸಮಾಚಾರ

ಯಾವಾಗಿಂದ ಶುರುವಾಗುತ್ತೆ ಕನ್ನಡ ಬಿಗ್‌ ಬಾಸ್ ಸೀಸನ್ 9 ? ಇಲ್ಲಿದೆ ಉತ್ತರ

ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಎಂಬ ಹೆಸರು ಗಿಟ್ಟಿಸಿರುವ ಬಿಗ್’ಬಾಸ್ ಕಾರ್ಯಕ್ರಮದ ಎಂಟನೇ ಸೀಸನ್ ಮುಗಿದು ಅದಾಗಲೇ ಒಂದು ವರ್ಷ ಸವೆದಿದೆ. ಹೀಗಿದ್ದರೂ ಅದಾಗಲೇ ಮತ್ತೊಂದು ಸೀಸನ್ನಿನ ಆರಂಭ ಇನ್ನೂ ಆಗಿಲ್ಲ ಎಂಬುದು ವೀಕ್ಷಕರ ಪ್ರಶ್ನೆಯಾಗಿದ್ದು ಮುಂದಿನ ಸೀಸನ್ ಆರಂಭಕ್ಕಾಗಿ ಬಿಗ್ ಬಾಸ್ ಅಭಿಮಾನಿಗಳು ಕಾತರರಾಗಿದ್ದಾರೆ.

ಒಂದಷ್ಟು ಮನರಂಜನೆಯ ಜೊತೆಗೆ ಸ್ಪರ್ಧಿಗಳ ನಡುವಿನ ರಂಪಾಟ, ಸಣ್ಣತನ, ಕಿರಿಕ್ಕುಗಳೇ ಜೀವಾಳವಾಗಿರೋ ಈ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಜನರಿಗೆ ತಕರಾರಿದೆ. ಇದು ನಮ್ಮ ಕನ್ನಡ ನೆಲಕ್ಕೆ ಒಗ್ಗದ ಕಾನ್ಸೆಪ್ಟ್ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿರುತ್ತದೆ. ಇಂಥ ನೂರೆಂಟು ತಾತ್ಸಾರದ ಮಾತುಗಳ ನಡುವೆಯೂ ಬರೋಬ್ಬರಿ ಎಂಟು ಸೀಸನ್ನುಗಳನ್ನು ಮುಗಿಸಿರುವ ಬಿಗ್ ಬಾಸ್ ಸದ್ಯದಲ್ಲೇ 9ನೇ ಬಾರಿಗೆ ಕನ್ನಡ ಪ್ರೇಕ್ಷಕರ ಬಳಿಗೆ ಲಗ್ಗೆಯಿಡಲಿದೆಯಂತೆ.

ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಬಿಗ್ ಬಾಸ್ ಶೋನ 9ನೇ ಅವತರಣಿಕೆ ಸೆಪ್ಟೆಂಬರ್ ವೇಳೆಗೆ ಶುರುವಾಗುವ ಸಾಧ್ಯತೆಯಿದೆ. ಈಗಾಗಲೇ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು ಅದಕ್ಕೆ ಸಂಭಂದಪಟ್ಟ ಕೆಲಸಗಳನ್ನೂ ಈಗಾಗಲೇ ಶುರುವಿಟ್ಟುಕೊಂಡಿದ್ದರಂತೆ.. ಒಟ್ಟಿನಲ್ಲಿ ಎಲ್ಲ ಅಂದುಕೊಂಡಂತೆ ಆದರೆ ಸೆಪ್ಟೆಂಬರ್ ವೇಳೆಗೆ ಹೊಸ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಡೋದಂತೂ ಕನ್ಫರ್ಮ್ ಅಂತೇ. ಈ ಮೂಲಕ ಎಲ್ಲೋ ಒಂದಿಷ್ಟು ಮಂದಿ ಪ್ರತಿಭಾವಂತರು, ರಿಟೇರ್‍ಮೆಂಟ್ ಸ್ಟೇಜಿನ ಕಲಾವಿದರು ಮತ್ತು ಕೆಲವೊಂದಷ್ಟು ತಿಕ್ಕಲುತನಗಳನ್ನು ಮತ್ತೊಮ್ಮೆ ನೋಡೋ ಕಾಲ ಬರುತ್ತಿದೆ..

ಸುದೀಪ್ ಡೇಟ್ಸ್ ನದ್ದೇ ಸಮಸ್ಯೆ:
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗಾಗಲೇ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಶುರು ಆಗಬೇಕಿತ್ತು. ಆದರೆ ಸದ್ಯಕ್ಕೆ ಈ ಶೋಗೆ ತಡೆಯಾಗುತ್ತಿರುವುದು ನಿರೂಪಕ ಕಿಚ್ಚ ಸುದೀಪ್ ಅವರ ಡೇಟ್ಸ್. ಸದ್ಯ ಕಿಚ್ಚ ತಮ್ಮ ಬಹು ನಿರೀಕ್ಷೆಯ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ.. ಈಗ ಅವರು ದೇಶವಿಡೀ ಸುತ್ತುತ್ತಾ ಸಿನಿಮಾ ಪ್ರಮೋಶನ್‌ನಲ್ಲಿ ಭಾಗಿಯಾಗಿದ್ದಾರೆ. ವಿಕ್ರಾಂತ್ ರೋಣ ಜೂಲೈ 28ರಂದು ತೆರೆ ಕಾಣಲಿದ್ದು ಅಲ್ಲಿಯವರೆಗೂ ಸುದೀಪ್ ಕೈಗೆ ಸಿಗಲ್ಲ. ಹಾಗಾಗಿ ಬಿಗ್ ಬಾಸ್ ತಡವಾಗುತ್ತಿದೆ ಎನ್ನಲಾಗಿದೆ. ಆದರೆ ಸದ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ ಈ ಸಿನಿಮಾ ತೆರೆ ಕಂಡ ಬಳಿಕ ಬಿಗ್ ಬಾಸ್ ಹೋಸ್ಟ್ ಮಾಡಲು ತೆರಳುವ ಸಾಧ್ಯತೆ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top