fbpx
ಸಮಾಚಾರ

ನಿಮಗಿದು ಗೊತ್ತೇ? ಕರ್ನಾಟಕದ ಬಳ್ಳಾರಿ ಜೈಲಿನಲ್ಲಿ 40 ದಿನ ಮುದ್ದೆ ಮುರಿದಿದ್ದರು ಇಂದಿನ ಮಹಾ ಸಿಎಂ ‘ಶಿಂಧೆ’

ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಪ್ರಮಾಣ ವಚನ ಮೊನ್ನೆಯಷ್ಟೇ ಸ್ವೀಕರಿಸಿದ್ದಾರೆ. ಶಿವಸೇನೆ ಬಂಡಾಯ ಶಾಸಕರು ಬಿಜೆಪಿ ಜತೆಗೆ ಸೇರಿ ಸರ್ಕಾರ ರಚನೆ ಮಾಡಿದ್ದಾರೆ. ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ನಿನ್ನೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ಆದರೇ ಮಹಾರಾಷ್ಟ್ರದ ಹೊಸ ಸಿಎಂ ಏಕನಾಥ ಸಿಂಧೆ ಕರ್ನಾಟಕ ಜೈಲಿನಲ್ಲಿ 40 ದಿನ ಕಳೆದಿದ್ದರು, ಜೈಲು ವಾಸದ ಬಳಿಕವೇ ರಾಜಕೀಯಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದರು ಎನ್ನುವ ವಿಚಾರ ಎಷ್ಟು ಜನಕ್ಕೆ ಗೊತ್ತು? ಹೌದು, ಇಂದಿನ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಒಂದು ಕಾಲದಲ್ಲಿ ಕರ್ನಾಟಕದ ಬಳ್ಳಾರಿ ಜೈಲಿನಲ್ಲಿ ಬರೋಬ್ಬರಿ ನಲವತ್ತು ದಿನಗಳ ಕಾಲ ಮುದ್ದೆ ಮುರಿದ್ದರು.. ಮುಂದೆ ಓದಿ

ಬೆಳಗಾವಿಯೂ ಸೇರಿದಂತೆ ಒಟ್ಟು 865 ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು 1980ರಲ್ಲಿ ಮರಾಠಿಗರು ಉಗ್ರವಾದ ಹೋರಾಟ ಆರಂಭಿಸಿದ್ದರು. 1986ರ ಜೂನ್‌ 1ರಂದು ಶಿವಸೇನೆ ಹಾಗೂ ಎಂಇಎಸ್‌ ಕಾರ್ಯಕರ್ತರು ‘ಸೀಮಾ ಲಡಾಯಿ (ಗಡಿ ಸಂಘರ್ಷ)’ ಎಂಬ ಹೆಸರಿಟ್ಟುಕೊಂಡು ಕಳ್ಳದಾರಿಯ ಮೂಲಕ ಬೆಳಗಾವಿಗೆ ನುಗ್ಗಿ ದಾಂದಲೆ ನಡೆಸಿದ್ದರು. ಹೀಗೆ ಬಂದವರ ಗುಂಪಿನ ನೇತೃತ್ವ ವಹಿಸಿದ್ದವರೇ ಏಕನಾಥ ಶಿಂಧೆ.

ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಹಿಂಸಾಚಾರ ತಡೆಯಲು ಗೋಲಿಬಾರ್‌ಗೆ ಕರೆ ನೀಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿದ್ದ ಕೆ. ನಾರಾಯಣ್ ನೇತೃತ್ವದಲ್ಲಿ ಗೋಲಿಬಾರ್ ನಡೆದಿತ್ತು. 9 ಮರಾಠಿಗರು ಸ್ಥಳದಲ್ಲೇ ಮೃತಪಟ್ಟಿದ್ದರು. ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಏಕನಾಥ್ ಶಿಂಧೆ ಬಂಧಿಸಲಾಗಿತ್ತು.

ಈ ಹೋರಾಟದಲ್ಲಿ ಸಕ್ರಿಯರಾಗಿದ್ದ ಏಕನಾಥ ಶಿಂಧೆ ಬೆಳಗಾವಿಯಲ್ಲಿ ಬಂಧನಕ್ಕೆ ಒಳಗಾಗಿದ್ದರು, ಬಳಿಕ ಇವರನ್ನು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿತ್ತು. ಬಳ್ಳಾರಿ ಜೈಲಿನಲ್ಲಿ 40 ದಿನ ಕಳೆದಿದ್ದರು. 40 ದಿನ ಜೈಲುವಾಸದ ನಂತರ ಏಕನಾಥ ಜಾಮೀನು ಪಡೆದು ಹೊರಬಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top