ಖ್ಯಾತ ನಟಿ ಮೀನಾ ಅವರ ಪತಿ ವಿದ್ಯಾ ಸಾಗರ್ ಇತ್ತೀಚಿಗೆ ನಿಧನರಾಗಿದ್ದರು. ಮೀನಾ ಅವರ ಪತಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿತ್ತು. ಈ ಮದ್ಯೆ ವಿದ್ಯಾಸಾಗರ್ ಅನೇಕ ಸುದ್ದಿಗಳು ಹರಿದಾಡುತ್ತಿತ್ತು. ಈ ನಡುವೆ ನಟಿ ಖುಷ್ಬೂ ಸುಂದರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ವಿದ್ಯಾಸಾಗರ್ ಸಾವಿಗೆ ಕೊರೊನಾ ಕಾರಣ ಅಲ್ಲ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.
ಕನ್ನಡ ಮತ್ತು ದಕ್ಷಿಣ ಚಿತ್ರರಂಗದಲ್ಲಿ ಗಮನ ಸೆಳೆದ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಇತ್ತಿಚೆಗೆಷ್ಟೇ ನಿಧನರಾದರು. ಇಡೀ ಕುಟುಂಬವೇ ಶೋಕ ಸಾಗರದಲ್ಲಿ ಮುಳುಗಿರುವ ಈ ಸಮಯದಲ್ಲಿ ಮೀನಾ ಪತಿಯ ಸಾವಿನ ಕುರಿತು ನಾನಾ ವದಂತಿಗಳು ಹರಿದಾಡುತ್ತಿದೆ. ಕೊರೊನಾದಿಂದಲೇ ಮೀನಾ ಪತಿ ಸಾವಾಗಿದೆ ಎಂಬ ಸುದ್ದಿಯ ಬೆನ್ನಲ್ಲೇ ನಟಿ ಖೂಷ್ಬೂ ಮೀನಾ ಪತಿ ಸಾವಿಗೆ ಕೊರೋನಾ ಕಾರಣ ಅಲ್ಲ ಸ್ಪಷ್ಟನೆ ನೀಡಿದ್ದಾರೆ.
I very humbly request the media to be little responsible. Meena's husband had covid 3 months back. Covid worsened his lung condition. Pls do not send out a wrong message & create any kind of fear or cause flutter by saying we lost Sagar to covid. Yes we need to cautious, but pls.
— KhushbuSundar (@khushsundar) June 29, 2022
ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ. ‘ಮಾಧ್ಯಮದವರು ತುಂಬ ಜವಾಬ್ದಾರಿಯುತವಾಗಿ ಇರಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ಮೀನಾ ಪತಿಗೆ ಮೂರು ತಿಂಗಳ ಹಿಂದೆ ಕೊವಿಡ್ ಆಗಿತ್ತು. ಅದರಿಂದ ಅವರ ಶ್ವಾಸಕೋಶದ ಸ್ಥಿತಿ ಹದಗೆಟ್ಟಿತ್ತು. ಆದರೆ ಕೊವಿಡ್ನಿಂದಲೇ ಅವರು ಮೃತರಾದರು ಎಂದು ಹೇಳುವ ಮೂಲಕ ತಪ್ಪು ಮಾಹಿತಿ ಮತ್ತು ಭಯವನ್ನು ಹುಟ್ಟುಹಾಕಬೇಡಿ. ನಾವು ಎಚ್ಚರಿಕೆಯಿಂದ ಇರಬೇಕು’ ಎಂದು ಅವರು ಬರೆದುಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
