fbpx
ಸಮಾಚಾರ

“ರಾ ರಾ ರಕ್ಕಮ್ಮ” ಹಾಡಿನ ಬಳಿಕ ಇಂದು ವಿಕ್ರಾಂತ್ ರೋಣ ಸಿನಿಮಾದ ಮತ್ತೊಂದು ಹಾಡು ರಿಲೀಸ್!

ನಟ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಈಗಾಗಲೇ ಅಭಿಮಾನಿಗಳಲ್ಲಿ ಸಕತ್ ಕ್ರೇಜ್ ಹುಟ್ಟಿಸಿದೆ. ಚಿತ್ರದ ಟ್ರೈಲರ್ ಕೂಡ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಇದಕ್ಕಿಂತ ಹೆಚ್ಚು ಕ್ರೇಜ್ ಹುಟ್ಟಿಸಿದ್ದು ಎಂದರೆ ಅದು ರಾ ರಾ ರಕ್ಕಮ್ಮ ಹಾಡು. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿ ವರೆಗೂ ಪ್ರತಿಯೊಬ್ಬರೂ ಈ ಹಾಡಿಗಾಗಿ ಸಿಗ್ನೇಚರ್ ಸ್ಟೆಪ್ ಮಾಡಿ ರಚಿಸಿದರು. ಇದೀಗ ಚಿತ್ರತಂಡದಿಂದು ಮತ್ತೊಂದು ಹಾಡು ಬಿಡುಗಡೆಯಾಗಲಿದ್ದು, ಈ ಹಾಡಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ರಾ ರಾ ರಕ್ಕಮ್ಮ ಹಾಡು ಹಿಟ್ ಆದ ಬೆನ್ನಲ್ಲೇ ಇದೀಗ ಚಿತ್ರ ತಂಡ ಮತ್ತೊಂದು ಹಾಡನ್ನು ಬಿಡುಗಡೆಮಾಡಲು ಸಜ್ಜಾಗಿದೆ. ತಂದೆ ಮತ್ತು ಮಗಳ ಬಾಂಧವ್ಯವನ್ನು ಸಾರುವ ಮತ್ತೊಂದು ಲಿರಿಕಲ್ ಹಾಡನು ಇಂದು ಸಂಜೆ 5.02ಕ್ಕೆ ಕನ್ನಡದಲ್ಲಿ ತೆರೆ ಕಾಣಲಿದೆ.

ಇದಾದ ನಂತರ ಇನ್ನುಳಿದ ಭಾಷೆಗಳಲ್ಲಿ ಅಂದರೆ ಮಲ್ಯಾಳಮ್ ಜುಲೈ 3 , ತೆಲುಗು ಜುಲೈ 4, ಹಿಂದಿ ಜುಲೈ 5 ಮತ್ತು ತಮಿಳ್ ಜುಲೈ 6 ಬಿಡುಗಡೆಯಾಗಲಿದೆ. ತಂದೆ ಮಗಳ ಬಾಂಧವ್ಯವನ್ನು ಸಾರುವ ಈ ಹಾಡನ್ನು ಕೇಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಟ್ರೈಲರ್ ಮೂಲಕ ಸಕತ್ ಕ್ರೇಜ್ ಹುಟ್ಟಿಸಿರುವ ಚಿತ್ರ ತಂಡ ಜುಲೈ 28 ರಂದು ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top